Cinema News
ಪೋಲ್ಯಾಂಡ್ ಪ್ಲೈಟ್ ಹತ್ತಿದ್ದ ದರ್ಶನ್, ರಚಿತಾ ರಾಮ್: ಕಾರಣ ಏನು ಗೊತ್ತಾ?

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲಿ ನಟ ದರ್ಶನ್ ಹಾಗೂ ರಚಿತಾ ರಾಮ್ ಕೂಡ ಒಂದು. ಈಗಾಗ್ಲೆ ಬುಲ್ ಬುಲ್ ಹಾಗೂ ಅಂಬರೀಶ ಚಿತ್ರದಲ್ಲಿ ಮೋಡಿ ಮಾಡಿದ್ದ ಜೋಡಿ ಇದೀಗ ಕ್ರಾಂತಿಯಲ್ಲಿ ಮತ್ತೆ ಸದ್ದು ಮಾಡೋಕೆ ರೆಡಿಯಾಗಿದೆ. ಇದೇ ಕಾರಣಕ್ಕೆ ಈ ಜೋಡಿ ಹಕ್ಕಿಗಳು ಪೋಲ್ಯಾಂಡ್ ಪ್ಲೈಟ್ ಹತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ಸದ್ದಿಲ್ಲದೆ ಶೂಟಿಂಗ್ ಮಾಡುತ್ತಿರುವ ತಂಡ ಅಭಿಮಾನಿಗಳಿಗೆ ಸಪ್ರೈಸ್ ಕೊಟ್ಟಿದೆ. ಕೊನೆಯ ಹಂತದ ಶೂಟಿಂಗ್ಗಾಗಿ ವಿದೇಶಕ್ಕೆ ಹಾರಿದೆ.
ದರ್ಶನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಅವರ ಪುತ್ರಿ ಪ್ರೈವೆಟ್ ಜೆಟ್ನಲ್ಲಿ ಪಯಣ ಬೆಳೆಸಿದ್ದಾರೆ. ಕೊನೆಯ ಹಂತದ ಚಿತ್ರೀಕರಣಕ್ಕೆ ‘ಕ್ರಾಂತಿ’ ಸಿನಿಮಾ ವಿದೇಶದಲ್ಲಿ ಬೀಡು ಬಿಟ್ಟಿದೆ. ಇವರೊಂದಿಗೆ ನಿರ್ದೇಶಕ ವಿ.ಹರಿಕೃಷ್ಣ ಹಾಗೂ ತಂಡ ಪ್ರತ್ಯೇಕವಾಗಿ ಪಯಣ ಬೆಳೆಸಿದೆ ಎನ್ನಲಾಗಿದೆ.
ಪೋಲ್ಯಾಂಡ್ನಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಅವರ ಸಾಂಗ್ ಶೂಟಿಂಗ್ ಜೊತೆಗೆ ಕೆಲವು ಪೋಷನ್ಗಳನ್ನೂ ಚಿತ್ರೀಕರಣ ಮಾಡಲಾಗುತ್ತದೆಯಂತೆ. ದರ್ಶನ್ ಪ್ರತಿ ಸಿನಿಮಾದಲ್ಲಿಯೂ ಒಂದಲ್ಲ ಒಂದು ಹಾಡನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುತ್ತಾರೆ. ‘ಕ್ರಾಂತಿ’ ಸಿನಿಮಾದ ಹಾಡನ್ನು ಕೂಡ ವಿದೇಶದಲ್ಲಿ ಶೂಟ್ ಮಾಡಲಾಗುತ್ತಿದೆ.
