Connect with us

Cinema News

ದುಬೈನ ಅಂತಾರಾಷ್ಟ್ರೀಯ ಫ್ಯಾಷನ್ ಸ್ಪರ್ಧೆಯಲ್ಲಿ ಫಾರೆವರ್ ನವೀನ್​ಕುಮಾರ್​ಗೆ ಮತ್ತೊಂದು ಪ್ರಶಸ್ತಿ .

Published

on

ತಮ್ಮ ವಿಭಿನ್ನ, ವಿಶಿಷ್ಟ ವಿನ್ಯಾಸಗಳಿಂದ ಮನೆಮಾತಾಗಿರುವ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಪಡೆದದುಕೊಂಡಿರುವ, ಫಾರೆವರ್ ನವೀನ್ ಕುಮಾರ್, ಸದಾ ಹೊಸತನದ ಮೂಲಕ ಫ್ಯಾಶನ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ದೇಶ ವಿದೇಶಗಳಲ್ಲಿನ ಇವೆಂಟ್​ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಅದೇ ರೀತಿ ಇದೀಗ ಇತ್ತೀಚೆಗೆ ದುಬೈನಲ್ಲಿ ಇನ್ವಿಕ್ಟಾ ಟ್ರಿಯೋ ಸಹಯೋಗದಲ್ಲಿ ನಡೆದ ಗ್ಲಿಟ್ಜ್​ ಆ್ಯಂಡ್ ಗ್ಲಿಟ್ರೇಟಿ ಸೀಸನ್ 2 ಇಂಟರ್​ನ್ಯಾಷನಲ್​ ಫ್ಯಾಷನ್ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿ ಟೈಟಲ್​ ಸಹ ಗಿಟ್ಟಿಸಿಕೊಂಡಿದ್ದಾರೆ. ಅಂದಹಾಗೆ ದುಬೈನಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೇರಳ ಮೂಲದ ಶರತ್ ಚಂದ್ರನ್ ಆಯೋಜನೆ ಮಾಡಿದ್ದರು. ಈ ಇವೆಂಟ್​ಗೆ ದುಬೈನ ಪ್ರವಾಸೋದ್ಯಮ ಸಚಿವರು ಅತಿಥಿಯಾಗಿ ಆಗಮಿಸಿ ಉದ್ಘಾಟಸಿದ್ದರು.
ದುಬೈನಲ್ಲಿ ನಡೆದ ಅದ್ದೂರಿ ಇವೆಂಟ್​ನಲ್ಲಿ ಜರ್ಮನಿ, ಸ್ಪೇನ್, ಸ್ವಿಡನ್, ರಷ್ಯಾ ಸೇರಿ 16ಕ್ಕೂ ಅಧಿಕ ದೇಶಗಳ ಡಿಸೈನರ್​ಗಳು ಸ್ಪರ್ಧಿಸಿದ್ದರು. ಆ ಪೈಕಿ ಅಂತರಾಷ್ಟ್ರೀಯ ಸೆಲೆಬ್ರಿಟಿ ಡಿಸೈನರ್ ಟೈಟಲ್ ಅನ್ನು ಭಾರತದಿಂದ ಸ್ಪರ್ಧಿಸಿದ್ದ ಏಕೈಕ ಸ್ಪರ್ಧಿ ಫಾರೆವರ್ ನವೀನ್ ಕುಮಾರ್ ಪಡೆದಿದ್ದಾರೆ. ಇವರಿಗೆ ಶೋ ಸ್ಟಾಪರ್ ಆಗಿ ಬಹುಭಾಷಾ ನಟಿ ಸಂಹಿತಾ ವಿನ್ಯಾ ಮತ್ತು ಇಶಾ ಫರ್ಹಾ ಖುರೇಷಿ ಸಾಥ್ ನೀಡಿದ್ದಾರೆ. ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿ ಸಂಹಿತಾ ನಟಿಸುತ್ತಿದ್ದರೆ, ಇಶಾ 2018ರಲ್ಲಿಯೇ ಮಿಸ್ ಯೂನಿವರ್ಸ್ ಸಾಲಿಡರೇಟ್ ಅವಾರ್ಡ್ ಪಡೆದುಕೊಂಡಿದ್ದರು. ಈ ಶೋದಲ್ಲಿ ಈ ಸಲ ಫೆದರ್ ವಿಂಗ್ಸ್ ಮತ್ತು ಐ ಫ್ಯಾಷನ್ ರೆಡ್ ಕಾರ್ಪೆಟ್ ವೇರ್ ಮಾದರಿಯ ಡಿಸೈನಿಂಗ್ ಉಡುಪನ್ನು ನವೀನ್ ಕುಮಾರ್ ವಿನ್ಯಾಸ ಮಾಡಿದ್ದರು.

ಇದಕ್ಕೂ ಮೊದಲು ಕೊಲೊಂಬೊದಲ್ಲಿ ನಡೆದ ಮೆಟ್ ಗಾಲಾ ನಡೆಸಿದ ಏಷ್ಯಾ ಸ್ಟಾರ್ ಗಾಲಾ ಫ್ಯಾಶನ್ ಇವೆಂಟ್ನಲ್ಲಿಯೂ ನವೀನ್ ಕುಮಾರ್ ಭಾಗವಹಿಸಿದ್ದರು. ಹಲವು ವಿಶೇಷತೆಯನ್ನು ಒಳಗೊಂಡ ಈ ಇವೆಂಟ್ ವಿಮಾನ ನಿಲ್ದಾಣದ ರನ್ ವೇನಲ್ಲಿ ಆಯೋಜನೆಗೊಂಡಿತ್ತು. ಬೇರೆ ಬೇರೆ ದೇಶದ ಪ್ರಖ್ಯಾತ ಫ್ಯಾಶನ್ ಡಿಸೈನರ್ ಗಳು ಹಾಗೂ ಕಲಾವಿದರು ಪಾಲ್ಗೊಂಡ ಈ ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕೆ ಭಾರತದಿಂದ ಪ್ರನಿಧಿಸಿದ ಏಕೈಕ ಫ್ಯಾಶನ್ ಡಿಸೈನರ್ ಎಂದರೆ ಅದು ಫಾರೆವರ್ ನವೀನ್ ಕುಮಾರ್.
2016ರಿಂದ ಫ್ಯಾಶನ್ ಲೋಕದಲ್ಲಿ ಡಿಸೈನರ್ ಆಗಿ ಗುರುತಿಸಿಕೊಂಡಿರುವ ನವೀನ್ ಕುಮಾರ್ ಫಾರೆವರ್ ನವೀನ್ ಕುಮಾರ್ ಬ್ರ್ಯಾಂಡ್ ಮೂಲಕವೇ ಗುರುತಿಸಿಕೊಂಡಿದ್ದಾರೆ. ಕಡಿಮೆ ಸಮಯದಲ್ಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಫಾರೆವರ್ ನವೀನ್ ಕುಮಾರ್ ಸ್ಟಾರ್ ಡಿಸೈನರ್ ಆಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಭಾರತದ ಹಲವು ಸ್ಟಾರ್ ನಟ ನಟಿಯರ ನೆಚ್ಚಿನ ಡಿಸೈನರ್ ಇವರಾಗಿದ್ದು, ಅನೇಕ ಟಿವಿ ಶೋಗಳಿಗೆ, ಅಂತರಾಷ್ಟ್ರೀಯ ಕಾರ್ಯಕ್ರಮಗಳಿಗೆ ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪರಿಶ್ರಮ, ಶ್ರದ್ಧೆ ಹಾಗೂ ವಿಶಿಷ್ಟತೆ ಮೂಲಕ ಭಾರತದ ಕೀರ್ತಿಯನ್ನು ಫ್ಯಾಶನ್ ಲೋಕದಲ್ಲಿ ಇನ್ನಷ್ಟು ಹೆಚ್ಚಿಸುತ್ತಿರುವ ಫಾರೆವರ್ ನವೀನ್ ಕುಮಾರ್ ಬೆಂಗಳೂರಿನವರು, ಕನ್ನಡಿಗ ಎನ್ನುವುದೇ ಹೆಮ್ಮೆಯ ವಿಚಾರ.

Spread the love

Continue Reading
Click to comment

Leave a Reply

Your email address will not be published. Required fields are marked *