Cinema News
ಟೀಸರ್ಗೆ ಒಂದು ಟೀಸರ್

ಸಾಮಾನ್ಯವಾಗಿ ಸಿನಿಮಾ ಬಿಡುಗಡೆ ಮಾಡುವ ಮೊದಲ ಟೀಸರ್, ಟ್ರೇಲರ್ ಬಿಡುಗಡೆ ಮಾಡುತ್ತಾರೆ, ಆದರೆ ನೀನಾಸಂ ಸತೀಶ್ ನಟನೆಯ ಬ್ರಹ್ಮಚಾರಿ ಚಿತ್ರತಂಡ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಟೀಸರ್ ಬಿಡುಗಡೆಗೆ ಒಂದು ಟೀಸರ್ನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ.
ಜೂನ್ 20ಕ್ಕೆ ನೀನಾಸಂ ಸತೀಶ್ ಅವರ ಹುಟ್ಟು ಹಬ್ಬವಿದೆ, ಅಂದು ಬ್ರಹ್ಮಚಾರಿ ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಅದಕ್ಕಿಂತ ಮುಂಚೆ ಆ ಟೀಸರ್ನಲ್ಲಿ ಏನಿರಲಿದೆ ಎಂಬುದನ್ನು ತಿಳಿಸಲು ಮತ್ತೊಂದು ಟೀಸರ್ನ್ನು ಜೂನ್ 10ಕ್ಕೆ ಬಿಡುಗಡೆ ಮಾಡಲಿದೆ ಚಿತ್ರತಂಡ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ಬ್ರಹ್ಮಚಾರಿ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ.


Continue Reading