Cinema News
ಬೆಳ್ಳಿ ಪರದೆ ಮೇಲೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಬದುಕು: ಬಾಲಿವುಡ್ ನಲ್ಲಿ ಮತ್ತೊಂದು ಬಯೋಪಿಕ್

ಬಾಲಿವುಡ್ ಸಿನಿಮಾ ರಂಗದಲ್ಲಿ ಈಗಾಗ್ಲೆ ಸಾಕಷ್ಟು ಬಯೋಪಿಕ್ ಗಳು ಬಂದಿದ್ದು ಸೂಪರ್ ಹಿಟ್ ಆಗಿವೆ, ಬಯೋಪಿಕ್ ಗಳು ಅದೆಷ್ಟೋ ಮಂದಿಗೆ ಸ್ಪೂರ್ತಿಯೂ ಹೌದು. ಇದೀಗ ಕೆಫಿ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ದಾರ್ಥ ಕುರಿತಾಗಿ ಬಯೋಪಿಕ್ ಮಾಡಲು ಸಿದ್ಧತೆ ನಡೆಯುತ್ತಿದೆ.
ಉದ್ಯಮ ಲೋಕದಲ್ಲಿ ಸಿದ್ದಾರ್ಥ ನಡೆದು ಬಂದ ಹಾದಿ ಕೋಟ್ಯಾಂತರ ಜನರಿಗೆ ಮಾದರೆ. ಆದರೆ ಅವರ ಜೀವನ ದುರಂತ ಅಂತ್ಯ ಕಂಡಿದ್ದು ಮಾತ್ರ ನೋವಿನ ಸಂಗತಿ. ಇದೀಗ ಅವರ ಬಯೋಪಿಕ್ ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ.
ವಿ.ಜಿ.ಸಿದ್ದಾರ್ಥ ಜೀವನದ ಕುರಿತು ‘ಕಾಫಿ ಕಿಂಗ್’ ಹೆಸರಿನಲ್ಲಿ ಪುಸ್ತಕ ಸಿದ್ಧವಾಗುತ್ತಿದೆ. ಈ ಪುಸ್ತಕದ ವಿವರಗಳನ್ನು ಆಧಾರವಾಗಿ ಇಟ್ಟುಕೋಮಡು ಸಿನಿಮಾ ಮಾಡಲು ಪ್ಲ್ಯಾನ್ ನಡೆಯುತ್ತಿದೆ. ಟಿ-ಸಿರೀಸ್ ಹಾಗೂ ಆಲ್ ಮೈಟಿ ಮೋಷನ್ ಪಿಕ್ಚರ್ ಸಂಸ್ಥೆಗಳು ಸಿದ್ದಾರ್ಥ್ ಜೀವನ ಕಥೆಗೆ ಬಂಡವಾಳ ಹೂಡಲಿವೆ. ಜೊತೆಗೆ ಕರ್ಮ ಮೀಡಿಯಾ ಎಂಟರ್ ಟೇನ್ ಮೆಂಟ್ ಕೂಡ ಇವರ ಜೊತೆ ಕೈ ಜೋಡಿಸುತ್ತಿದೆ. ಈ ಕುರಿತು ಟಿ-ಸಿರೀಸ್ ಸಂಸ್ಥೆಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತ ಮಾಹಿತಿ ಹೊರ ಬಿದ್ದಿದೆ.
ಸಾಕಷ್ಟು ಅಧ್ಯಯನ ನಡೆಸಿ ಕಾಫಿ ಕಿಂಗ್ ಪುಸ್ತಕವನ್ನು ಬರೆಯಲಾಗಿದೆ. ಮಹಾನ್ ಉದ್ಯಮಿ ಸಿದ್ದಾರ್ಥ ಬದುಕಿನ ಬಗ್ಗೆ ಗೊತ್ತಿರದ ಅನೇಕ ವಿಚಾರಳನ್ನು ಈ ಪುಸ್ತಕ ಒಳಗೊಂಡಿದೆ ಎಂದು ನಿರ್ಮಾಪಕ ಪ್ರಭಲೀನ್ ಕೌರ್ ಸಂಧು ಹೇಳಿದ್ದಾರೆ. ಆದರೆ ಸಿನಿಮಾದಲ್ಲಿ ಸಿದ್ದಾರ್ಥ ಪಾತ್ರವನ್ನ ಯಾರು ಮಾಡಲಿದ್ದಾರೆ ಅನ್ನೋ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.
