Cinema News
ಸಂಜನಾ ಗಲ್ರಾನಿ ಮಗುವಿನ ನಾಮಕರಣ: ವಿಡಿಯೋ ಹಂಚಿಕೊಂಡ ನಟಿ

ಸ್ಯಾಂಡಲ್ವುಡ್ ನಟಿ ಸಂಜನಾ ಮನೆಗೆ ಹೊಸ ಅತಿಥಿಯ ಆಗಮನದಿಂದ ಮತ್ತಷ್ಟು ಕಳೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಸಂಜನಾ ತಮ್ಮ ಮಗುವಿನ ಜೊತೆ ಕಳೆಯುತ್ತಿರುವ ಸಮಯದ ಫೋಟೋಗಳನ್ನ ಸಾಮಾಜಿಕ ಜಾಲಾತಾಣಗಳಲ್ಲಿ ಹಾಕುತ್ತಿರುತ್ತಾರೆ. ಮಗುವಿನ ಆಗಮನದ ಖುಷಿಯಲ್ಲಿರುವ ಸಂಜನಾ
ಮಗುವಿಗೆ ನಾಮಕರಣ ಮಾಡಿದ್ದಾರೆ.
ನಟಿ ಸಂಜನಾ ಕಳೆದ 2020ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅಜೀಜ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಗಂಡು ಮಗುವಿನ ತಾಯಿಯಾಗಿ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮುದ್ದು ಮಗುವಿನ ನಾಮಕರಣ ನೆರವೇರಿದ್ದು, ʻಅಲಾರಿಕ್ʼ ಎಂಬ ಹೆಸರನ್ನು ಇಡಲಾಗಿದೆ. ಈ ಕುರಿತು ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ.
ಸಂಜನಾ ಪತಿ ಅಜೀಜ್ ಮಗುವಿನ ಉಗುರು ಕತ್ತರಿಸುತ್ತಿದ್ದಾರೆ. ಅಲ್ಲದೆ ನನಗೆ ಒಂದು ತಿಂಗಳು ನನ್ನ ಹೆಸರು ಅಲಾರಿಕ್ ಎಂದು ಬರೆದುಕೊಂಡಿದ್ದಾರೆ. ಸಂಜಯ ಶೇರ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Continue Reading