Connect with us

Cinema News

“ಬ್ರ್ಯಾಟ್”(BRAT)ಗೆ ಗೆಲುವಿನ ಹ್ಯಾಟ್ ತೊಡಿಸಿದ ಕಲಾಭಿಮಾನಿಗಳು. .

Published

on

ಕನ್ನಡ ಚಿತ್ರರಂಗದಲ್ಲೀಗ ಒಂದರಹಿಂದೆ ಒಂದರಂತೆ ಯಶಸ್ವಿ ಚಿತ್ರಗಳು ಬರುತ್ತಿದೆ. ಈಗ ಆ ಸಾಲಿಗೆ ಮಂಜುನಾಥ್ ಕಂದಕೂರ್ ನಿರ್ಮಾಣದ, ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ “ಬ್ರ್ಯಾಟ್” ಚಿತ್ರ ಕೂಡ ಸೇರಿದೆ. ಕಳೆದವಾರ ತೆರೆಕಂಡ ಈ ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಯಶಸ್ಸಿನ ಋಷಿಯನ್ನು ಹಂಚಿಕೊಂಡರು.

ನಮ್ಮ‌ ನಿರೀಕ್ಷೆಗೂ ಮೀರಿ ಜನ ಈ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ ಎಂದು ಮಾತನಾಡಿದ ನಿರ್ದೇಶಕ ಶಶಾಂಕ್, ಕ್ರಿಕೆಟ್ ಬೆಟ್ಟಿಂಗ್ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರ ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತದೆ ಅಂದುಕೊಂಡಿದ್ದೆ. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ಯುವಕರ ಜೊತೆಗೆ ಫ್ಯಾಮಿಲಿ ಆಡಿಯನ್ಸ್ ಕೂಡ ಹೆಚ್ಚು ಬರುತ್ತಿದ್ದಾರೆ. ಕ್ಲಾಸ್ ಅಥವಾ ಮಾಸ್ ಆಡಿಯನ್ಸ್ ಎಂಬ ಭೇದವಿಲ್ಲದೆ ಎಲ್ಲರೂ ಈ ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ನಮ್ಮ ಚಿತ್ರತಂಡ ಬಿಡುಗಡೆಯಾದ ದಿನದಿಂದ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿದೆ.‌ ಹೋದ ಕಡೆ‌ ಎಲ್ಲಾ ಜನರು ಚಿತ್ರದ ಪ್ರತಿ ಸನ್ನಿವೇಶವನ್ನು ಎಂಜಾಯ್ ಮಾಡುತ್ತಾ ನೋಡುತ್ತಿದ್ದಾರೆ. ಕೃಷ್ಣ ಅವರ ಕ್ರಿಸ್ಟಿ ಪಾತ್ರಕ್ಕೆ ಜನ ಫಿದಾ ಆಗಿದ್ದಾರೆ. ಸಹ ಕಲಾವಿದರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.‌ ನಮ್ಮ‌ ಚಿತ್ರಕ್ಕೆ ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಇನ್ನೂ ಚಿತ್ರ ನೋಡದವರು ಕುಟುಂಬ ಸಮೇತ ಹತ್ತಿರದ ಚಿತ್ರಮಂದಿರಗಳಿಗೆ ಹೋಗಿ ನೋಡಿ‌. ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲೂ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಆ ಪೈಕಿ ಮೊದಲಿಗೆ ತೆಲುಗಿನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದರು.

ಸಾಮಾನ್ಯವಾಗಿ ‌ನನ್ನ ಪತ್ನಿ ಇಲ್ಲಿಯವರೆಗೂ ನನ್ನ ಯಾವ ಸಿನಿಮಾ ಲುಕ್ ನ ಬಗ್ಗೆ ಕೂಡ ಮಾತನಾಡಿರಲಿಲ್ಲ.‌ ಈ ಚಿತ್ರ ನೋಡಿ ತುಂಬಾ ಚೆನ್ನಾಗಿ ಕಾಣುತ್ತೀರಾ ಅಂತ ಹೇಳಿದರು.‌ ನನ್ನ ಅಕ್ಕನ ಮಕ್ಕಳು, ಸ್ನೇಹಿತರು ಹಾಗೂ ಅಭಿಮಾನಿಗಳು ಎಲ್ಲರೂ‌ ಕೂಡ ಈ ಚಿತ್ರದ ನನ್ನ ಹೊಸ ಲುಕ್ ಗೆ ಹಾಗೂ ಕ್ರಿಸ್ಟಿ‌ ಪಾತ್ರದ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿದರು. ಈ ಎಲ್ಲಾ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ನನ್ನ‌ ಧನ್ಯವಾದ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

ಮೊದಲಿಗೆ ನಮ್ಮ ಡಾಲ್ಫಿನ್ ಎಂಟರ್ಟೈನ್ಮೆಂಟ್‌ ಸಂಸ್ಥೆಗೆ ಉತ್ತಮ ಚಿತ್ರ ಕೊಟ್ಟ ಶಶಾಂಕ್ ಅವರಿಗೆ ಹಾಗೂ ನಾಯಕ ಕೃಷ್ಣ ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ಹೇಳುತ್ತೇನೆ.‌ ನೀವೆಲ್ಲರೂ ನೀಡಿರುವ ಸಹಕಾರಕ್ಕೆ ಎಷ್ಟು ‌ಹೇಳಿದರು ಕಡಿಮೆ.‌ ಮುಂದಿನ‌ ದಿನಗಳಲ್ಲಿ‌ ನಮ್ಮ ಸಂಸ್ಥೆಯಿಂದ ಮತ್ತಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುತ್ತೇವೆ‌ ಎಂದು ನಿರ್ಮಾಪಕ ಮಂಜುನಾಥ್ ಕಂದಕೂರ್ ತಿಳಿಸಿದರು.

ನಾಯಕಿ ಮನಿಶಾ ಕಂದಕೂರ್ ಸಹ ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿದರು. ನಟ ಡ್ರ್ಯಾಗನ್ ಮಂಜು ಅವರು ತಮ್ಮ ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಗೆ ಖುಷಿಪಟ್ಟರು. ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ, ಸಾಹಸ ನಿರ್ದೇಶಕ ಮಾಸ್ ಮಾದ ಹಾಗೂ ಕಲಾವಿದರಾದ ಶ್ರೀವತ್ಸ, ಸಂಚಿತ್, ಗಿರಿರಾಜ್ ಹಾಗೂ ಶಿವಪ್ರಸಾದ್ ಮುಂತಾದವರು ಚಿತ್ರದ ಯಶಸ್ಸಿನ ಸಂತೋಷವನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.

ಚಿತ್ರದಲ್ಲಿರುವ ಡಾಲರ್ ಮಣಿ ಪಾತ್ರ ಏಕೆ ಇಂಗ್ಲಿಷ್ ಕಲಿಯುತ್ತಿರುತ್ತದೆ? ಎಂಬ ವಿಡಿಯೋ ತುಣುಕು ಈಗ ಬಿಡುಗಡೆಯಾಗಿದೆ. ಆ ಮೂಲಕ “ಬ್ರ್ಯಾಟ್” ಭಾಗ 2 ಬರುವ ಮುನ್ಸೂಚನೆಯನ್ನು ಚಿತ್ರತಂಡ ನೀಡಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *