Connect with us

Cinema News

ಸಿನಿಪ್ರಿಯರಿಗೆ ಪ್ರಿಯವಾಗಲಿದೆ “ಸಿನಿಬಜಾರ್” ಇದು ನಿರ್ಮಾಪಕರ ಸ್ನೇಹಿಯೂ ಹೌದು.

Published

on

ಇದು ಆಧುನಿಕ ಯುಗ. ಹೊಸ ತಂತ್ರಜ್ಞಾನ ದಿನದಿನಕ್ಕೂ ಅಭಿವೃದ್ಧಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಶೇಷ ಸೌಲಭ್ಯವುಳ್ಳ ” ಸಿನಿಬಜಾರ್ ” ಆಪ್ ಬಿಡುಗಡೆಯಾಗಿದೆ.

ಹಲವು ವರ್ಷಗಳಿಂದ ಆನ್ ಲೈನ್ ನಲ್ಲಿ ಪರಿಣಿತಿ ಪಡೆದಿರುವ ಆನ್ ಲೈನ್ ಭಾಸ್ಕರ್ ಎಂದೇ ಖ್ಯಾತರಾಗಿರುವ ಭಾಸ್ಕರ್ ವೆಂಕಟೇಶ್ ಹಾಗು ನಿರ್ಮಾಪಕ, ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರ ಸಾರಥ್ಯದಲ್ಲಿ ಈ ಆಪ್ ಹೊರಬಂದಿದೆ.

ಈ ಆಪ್ ನಲ್ಲಿ ಸಿನಿಮಾ ವೀಕ್ಷಣೆಗೆ ತಗಲುವ ವೆಚ್ಚ ಕೇವಲ ಇಪ್ಪತ್ತೈದರಿಂದ ಮೂವತ್ತು ರೂಪಾಯಿ. 24 ಗಂಟೆಗಳ ಅವಧಿಯಿರುತ್ತದೆ. ಅಷ್ಟರೊಳಗೆ ಎಷ್ಟು ಸಿನಿಮಾ ಬೇಕಾದರೂ ನೋಡಬಹುದು. ಈ ಸಿನಿಮಾವನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬ ಮಾಹಿತಿ ಕೂಡ ನಿರ್ಮಾಪಕರಿಗೆ ತಿಳಿಯಲಿದೆ. ಪೈರಸಿ ತಡೆಗಟ್ಟುವ ಕಡೆಗೂ ಗಮನ ಹರಸಲಾಗಿದೆ. ಧ್ವನಿಯಿಂದ ಹಿಡಿದು, ಸ್ಕ್ರೀನಿಂಗ್ ‌ತನಕ ಎಲ್ಲಾ ಉತ್ತಮ ಗುಣಮಟ್ಟದಾಗಿರುತ್ತದೆ.‌ ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳು ಈಗಾಗಲೇ ಈ ಆಪ್ ನಲ್ಲಿದೆ. ಈ ಆಪ್ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಲು ಇಚ್ಛಿಸುವವರು ನಮ್ಮ ತಂಡವನ್ನು ಸಂಪರ್ಕಿಸಬಹುದು‌. ಒಟ್ಟಿನಲ್ಲಿ ಕನ್ನಡ ನಿರ್ಮಾಪಕರಿಗೆ ಒಳಿತಾಗಲಿ ಎಂಬುದೇ ನಮ್ಮ ಆಶಯ ಎಂದರು ಭಾಸ್ಕರ್ ವೆಂಕಟೇಶ್.

ಭಾಸ್ಕರ್ ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದಾಗ ಇದರಿಂದ ನಿರ್ಮಾಪಕರಿಗೆ ಹಾಗೂ ನೋಡುಗರಿಗೆ ಅನುಕೂಲವಿದೆ ಎಂದು ತಿಳಿಯಿತು. ನಾನು ಭಾಸ್ಕರ್ ಅವರ ಜೊತೆ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದೇನೆ ಎಂದರು ಉಮೇಶ್ ಬಣಕಾರ್.

ಆಪ್ ಹೇಗೆ ಬಳಸಿಕೊಳ್ಳುವುದು? ಎಂಬುದರ ಮಾಹಿತಿಯನ್ನು ಆಪ್ ಡೆವಲಪರ್ ಸುಧಾಕರ್ ನೀಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಟ ಶ್ರೀನಗರ ಕಿಟ್ಟಿ, ನಿರ್ದೇಶಕರಾದ ರವಿಶ್ರೀವತ್ಸ, ಗಿರಿರಾಜ್ “ಸಿನಿಬಜಾರ್” ಓಟಿಟಿಯನ್ನು ಬಿಡುಗಡೆ ಮಾಡಿ , ತಂಡಕ್ಕೆ ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಶುಭ ಕೋರಿದರು

Spread the love

Continue Reading
Click to comment

Leave a Reply

Your email address will not be published. Required fields are marked *