Cinema News
ಮೈ ಕೊಡವಿಕೊಂಡು “ವಿರಾಟ ಪರ್ವ”ನಾಗಿ ಬರುತ್ತಿದ್ದಾನೆ ಅರು ಗೌಡ.
 
																								
												
												
											 
ವಿರಾಟ ಪರ್ವ ಆಂದೊಡನೆ ಜ್ಞಾಪಕಕ್ಕೆ ಬರುವುದು ಮಹಾಭಾರತ. 18 ಅಧ್ಯಾಯಗಳಲ್ಲಿ ನಾಲ್ಕನೇ ಪರ್ವ ವಿರಾಟ ಪರ್ವ ಕೌರವರ ಸಂಚು ಪಾಂಡವರನ್ನು ಅರಗಿನ ಮನೆಯಲ್ಲಿ ಮುಗಿಸಿಬಿಡಬೇಕು ಎಂಬ ವಿಚಾರ ಕೇಳಿದಿದ್ದೇವೆ ಹಾಗೂ ಓದಿದ್ದೇವೆ. ಆದರೆ ಈ ಕನ್ನಡ ಸಿನಿಮಾ ವಿರಾಟ ಪರ್ವ ಸಹ ನಾಲ್ಕು ಬಗೆಯಲ್ಲಿ, ಮೂರು ಕಾಲ ಘಟ್ಟದಲ್ಲಿ ಸಿದ್ದವಾಗಿ ಈ ಚಿತ್ರದ ಮೊದಲ ಪೋಸ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. `ವಿರಾಟ ಪರ್ವ’ ಎರಡನೇ ಪೋಸ್ಟರ್ ಹೇಮ ಚಂದ್ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮನಾದ ಹೆತ್ತವರಿಂದ ಬಿಡುಗಡೆ ಮಾಡಿಸಿಕೊಂಡಿದೆ.
ಎಸ್ ಆರ್ ಮೀಡಿಯಾ ಅಡಿಯಲ್ಲಿ ಈ ಚಿತ್ರವನ್ನ ಸುನಿಲ್ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಅನೇಕ ವಿಶೇಷಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ಒಂದು ಗೀತೆಯ ಎಂಟು ಸಾಲುಗಳನ್ನು ಬಳಸಲಾಗಿದೆ. `ತೇನಾ ವಿನ ತೃಣ ಮಾಪಿ ಆ ಚಾಲತಿ ಮಮತೆಯ ಬಿಡು ನೀ ಮೂಡ ಮನ’….ಎಂದು ಪ್ರಾರಂಭ ಆಗುವುದನ್ನು 2000 ಇಸವಿ ಕಾಲಘಟ್ಟಕ್ಕೆ ಹೊಂದಿಸಿ ದೇಶಕದ ಸೈನಿಕ ತನ್ನ ಅಂಗವಿಕಲ 8 ವರ್ಷದ ಮಗಳಿಗೆ ಅರ್ಥವನ್ನು ತಿಳಿಸಿ ಕಣ್ಮರೆಯಾಗಿರುತ್ತಾನೆ. ಇದನ್ನು ಆ ಬಾಲಕಿ ಸದಾ ಕೇಳುತ್ತಾ ಆ ಹಾಡಿನಿಂದ ಹಲವಾರು ವ್ಯಕ್ತಿಗಳಿಗೆ ಸ್ಪೂರ್ತಿ ಹಾಗೂ ಧೈರ್ಯ ತುಂಬುವ ಸನ್ನಿವೇಶ ಸಹ ಈ ಚಿತ್ರದಲ್ಲಿ ಅಳವಡಿಸಲಾಗಿದೆ.

ಈ ಚಿತ್ರದ ಪೋಸ್ಟರ್ ಅನ್ನು ಕಲಾವಿದ ರವಿ ಎಲ್ ಪೂಜಾರಿ ತಮ್ಮ ಪೆಯಿಂಟಿಂಗ್ ಇಂದ ತಯಾರಿಸಿದ್ದಾರೆ. ಒಟ್ಟು ನಾಲ್ಕು ಪೆಯಿಂಟಿಂಗ್ ಅನ್ನು ತಯಾರು ಮಾಡಲಾಗಿದ್ದು ಈಗಾಗಲೆ ಎರಡು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಎ 2 ಮ್ಯೂಜಿಕ್ ಯು ಟ್ಯೂಬ್ ಅಡಿಯಲ್ಲಿ ಚಿತ್ರದ ಟ್ರೈಲರ್ ಸಹ ಬಿಡುಗಡೆ ಮಾಡಲಾಗಿದ್ದು ಒಳ್ಳೆಯ ಪ್ರಶಂಸೆ ಬರುತ್ತಿದೆ.
ಸುಮಾರು ಎರಡು ವರ್ಷಗಳ ಕಾಲ ಈ ಚಿತ್ರಕ್ಕೆ ಶ್ರಮ ವಹಿಸಿರುವ ಅನಂತ್ ಶೈನ್ ಈ ಹಿಂದೆ ಮುದ್ದು ಮನಸೇ ಸಿನಿಮಾ ನಿರ್ದೇಶನ ಮಾಡಿದವರು. ಈ ಚಿತ್ರದ ಚಿತ್ರೀಕರಣಕ್ಕಾಗಿಯೇ ಮಳೆ ಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲಕ್ಕಾಗಿ ಕಾದು ಚಿತ್ರೀಕರಣವನ್ನು ಮಾಡಿದ್ದಾರೆ. ಹೀಗಾಗಿ ಎರಡು ವರ್ಷಗಳ ಕಾಲ ಸಮಯ ಹಿಡಿಯಿತು ಎನ್ನುವ ಅನಂತ್ ಶೈನ್ 55 ದಿವಸಗಳಲ್ಲಿ ಚಿತ್ರೀಕರಣವನ್ನು ಭಟ್ಕಳ, ಮೈಸೂರು, ಕೋಲಾರ ಹಾಗೂ ಬೆಂಗಳೂರಿನಲ್ಲಿ ನಡೆಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಅನಂತ್ ಶೈನ್ ನಿರ್ವಹಿಸಿದ್ದಾರೆ.

ಈ ಚಿತ್ರ ಮೂರು ವ್ಯಕ್ತಿಗಳ ಮನಸ್ಥಿತಿ ಬಗ್ಗೆ ಬಿಚ್ಚಿಕೊಳ್ಳುತ್ತದೆ. ಮಂಸೋರೆ, ಯಶ್ ಶೆಟ್ಟಿ ಹಾಗೂ ಹೇಮಂತ್ ಸುಶೀಲ್ ಈ ಪಾತ್ರಗಳನ್ನು ಮಾಡಿದ್ದಾರೆ. ಅಜ್ಞಾತವಾಸ, ಹುಡುಕಾಟ ಹಾಗೂ ಥ್ರಿಲ್ಲಿಂಗ್ ಅಂಶಗಳಿರುವ ಈ ಚಿತ್ರದಲ್ಲಿ ಮನುಷ್ಯ ಸಂಬಂದಕ್ಕೆ ಪೆಟ್ಟು ಬಿದ್ದಾಗ ಅದರ ಉಳಿವಿಗಾಗಿ ಏನೆಲ್ಲಾ ಪ್ರಯತ್ನ ಮಾಡುತ್ತಾನೆ ಎಂಬುದು ಚಿತ್ರದ ಹೂರಣ.
`ವಿರಾಟ ಪರ್ವ’ ಚಿತ್ರದಲ್ಲಿ ಒಟ್ಟು 80 ಕಲಾವಿದರು ಅಭಿನಯ ಮಾಡಿದ್ದಾರೆ. ಆರು ಗೌಡ, ಅಭಿನಯ (ಕನ್ನಡದಲ್ಲಿ ಹುಡುಗರು ಚಿತ್ರದಲ್ಲಿ ಅಭಿನಯಿಸಿದ ತಮಿಳು ನಟಿ -ಮಾತು ಬಾರದ ಹುಡುಗಿ ಇನ್ಸ್ಪೆಕ್ಟರ್ ಪಾತ್ರ ಮಾತನಾಡುತ್ತದೆ), ಯಶ್ ಹೆಟ್ಟಿ, ಅನಿಲ್ ಸಿದ್ದು, ಅನ್ವಿತ ಸಾಗರ್, ಹರಿಣಿ, ಪ್ರಕಾಶ್ ಹೆಗ್ಗೋಡು, ಉಮೇಶ್ ಪುಂಗ, ಹೇಮತ್ ಸುಶೀಲ್, ಮನಸೋರೆ, ಸ್ಪಂದನ ಪ್ರಸಾದ್, ಪ್ರನ್ಯ ಪಿ ರಾವ್, ಚೈತ್ರ ಕೊಟೂರು ಹಾಗೂ ಇತರರು ತಾರಾಬಳಗದಲ್ಲಿದ್ದಾರೆ.
ವಿರಾಟ ಪರ್ವ ಚಿತ್ರಕ್ಕೆ ಶಿವ ಬಿ ಕೆ ಕುಮಾರ್ ಹಾಗೂ ಶಿವ ಸೀನ ಕ್ಯಾಮರಾ ಹಿಡಿದಿದ್ದಾರೆ. ವಿನಿಟ್ ರಾಜ್ ಮೆನನ್ ಸಂಗೀತ ಹಾಗೂ ಹಿನ್ನಲೆ ಸಂಗೀತವನ್ನು ಋತ್ವಿಕ್ ಮುರಳೀಧರ್ ಹಾಗೂ ವಿಜಯ್ ರಾಜ್ ಜೊತೆ ನಿರ್ವಹಿಸಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಹಾಗೂ ಕವಿರಾಜ್ ಗೀತರಚನೆ ಈ ಚಿತ್ರಕ್ಕಿದೆ.
ವಿಕ್ರಮ್ ಮೋರ್ ಹಾಗೂ ಮಾಸ್ ಮಾದ ಸಾಹಸ, ವೆಂಕಿ ಯು ಡಿ ವಿ ಸಂಕಲನ, ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿರಾಟ ಪರ್ವ ಈಗ ಬಿಡುಗಡೆ ಆಗಲು ಸಹ ಸಿದ್ದವಾಗಿದೆ.
 
 
																	
																															 
			 
											 
											 
											 
											 
											 
											 
											 
											