Connect with us

Cinema News

“ಮಾಯಾಮೃಗ” ದ ಬೆನ್ನೇರಿ ಹೊರಟ ಯತಿರಾಜ್. ಆರಂಭ ಫಲಕ ತೋರಿ ಶುಭ ಕೋರಿದ ಡಾರ್ಲಿಂಗ್ ಕೃಷ್ಣ.

Published

on

ಪತ್ರಕರ್ತನಾಗಿ, ಕಲಾವಿದನಾಗಿ, ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿರುವ ಯತಿರಾಜ್ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ “ಮಾಯಾಮೃಗ” ಚಿತ್ರಕ್ಕೆ ಇತ್ತೀಚೆಗೆ ನಟ ಡಾರ್ಲಿಂಗ್ ಕೃಷ್ಣ ಚಾಲನೆ ನೀಡಿ ಶುಭ ಕೋರಿದರು.

ರಾಮಾಯಣದ ಮಾಯಮೃಗ ಪ್ರಸಂಗ ಎಲ್ಲರಿಗೂ ಗೊತ್ತು. ತನ್ನ ಗಂಡನಿಗಾಗಿ ಅಷ್ಟು ವೈಭೋಗಗಳನ್ನು ತ್ಯಾಗ ಮಾಡಿ ಬಂದ ಮಹಾ ಪತಿವ್ರತೆ ಸೀತಾದೇವಿ. ಕಾಡಿನಲ್ಲಿ “ಮಾಯಾಮೃಗ”ಕ್ಕೆ ಆಸೆಪಟ್ಟಿದ್ದು, ಅದನ್ನು ಬೆನ್ನಟ್ಟಿ ರಾಮ ಹೋಗಿದ್ದು, ಇದರಲ್ಲಿ ಏನೋ ಇದೆ ಎಂದು ಲಕ್ಷ್ಮಣ ಹೇಳಿದ್ದು.ಕೊನೆಗೆ ಅದು ಮಾರೀಚ ಎಂದು ತಿಳಿದ್ದಿದ್ದು, ಈ ವಿಷಯವನ್ನು ಈಗಿನ ಸಂದರ್ಭಕ್ಕೆ ತಕ್ಕ ಹಾಗೆ ಹೊಂದುವಂತೆ ಕಥೆ ಸಿದ್ದ ಮಾಡಿಕೊಂಡಿದ್ದೀನಿ. ಈ ಹಿಂದೆ ಕನ್ನಡ ಸೇರಿದಂತೆ ಇತರ ಭಾಗಗಳಲ್ಲಿ ತೀರ ಅಪರೂಪ ಎನ್ನಬಹುದಾದ ಕೆಲವು ಸಿನಿಮಾಗಳು ಬಂದಿದ್ದವು. ನಾಯಕ ಹಾಗೂ ನಾಯಕಿಯ ವಯಸ್ಸಿನ ಅಂತರವಿರುವ ಸಿನಿಮಾ. ಆ ಪಾತ್ರದ ಬಯಕೆ, ನಿರೀಕ್ಷೆ ಏನು? ನನ್ನ ಪಾತ್ರದ ಬಯಕೆ ನಿರೀಕ್ಷೆ ಏನು? ಕೊನೆಗೆ ಯಾವ ಹಂತ ತಲುಪುತ್ತದೆ ಎಂಬುದೇ ಕಥಾಹಂದರ. ಈ ಯುಗಾದಿ ಕಳೆದ ಮೇಲೆ ಚಿತ್ರೀಕರಣ ಆರಂಭಿಸುತ್ತಿದ್ದೇವೆ. ಜಯಲಕ್ಷ್ಮಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ನನ್ನ ಹಿಂದಿನ ಚಿತ್ರ ‘ಸೀತಮ್ಮನ ಮಗ” ಚಿತ್ರದ ನಾಯಕಿ ಸೋನು ಸಾಗರ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚಾಲನೆ ನೀಡಿದ ಡಾರ್ಲಿಂಗ್ ಕೃಷ್ಣ ಅವರಿಗೆ ತುಂಬು ಹೃದಯದ ವಂದನೆಗಳು ಎಂದರು ನಿರ್ದೇಶಕ- ನಾಯಕ ಯತಿರಾಜ್.

ನನಗೆ ಈ ವೇದಿಕೆ ಲಕ್ಕಿ ಎನ್ನಬಹುದು. ಯತಿರಾಜ್ ಅವರ ನಿರ್ದೇಶನದ ಕಿರುಚಿತ್ರ, ಸೀತಮ್ಮನ ಮಗ ಚಿತ್ರ ಹಾಗೂ ಈಗ ಈ ಚಿತ್ರದ ಪತ್ರಿಕಾಗೋಷ್ಠಿ ಎಲ್ಲವೂ ಇಲ್ಲೇ ನಡೆದಿದೆ. ಈ ಚಿತ್ರದಲ್ಲೂ ಯತಿರಾಜ್ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ ಅವರಿಗೆ ಧನ್ಯವಾದ ಎಂದರು ನಾಯಕಿ ಸೋನು ಸಾಗರ.

ನಾನು ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದೇನೆ. ಸ್ವಲ್ಪ ದಿನ ಆ ಪಾತ್ರ ಮಾಡಬಾರದೆಂದುಕೊಂಡಿದ್ದೀನಿ. ಹಾಗಾಗಿ ಗಡ್ಡ ಬಿಟ್ಟಿದ್ದೀನಿ. ಆದರೆ ಯತಿರಾಜ್‌ ಬಿಡದೇ ನೀವೇ ಮಾಡಿ ಎಂದು ಹೇಳಿದ್ದಾರೆ ಎಂದರು ನಟ ಅರವಿಂದ ರಾವ್.

ವಿ.ಸಿ.ಎನ್ ಮಂಜು ಕಾನ್ಸ್‌ಟೇಬಲ್ ಆಗಿ ರಂಜಿಸಲಿದ್ದಾರೆ.

ನಿರ್ಮಾಪಕಿ ಜಯಲಕ್ಷ್ಮಿ, ಸಂಗೀತ ನಿರ್ದೇಶಕ ವಿನು ಮನಸ್ಸು, ಸಹ ನಿರ್ದೇಶಕ ಶಶಿ ಹಾಗೂ ಚಿತ್ರದಲ್ಲಿ ಅಭಿನಯಿಸಲಿರುವ ಶ್ರೀರಂಗಪಟ್ಟಣದ ಮಂಜು ತಮ್ಮ ಅಭಿಪ್ರಾಯ ಹಂಚಿಕೊಂಡರು.

Spread the love

Continue Reading
Click to comment

Leave a Reply

Your email address will not be published. Required fields are marked *