Cinema News
ಮತ್ತೊಂದು ಮಲಯಾಳಂ ಚಿತ್ರದ ರಿಮೇಕ್ ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್

ಇತ್ತೀಚೆಗಷ್ಟೇ ಮಗಳ ಮದುವೆ ಮುಗಿಸಿದ ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗೆ ‘ರವಿ’ ಎಂದು ಹೆಸರಿಟ್ಟಿದ್ದು, ಅದರ ಮುಹೂರ್ತ ಬುಧವಾರ ಕೊಡಗಿನಲ್ಲಿ ನಡೆದಿದೆ.
ಮಲಯಾಳಂನ ಜೋಸೆಫ್ ಚಿತ್ರದ ರಿಮೇಕ್ ಆಗಿರುವ ಈ ಸಿನಿಮಾವನ್ನು ಅಜಿತ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಕೊಡಗು, ಸಕಲೇಶಪುರ ಕಡೆ ಮಾಡಲಾಗುತ್ತದಂತೆ.
ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ ಜೋಸೆಫ್ ಚಿತ್ರವನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ.

Continue Reading