Cinema News
ಬಬ್ರೂಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್
ಬೆಳದಿಂಗಳ ಬಾಲೆ, ಹೂಮಳೆಯ ಚೆಲುವೆ ನಟನೆಯ ಬಬ್ರೂ ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗಲಿದ್ದು, ಅದರ ಟ್ರೇಲರ್‌ನ್ನು ದರ್ಶನ್ ಬಿಡುಗಡೆ ಮಾಡಿದ್ದಾರೆ.
ಪ್ರಯಾಣದ ಕಥೆಯನ್ನು ಹೊಂದಿರುವ ಈ ಸಿನಿಮಾದ ಟ್ರೇಲರ್ ಈಗಾಗಲೇ ಸಿಕ್ಕಾಪಟ್ಟೆ ಹಿಟ್ ಆಗಿದೆ. ಈ ಮೊದಲು ನಟ ಯಶ್ ಒಂದು ಟ್ರೇಲರ್‌ನ್ನು ರಿಲೀಸ್ ಮಾಡಿದ್ದರು. ಈಗ ಎರಡನೇಯದ್ದನ್ನು ದರ್ಶನ್ ಬಿಡುಗಡೆ ಮಾಡಿದ್ದಾರೆ. ಅಲ್ಲಿಗೆ ಚಿತ್ರಕ್ಕೆ ಜೊಡೆತ್ತುಗಳ ಸಾಥ್ ಸಿಕ್ಕಿದೆ. ಒಂದು ಪ್ರಯಾಣದಲ್ಲಿ ಲವ್, ಸಸ್ಪೆನ್ಸ್, ಕ್ರೈಂ ಎಲ್ಲವೂ ಬರುತ್ತದೆ. ಇಡೀ ಸಿನಿಮಾ ಅಮೇರಿಕಾದಲ್ಲಿ ಚಿತ್ರೀಕರಣಗೊಂಡಿದೆ.
ಸುಜಯ್ ರಾಮಯ್ಯ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸುಮುಖ್ ಹಾಗೂ ಸುಜಯ್ ರಾಮಯ್ಯ ಅವರ ಛಾಯಾಗ್ರಹಣ, ಬಿಂದು ಮಾಧವ ಸಂಕಲನ ಈ ಚಿತ್ರಕ್ಕಿದೆ. ವರುಣ್ ಶಾಸ್ತ್ರಿ ಅವರು ಸಂಭಾಷಣೆ ಬರೆದಿದ್ದಾರೆ.
ಸುಮನ್ ನಗರಕರ್, ಮಾಹಿ ಹಿರೇಮಠ್, ರೇತೊಸ್ತಾಡೊ, ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ