Cinema News
ಹಿರೋ ಆಗಿ ಲಾಂಚ್ ಆದ ಹಾಸ್ಯನಟ ಚಿಕ್ಕಣ್ಣ: ಉಪಾಧ್ಯಕ್ಷನಾದ ಕಾಮಿಡಿ ಕಿಂಗ್

ಕನ್ನಡದ ಖ್ಯಾತ ಹಾಸ್ಯ ನಟರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ನಟರ ಜೊತೆ ಚಿಕ್ಕಣ್ಣ ತೆರೆ ಹಂಚಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಕೂಡ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಶರಣ್ ಹೀರೋ ಆಗಿ ಲಾಂಚ್ ಆಗಿದ್ದಾರೆ.
ಈ ಹಿಂದೆ ಶರಣ್ ಹಾಗೂ ಚಿಕ್ಕಣ್ಣ ನಟನೆಯ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿಮಾದಲ್ಲಿ ಶರಣ್ ಉಪಾಧ್ಯಕ್ಷನಾಗಿ ಕಾಣಿಸಿಕೊಂಡಿದ್ರು. ಇದೀಗ ಅಧ್ಯಕ್ಷ ಸಿನಿಮಾದ ಮುಂದುವರೆದ ಭಾಗ ಮಾಡ್ತಿದ್ದು ಚಿತ್ರಕ್ಕೆ ಉಪಾಧ್ಯಕ್ಷ ಎಂದು ಟೈಟಲ್ ಇಡಲಾಗಿದೆ.

ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಗೆ ಮದುವೆ ಆಗುತ್ತದೆ. ಆನಂತರ ನಡೆಯುವ ಕಥೆಯೇ ಉಪಾಧ್ಯಕ್ಷ ಸಿನಿಮಾವಂತೆ. ಹಾಗಾಗಿ ಈ ಸಿನಿಮಾದಲ್ಲಿ ಕೇವಲ ಚಿಕ್ಕಣ್ಣ ಮಾತ್ರ ಇರಲಿದ್ದಾರಂತೆ.
ಇಂದಿನಿಂದ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಚಂದ್ರಮೋಹನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಉಮಾಪತಿ ಸಿನಿಮಾಗೆ ಬಂಡವಾಳ ಹೂಡ್ತಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಈ ಮೊದಲೇ ಸಿನಿಮಾದ ಶೂಟಿಂಗ್ ನಡೆಯಬೇಕಿತ್ತು. ಕೊರೊನಾ ಕಾರಣದಿಂದಾಗಿ ತಡವಾಗಿದ್ದು ಇಂದಿನಿಂದ ಶೂಟಿಂಗ್ ಆರಂಭವಾಗಿದೆ. ಮೊದಲ ಹಂತದ ಶೂಟಿಂಗ್ ಮೈಸೂರು ಸುತ್ತಮುತ್ತ ನಡೆಯಲಿದೆ.
