Cinema News
‘ನನ್ನ ಪ್ರಕಾರ’ ಟ್ರೇಲರ್ ಲಾಂಚ್ ಮಾಡಲಿದ್ದಾರೆ ಬಾಕ್ಸ್ ಆಫೀಸ್ ಸುಲ್ತಾನ್

ಪ್ರಿಯಾಮಣಿ, ಕಿಶೋರ್, ಮಯೂರಿ ನಟನೆಯ ನನ್ನ ಪ್ರಕಾರ ಸಿನಿಮಾದ ಟ್ರೇಲರ್‌ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಂಚ್ ಮಾಡಲಿದ್ದಾರೆ.
ಈಗಾಗಲೇ ಪೋಸ್ಟರ್ , ಸ್ಟಿಲ್ಸ್ ಗಳ ಮೂಲಕ ಗಮನ ಸೆಳೆದಿರುವ ನನ್ನ ಪ್ರಕಾರ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್‌ನ್ನು ಹೊಂದಿದೆ. ಈ ಸಿನಿಮಾವನ್ನು ವಿನಯ್ ಎನ್ನುವವರು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.
ಹೊಸ ನಿರ್ದೇಶಕರನ್ನು ಪ್ರೋತ್ಸಾಹಿಸುವ ಸಲುವಾಗಿ ದರ್ಶನ್ ಆಗಸ್ಟ್ 15ರಂದು ಟ್ರೇಲರ್‌ನ್ನು ಬಿಡುಗಡೆ ಮಾಡಲಿದ್ದಾರೆ. ಒಟ್ಟಿನಲ್ಲಿ ನನ್ನ ಪ್ರಕಾರ ಬಿಡುಗಡೆಗೂ ಮುನ್ನವೇ ಬೇರೆ ಬೇರೆ ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ.


Continue Reading