Cinema News
ಮಗಳು ಎಲ್ಲಿ ಎಂದಿದಕ್ಕೆ ಕೋಪಗೊಂಡ ಅನುಷ್ಕಾ ಶರ್ಮಾ: ಸೋಷಿಯಲ್ ಮೀಡಿಯಾದಲ್ಲಿ ಗರಂ ಆದ ನಟಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದುವರೆಗೂ ಎಲ್ಲಿಯೂ ಮಗಳ ಫೋಟೋವನ್ನ ರಿವೀಲ್ ಮಾಡಿಲ್ಲ. ಮಗಳಿಗೆ ವರ್ಷ ಕಳೆದಿದ್ದರು ಇದುವರೆಗೂ ಮಗಳ ಮುಖ ತೋರಿಸದೆ ಇರೋದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಈ ಮಧ್ಯೆ ಅನುಷ್ಕಾ ಗರಂ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ಮಗಳನ್ನು ಬಿಟ್ಟು ವಿದೇಶ ಪ್ರವಾಸಕ್ಕೆ ತೆರಳಿದ್ದರು. ಬೀಚ್ ಹಾಗೂ ಇತರ ಸ್ಥಳಗಳಲ್ಲಿ ದಂಪತಿ ಮೋಜುಮಸ್ತಿ ಮಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ವೇಳೆಯಲ್ಲಿ ಮಗಳು ವಮಿಕಾ ಇಲ್ಲದೇ ಇರುವ ಕಾರಣಕ್ಕೆ ಅನೇಕರು ‘ಮಗಳು ಎಲ್ಲಿ’ ಎಂದು ಪ್ರಶ್ನೆ ಮಾಡಿದ್ದರು. ಮಗು ಒಂಟಿಯಾಗಿರುವ ಫೋಟೋವನ್ನೂ ಪೋಸ್ಟ್ ಮಾಡಿದ್ದರು.
ಮಗಳ ಫೋಟೋವನ್ನು ಈ ರೀತಿಯಾಗಿ ದುರ್ಬಳಕೆ ಮಾಡಿದಕ್ಕೆ ಮತ್ತು ಅನುಮತಿ ಇಲ್ಲದೇ ಮಗಳ ಫೋಟೋವನ್ನು ಕ್ಲಿಕ್ಕಿಸುವುದಕ್ಕೆ ಅನುಷ್ಕಾ ಶರ್ಮಾ ಆಕ್ಷೇಪನೆ ವ್ಯಕ್ತ ಪಡಿಸಿದ್ದಾರೆ ನನ್ನ ಮಗಳನ್ನು ನಾನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಗೊತ್ತಿದೆ. ಅಲ್ಲದೇ, ಮಗಳ ಫೋಟೋ ತಗೆಯದಂತೆ ಹಲವಾರು ಬಾರಿ ವಿನಂತಿಸಿದ್ದೇನೆ. ಆದರೂ, ಫೋಟೋ ಕ್ಲಿಕ್ ಮಾಡುತ್ತಾರೆ. ಈ ವಿಷಯದಲ್ಲಿ ನನಗೆ ಅಸಾಮಾಧನವಿದೆ ಎಂದು ಅವರು ಹೇಳಿದ್ದಾರೆ.
ಮಗಳ ಆರೈಕೆಯ ಬಗ್ಗೆ ಯಾರೂ ನಮಗೆ ಪಾಠ ಮಾಡಬೇಕಿಲ್ಲ. ನಿಮಗಿಂತಲೂ ಹೆತ್ತವರಿಗೆ ಮಕ್ಕಳ ಬಗ್ಗೆ ಕಾಳಜಿ ಇರುತ್ತದೆ. ಈ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
