Cinema News
‘ಡಾಟರ್ ಆಫ್ ಪಾರ್ವತಮ್ಮ’ಗೆ ಇಂಟಲೆಜಿಂಟ್ ಆಫೀಸರ್‌ಗಳೆ ಸ್ಫೂರ್ತಿ
ಹರಿಪ್ರಿಯಾ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾಗೆ ಬುದ್ದಿವಂತ ಮಹಿಳಾ ಪೊಲೀಸ್ ಅಧಿಕಾರಿಗಳೇ ಸ್ಪೂರ್ತಿ ಎಂದಿದ್ದಾರೆ ಹರಿಪ್ರಿಯಾ.
‘ಈ ಕಥೆಯನ್ನು ನಿರ್ದೇಶಕ ಶಂಖರ್ ನನಗೆ ಬಂದು ಹೇಳಿದಾಗ, ಬಹಳ ಥ್ರಿಲ್ ಆದರೆ ಇದರಲ್ಲಿ ನಾನು ಫೈಟ್ ಮಾಡಿದ್ದೇನೆ, ಬೈಕ್ ಓಡಿಸಿದ್ದೇನೆ, ಬೇರೆ ಬೇರೆ ರೀತಿಯ ಸಾಹಸಗಳನ್ನು ಮಾಡಿದ್ದೇನೆ ಆದರೆ ಅದೆಲ್ಲವೂ ನ್ಯಾಚುರಲ್ ಆಗಿ ಮೂಡಿ ಬಂದಿದೆ. ಯಾವುದೇ ಸುಖಾ ಸುಮ್ಮನೆ ಮಾಸ್ ರೀತಿಯಲ್ಲಿ ಮೂಡಿ ಬಂದಿಲ್ಲ. ಮತ್ತು ಈ ಸಿನಿಮಾದ ಕಥೆಗೆ ಸಾಕಷ್ಟು ಜನ ಮಹಿಳಾ ಬುದ್ಧಿವಂತ ಪೊಲೀಸ್ ಅಧಿಕಾರಿಗಳೇ ಸ್ಪೂರ್ತಿ. ಇದು ನನ್ನ ಕರಿಯರ್‌ನಲ್ಲಿ ಬಹಳ ವಿಶೇಷವಾದ ಸಿನಿಮಾವಾಗುತ್ತದೆ’ ಎನ್ನುತ್ತಾರವರು.
ಶಂಕರ್ ನಿರ್ದೇಶನದ ಈ ಚಿತ್ರ ಇದೇ ಶುಕ್ರವಾರ(ಮೇ.24) ಬಿಡುಗಡೆಯಾಗಲಿದ್ದು, ಸುಮಲತಾ ಅಂಬರೀಷ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಡಾಲಿ ಖ್ಯಾತಿಯ ಧನಂಜಯ ಒಂದು ಹಾಡನ್ನು ಬರೆದಿದ್ದರು.