Movie Reviews
ಕೋಲ್ಕತ್ತಾದ ರಸ್ತೆಗಳಲ್ಲೊಂದು ಭಾವನಾತ್ಮಕ ಕಥೆ – ದೇವಕಿ ವಿಮರ್ಶೆ – ರೇಟಿಂಗ್ – 4/5 : PopcornKannada.com

ಚಿತ್ರ: ದೇವಕಿ
ನಿರ್ದೇಶಕ: ಲೋಹಿತ್
ಸಂಗೀತ: ನೋಬಿನ್ ಪೌಲ್
ಸಿನಿಮಾಟೋಗ್ರಫಿ: ವೇಣು
ತಾರಾಗಣ: ಪ್ರಿಯಾಂಕ ಉಪೇಂದ್ರ, ಐಶ್ವರ್ಯಾ, ಕಿಶೋರ್
ರೇಟಿಂಗ್: 4/5.

ಮಮ್ಮಿಮೂಲಕ ತೆರೆ ಮೇಲೆ ಹಾರರ್ ಮ್ಯಾಜಿಕ್ ಮಾಡಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ ಲೋಹಿತ್ ತಮ್ಮ ಎರಡನೇ ಸಿನಿಮಾಗೆ ಭಾವನಾತ್ಮಕ ಕಥೆಯನ್ನು ಆಯ್ದುಕೊಂಡಿದ್ದಾರೆ. ಆಯ್ದುಕೊಂಡ ಕಥೆಗೆ ಅವರು ನ್ಯಾಯ ಸಲ್ಲಿಸಿದ್ದಾರೆ.
ದೇವಕಿ ಕೋಲ್ಕತ್ತದ ಮಧ್ಯಮ ವರ್ಗದ ಮಹಿಳೆ. ತನ್ನ ಮಗಳೊಂದಿಗೆ ಸಂತೋಷದ ಬದುಕು ನಡೆಸುತ್ತಿರುತ್ತಾಳೆ. ಹೀಗಿದ್ದ ಸಮಯದಲ್ಲಿ ಒಂದು ದಿನ ಸಂಜೆ ಆಕೆಯ ಮಗಳು ಕಾಣದೇ ಹೋಗುತ್ತಾಳೆ. ತನ್ನ ಮಗಳನ್ನು ಹುಡುಕುತ್ತಾ ಸಾಗುವ ದೇವಕಿಯ ಕರುಣಾಜನಕ ಕಥೆಯನ್ನು ಥ್ರಿಲ್ಲರ್ ಫಾರ್ಮ್ಯಾಟ್‌ನಲ್ಲಿ ಹೇಳಿದ್ದಾರೆ ಲೋಹಿತ್. ಕಡೆಗೆ ಆ ಮಗು ಸಿಗುತ್ತದಾ, ಇಲ್ಲ ದುರಂತ ಅಂತ್ಯ ಕಾಣುತ್ತಾದ ಎಂಬುದನ್ನು ಅರಿಯಲು ಸಿನಿಮಾಗೆ ಹೋಗಬೇಕು.
ಸಸ್ಪನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಮುಖ್ಯವಾಗಿ ಬೇಕಾಗಿರುವುದು ರೋಚಕತೆ. ಅದು ಈ ಸಿನಿಮಾದಲ್ಲಿ ಹೇರಳವಾಗಿದೆ. ನಿರ್ದೇಶಕ ಲೋಹಿತ್ ಪ್ರತಿ ದೃಶ್ಯವನ್ನು ಸೀಟಿನ ತುದಿಗ ಕೂರುವಂತೆ ಬರೆದುಕೊಂಡು, ಅದನ್ನು ತೆರೆ ಮೇಲೆ ತಂದಿದ್ದಾರೆ. ಅವರ ಈ ಮಾದರಿಯ ಚಿತ್ರಕಥೆಗೆ ಸಿನಿಮಾಟೋಗ್ರಫರ್ ವೇಣು, ಸಂಗೀತ ನಿರ್ದೇಶಕ ನೋಬಿನ್ ಪೌಲ್, ಅಟ್ಮಾಸ್ ಸೌಂಡ್ ಎಂಜಿನಿಯರ್ ಉದಯ್‌ಕುಮಾರ್ ಹೀಗೆ ಎಲ್ಲ ವಿಭಾಗದ ತಂತ್ರಜ್ಞರು ಸಾಥ್ ನೀಡಿದ್ದಾರೆ.

ಇಡೀ ಕೋಲ್ಕತ್ತಾವನ್ನು ವೇಣು ಅದ್ಭುತವಾಗಿ ಕಟ್ಟಿಕೊಟ್ಟಿದ್ದು, ರಾತ್ರಿ ಹೊತ್ತಿನ ಕೋಲ್ಕತ್ತ ಇಷ್ಟೊಂದು ಸುಂದರವಾಗಿರುತ್ತದೆ ಎಂಬುದು ಬಹುಶಃ ಅಲ್ಲಿನ ಜನಕ್ಕೆ ತಿಳಿದಿಲ್ಲವೇನೋ. ಇನ್ನು ನಟನೆ ವಿಚಾರಕ್ಕೆ ಬಂದರೆ ಪ್ರಿಯಾಂಕ ಉಪೇಂದ್ರ ಅವರ ಸಿನಿಮಾ ಕರಿಯರ್‌ಗೆ ಇದು ದೊಡ್ಡ ಗರಿ. ಕಿಶೋರ್ ಎಂದಿನಂತೆ ಕ್ಲಾಸಿಕ್ ಆಗಿ ನಟಿಸಿದ್ದಾರೆ. ಉಪ್ಪಿ ಪುತ್ರಿ ಐಶ್ವರ್ಯಾ ಸಹ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆಯುತ್ತಾರೆ.
ಇನ್ನುಳಿದಂತೆ ಎಲ್ಲ ಕಲಾವಿದರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ದೇವಕಿಯೊಂದಿ ಭಾವನಾತ್ಮಕವಾಗಿ ಬೆಸೆದುಕೊಂಡು ಹೋಗುತ್ತಾರೆ. ಹಾಗಾಗಿ ಮಿಸ್ ಮಾಡದೇ ಈ ಸಿನಿಮಾವನ್ನು ನೋಡಬಹುದು. ಸಣ್ಣ ಪುಟ್ಟ ತಪ್ಪುಗಳಿದ್ದರೂ, ಇದೊಂದು ಕ್ಲಾಸಿಕ್ ಸಿನಿಮಾ ಎನ್ನಬಹುದು.
