Connect with us

Cinema News

“ಮೂರು ಕಾಸಿನ ಕುದುರೆ” ಬಿಡುಗಡೆಗೂ ಮುನ್ನ. ಓಟಿಟಿಗೆ

Published

on

ಈಗಿನ‌ ಕಾಲದಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡೋದು ಎಷ್ಟು ಕಷ್ಟವೋ ಅದಕ್ಕಿಂತ ಕಷ್ಟಕರವಾದ್ದು ಅದನ್ನು ರಿಲೀಸ್ ಮಾಡಿ ಜನರಿಗೆ ತಲುಪಿಸೋದು. ಹೀಗೇ ಅದೆಷ್ಟೋ ಚಿತ್ರತಂಡಗಳು ಸಿನಿಮಾ ನಿರ್ಮಿಸಿದ್ದರೂ ರಿಲೀಸ್ ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಅದೇರೀತಿ ಕರ್ತೃ ಗಿರೀಶ್ ಎಂಬ ಯುವಪ್ರತಿಭೆಯ ನಿರ್ದೇಶನದ ಚಿತ್ರ ಮೂರು ಕಾಸಿನಕುದುರೆ ರೆಡಿಯಾಗಿ ೨ ವರ್ಷವಾದರೂ ವಿತರಕರು ಸಿಗದೆ ರಿಲೀಸ್ ಮಾಡಲಾಗಿಲ್ಲ.

ಆದರೆ ಅಮೆಜಾನ್ ಪ್ರೈಂ ಸಂಸ್ಥೆಯವರು ಚಿತ್ರವನ್ನು ನೋಡಿ ಕಂಟೆಂಟ್ ಇಷ್ಟಪಟ್ಟು ತಂಡದ ಜತೆ ಕೈಜೋಡಿಸಿದ್ದಾರೆ. ಕಳೆದ ವಾರವಷ್ಟೇ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮೂರು ಕಾಸಿನ ಕುದುರೆ ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಇಂಥ ಉತ್ತಮ ಚಿತ್ರವನ್ನು ಥೇಟರ್ ನಲ್ಲಿ ರಿಲೀಸ್ ಮಾಡಿ ಎಂದು ಗಿರೀಶ್ ಅವರಿಗೆ ಒತ್ತಾಯಿಸುತ್ತಿದ್ದಾರೆ. ಇದೆಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳಲು ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಗಿತ್ತು.

ಇದೊಂದು ಸೋಷಿಯಲ್ ಡ್ರಾಮಾ ಆಗಿದ್ದು, ಚಿತ್ರದ 3 ಪ್ರಮುಖ ಪಾತ್ರಗಳಲ್ಲಿ ಪೂರ್ಣಚಂದ್ರ ಮೈಸೂರು, ಸನಾತನಿ ಹಾಗೂ ಗೋವಿಂದೇಗೌಡ ಕಾಣಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಗಿರೀಶ್ ಎಸ್.ಗೌಡ್ರು ಬರೆದಿದ್ದು, ಪ್ರದೀಪ್ ಗಾಂಧಿ ಅವರ ಛಾಯಾಗ್ರಹಣ, ಆನಂದರಾಜಾ ವಿಕ್ರಮ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಗಿರೀಶ್, ನಾನು ಥೇಟರ್ ಹಿನ್ನೆಲೆಯಿಂದ ಬಂದವನು. ಸಾಕಷ್ಟು ಸೀರಿಯಲ್, ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ನಾನು ಗಿರೀಶ್ ಗೌಡ್ರು ಜತೆಗೂಡಿ ಈ ಚಿತ್ರ ಮಾಡಿದೆವು. ಇದೊಂದು ಕಿಡ್ನಾಪ್ ಡ್ರಾಮಾ ಆಗಿದ್ದು 3 ಜನರ ಮೇಲೆ ನಡೆಯುವ ಕಥೆ. ಒಬ್ಬ ಆರ್ಟಿಸ್ಟ್, ಮತ್ತೊಬ್ಬ ಕ್ಯಾಬ್ ಡ್ರೈವರ್, ಮಿಡಲ್ ಕ್ಲಾಸ್ ನಿಂದ ಬಂದ ಈ ಯುವಕರು ತಮ್ಮ ಕನಸನ್ನು ಈಡೇರಿಸಿಕೊಳ್ಳುಲು ಹೋಗಿ ಏನೆಲ್ಲ ಎದುರಿಸುತ್ತಾರೆ, ಇಷ್ಟವಿಲ್ಲದ ಹುಡುಗನನ್ನು ಮದುವೆಯಾಗದೆ ಮನೆಬಿಟ್ಟು ಬಂದ ಯುವತಿ, ಒಂದೊಂದು ಸನ್ನಿವೇಶಗಳಲ್ಲಿರುವ ಈ ಮೂರೂ ಪಾತ್ರಗಳು ಒಂದೆಡೆ ಸೇರಿದ ನಂತರ ಏನೇನಾಗುತ್ತದೆ. ಆ ಯುವತಿಯ ಜರ್ನಿಯೂ ಇವರ ಜತೆ ಸಾಗುತ್ತದೆ. ಈ ಮೂವರೂ ಒಂದೇ ಕ್ಯಾಬ್ ನಲ್ಲಿ ಜತೆಯಾಗುತ್ತಾರೆ. ಮೂರು ಭಾಗಗಳಲ್ಲಿ ಈ ಕಥೆ ನಡೆಯುತ್ತದೆ. ಇದು ಎರಡನೇ ಭಾಗ. ಹಿಂದೆ ನಡೆದಿರುವುದು, ಮುಂದೆ ನಡೆಯುವುದರ ಬಗ್ಗೆ ಸೂಚನೆ ಕೊಟ್ಟಿದ್ದೇವೆ ಎಂದು ವಿವರಿಸಿದರು. ನಾಯಕ ಪೂರ್ಣಚಂದ್ರ ಮಾತನಾಡಿ ಕಲಾವಿದನಾಗಬೇಕೆಂದು ಹೊರಟ ನಾನು ದುಡ್ಡನ್ನು ಹೊಂದಿಸಿಕೊಳ್ಳಲು ಹೇಗೆಲ್ಲ ಕಷ್ಟಪಡುತ್ತೇನೆ ಎಂದು ಚಿತ್ರದಲ್ಲಿ ಹೇಳಲಾಗಿದೆ ಎಂದರು. ನಾಯಕಿ ಸನಾತನಿ ಮಾತನಾಡಿ ಹಿಂದೆ ಹೋಮ್ಲಿ ಪಾತ್ರಗಳನ್ನೇ ಮಾಡಿದ್ದ ನಾನು ಇದರಲ್ಲಿ ಮಾಡ್ರನ್ ಆಗಿ ಕಾಣಿಸಿಕೊಂಡುದ್ದೇನೆ ಎಂದರು. ಗೋವಿಂದೇಗೌಡ (ಜೀಜಿ)ಮಾತನಾಡಿ ಕ್ಯಾಬ್ ಡ್ರೈವರ್, ಇಡೀ ಸಿನಿಮಾ ನನ್ನ ಪಾತ್ರ ಕ್ಯಾರಿ ಆಗುತ್ತೆ‌ ಎಂದರು.

Spread the love

Continue Reading
Click to comment

Leave a Reply

Your email address will not be published. Required fields are marked *