Connect with us

Cinema News

ಜೋಶ್ ಜವಾನಿ ಎಂದು ಕಂಠ ಕುಣಿಸಿದ ಬಾಲಿವುಡ್ ಪವರ್ ಹೌಸ್…’ಪೀಟರ್’ ಹಾಡಿಗೆ ಅಜಯ್ ಗೋಗವಾಲೆ ಧ್ವನಿ

Published

on

ಪೀಟರ್ ಸಿನಿಮಾ ಟೀಸರ್ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿದೆ. ಇದೀಗ ಚಿತ್ರತಂಡ ಜೋಶ್ ಜವಾನಿ ಎಂಬ ಮತ್ತೊಂದು ಸಿಂಗಿಂಗ್ ಮಸ್ತಿಯನ್ನು ಅನಾವರಣಗೊಳಿಸಿದೆ. ಬಾಲಿವುಡ್ ಪವರ್ ಹೌಸ್ ಎನಿಸಿಕೊಂಡಿರುವ, ಪ್ರಭಾಸ್ ನಟನೆಯ ಆದಿ ಪುರುಷ್, ಅಮೀರ್ ಖಾನ್ ನಟನೆಯ ಪೀ ಕೆ , ಶಾರುಖ್ ನಟನೆಯ ಝೀರೋ ಮತ್ತು ಹಲವಾರು ದಿಗ್ಗಜರ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿ ಹಾಡಿರುವ ಅಜಯ್ ಗೋಗವಾಲೆ ಈ ಹಾಡಿಗೆ ಕಂಠ ಕುಣಿಸಿದ್ದಾರೆ.

ಪಕ್ಕ ಫಾಸ್ಟ್ ಬೀಟ್ ಸಾಂಗ್ ಆಗಿರುವ ಜೋಶ್ ಜವಾನಿ ಹಾಡು ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಿದೆ. ಕನ್ನಡ ವರ್ಷನ್ ಹಾಡಿಗೆ ಅಜಯ್ ಗೋಗವಾಲೆ ಧ್ವನಿಯಾದ್ರೆ, ಅಭಿಷೇಕ್ ತಮಿಳು, ಅನ್ವರ್ ಸಾಧದ್ ಮಲಯಾಳಂ ಹಾಗೂ ತೆಲುಗು ವರ್ಷನ್ ಹಾಡನ್ನು ರಿತ್ವಿಕ್‌ ಮುರುಳೀಧರ್‌ ಹಾಡಿದ್ದಾರೆ.

ದೂರದರ್ಶನ ಸಿನಿಮಾ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಮಡಿಕೇರಿಯ ಭಾಗಮಂಡಲದಲ್ಲಿ ನಡೆದ ಸ್ಥಳೀಯ ಕಥೆಯನ್ನು ಹದವಾಗಿ ಹೆಣೆದಿದ್ದಾರೆ. ಅದಕ್ಕೆ ಬೇಕಾದ ರೀತಿ ಸೆಟ್, ಪ್ರಾಪರ್ಟಿ ಜೊತೆಗೆ ಅಧ್ಯಯನ ನಡೆಸಿಯೇ ಚಿತ್ರವನ್ನು ರೂಪಿಸಲಾಗಿದೆ.

ಸುಕೇಶ್ ಅವರು ಹೇಳುವಂತೆ ಪೀಟರ್ ಸಿನಿಮಾದ ಪ್ರತಿ ಪಾತ್ರ ಮನುಷ್ಯನಿಗೆ ಕನೆಟ್ಟ್ ಆಗುತ್ತದೆ. ಪ್ರೇಕ್ಷಕರನ್ನು ಎಂಗೇಜ್ ಆಗಿ ಕೂರಿಸುವಂತ ಸ್ಕ್ರೀನ್ ಪ್ಲೇ, ಸೌಂಡ್ ಡಿಸೈನ್, ವಿಷ್ಯುವಲ್ ಕ್ವಾಲಿಟಿ, ಕಥೆ ಮೇಕಿಂಗ್ ಎಲ್ಲವೂ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ಮಳೆ, ಮಂಜು, ಹಚ್ಚ ಹಸಿರಿನ ನಡುವೆ ನಡೆಯೋ ರೋಚಕ ಕಥೆ ಯನ್ನ ಚಿತ್ರಮಂದಿರದಲ್ಲಿ ಕೂತು ಅನುಭವಿಸಬೇಕು ಅನ್ನೋದು ವಿಶೇಷ.

ಥಿಂಕ್ ಮ್ಯೂಸಿಕ್ ಆಡಿಯೋ ಹಕ್ಕು ಖರೀದಿಸಿರುವ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿ ಕೂಡ ಪೀಟರ್ ಚಿತ್ರಕ್ಕಿದೆ. ಸಸ್ಪೆನ್ಸ್ ಡ್ರಾಮಾ ಕಥಾ ಹಂದರ ಹೊಂದಿರುವ ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪೀಟರ್ ಸಿನಿಮಾದಲ್ಲಿ ರಾಜೇಶ್ ಧ್ರುವ, ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ,ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್ ತಾರಾಬಳಗದಲ್ಲಿದ್ದಾರೆ.

ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಇನ್ನೂ ಎರಡು ವಾರದಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *