Cinema News
ಟೀಸರ್ ನಲ್ಲೇ ಸರ್ಕಾರಕ್ಕೆ ಟಾಂಗ್ ಕೊಟ್ಟ ನಟ ಬಾಲಕೃಷ್ಣ

ಟಾಲಿವುಡ್ ಸೂಪರ್ ಸ್ಟಾರ್ ಬಾಲಕೃಷ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಬಾಲಕೃಷ್ಣ ನಟನೆಯ 107ನೇ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಬಾಲಕೃಷ್ಣರ 107ನೇ ಸಿನಿಮಾದ ಮಾಸ್ ಟೀಸರ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸದ್ಯ ಟೀಸರ್ ನಲ್ಲಿ ಬಾಲಕೃಷ್ಣ ಹೇಳಿರೋ ಡೈಲಾಗ್ ಟಾಲಿವುಡ್ ನಲ್ಲಿ ದೊಡ್ಡ ಸದ್ದು ಮಾಡ್ತಿದೆ.
ಗೋಪಿಚಂದ್ ಮಲಿನೇನಿ ನಿರ್ದೇಶನದ, ಬಾಲಕೃಷ್ಣ ನಟನೆಯ 107ನೇ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಟೀಸರ್ ನಲ್ಲಿ ಬಾಲಕೃಷ್ಣ ಪೇಪರ್ ಅಂಡ್ ಸಾಲ್ಟ್ ಪೇಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ನಲ್ಲಿ ಸರಕಾರಕ್ಕೆ ಟಾಂಗ್ ಕೊಟ್ಟಿದ್ದು, ಈ ಡೈಲಾಗ್ ಭಾರೀ ಸದ್ದು ಮಾಡುತ್ತಿದೆ.
ಟೀಸರ್ ನಲ್ಲಿ ಬಾಲಕೃಷ್ಣ ‘ನಿಮಗೆಲ್ಲ ಗೌರ್ಮೆಂಟ್ ಆರ್ಡರ್.. ನನಗೆ ದೇವರ ಆರ್ಡರ್’ ಎಂದು ಹೇಳುವ ಡೈಲಾಗ್ ಇದೀಗ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದ್ದು, ಇದು ನಿಜವಾಗಿಯೂ ಬಾಲಯ್ಯ ಸರಕಾರಕ್ಕೆ ಕೊಟ್ಟಿರುವ ಟಾಂಗ್? ಎನ್ನುವ ಪ್ರಶ್ನೆಯನ್ನೂ ಅದು ಹುಟ್ಟು ಹಾಕಿದೆ. ಅಲ್ಲದೇ, ಅವರು ಯಾಕೆ ಸರಕಾರಕ್ಕೆ ಈ ರೀತಿ ಟಾಂಗ್ ಕೊಟ್ಟರು ಎನ್ನುವ ಚರ್ಚೆಯನ್ನೂ ಅದು ಹುಟ್ಟು ಹಾಕಿದೆ. ಟೀಸರ್ ಸದ್ಯ ಯುಟ್ಯೂಬ್ ನಲ್ಲಿ ಟ್ರೈಂಡಿಂಗ್ ನಲ್ಲಿದ್ದು ರಿಲೀಸ್ ಆದ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
