Cinema News
ಬಿಗ್‌ಬಿ ಫೋಟೋ ವೈರಲ್

ಅಮಿತಾಬ್ ಬಚ್ಚನ್ ವಯಸ್ಸಾದಂತೆ ಹೊಸ ರೀತಿಯ ಪಾತ್ರಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಲುಕ್‌ಗಳನ್ನು ಸಹ ಬದಲಾಯಿಸಿಕೊಳ್ಳುತ್ತಿದ್ದು, ಈಗ ‘ಗುಲಾಬೋ ಸಿತಾಬೋ’ ಚಿತ್ರದಲ್ಲಿ ಉದ್ದ ಮೂಗು, ದೊಡ್ಡ ಕನ್ನಡಕ, ಗಡ್ಡ ಹೀಗೆ ಡಿಫ್ರೆಂಟ್ ಲುಕ್‌ನಲ್ಲಿ ಕಾಣಿಸುತ್ತಿದ್ಧಾರೆ.
ಈ ಸಿನಿಮಾವನ್ನು ಪೀಕು ಖ್ಯಾತಿಯ ಶೂಜಿತ್ ಸರ್ಕಾರ್ ನಿರ್ದೇಶನ ಮಾಡುತ್ತಿದ್ದಾರೆ. ಹಣ್ಣು ಹಣ್ಣು ಮುದಕನ ರೋಲ್‌ನಲ್ಲಿರುವ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಗ್‌ಬಿ ಅಭಿಮಾನಿಗಳು ಅವರ ಲುಕ್‌ಗೆ ಫಿದಾ ಆಗಿದ್ದಾರೆ.
ಈ ಹಿಂದೆ ಪೀಕು ಚಿತ್ರದಲ್ಲಿಯೂ ಅಮಿತಾಬ್ ಡಿಫ್ರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು, ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಈ ಜೋಡಿ ಮತ್ತೆ ಒಂದಾಗಿರುವುದು ಮತ್ತು ಅಮಿತಾಬ್ ಅವರ ಡಿಫ್ರೆಂಟ್ ಲುಕ್ ಎಲ್ಲವೂ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.
ಇನ್ನು ಈ ಚಿತ್ರದಲ್ಲಿ ಅಂಧಾದುನ್ ಖ್ಯಾತಿಯ ಆಯುಷ್ಮಾನ್ ಖುರಾನ ಸಹ ನಟಿಸುತ್ತಿದ್ದಾರೆ.

Continue Reading