Connect with us

Cinema News

ಅಣ್ಣ ತಂಗಿಯ ೧೦೦ರ ಸಂಭ್ರಮ ಸೋಮವಾರದಿಂದ ಶನಿವಾರ ಸಂಜೆ ೭ಕ್ಕೆ

Published

on

‘ಅಣ್ಣನಿಗೆ ತಂಗಿಯೇ ಉಸಿರು ಮತ್ತು ತಂಗಿಗೆ ಅಣ್ಣನೇ ಸರ್ವಸ್ವʼವೆಂಬ ಸುಮಧುರ ಬಾಂಧವ್ಯದ ಕಥಾಹಂದರ ಹೊಂದಿರುವ ಉದಯ ಟಿವಿಯ ಜನಪ್ರಿಯ ಧಾರಾವಾಹಿ ‘ಅಣ್ಣ ತಂಗಿʼ ಇದೀಗ ಮಹತ್ತರ ಘಟ್ಟಕ್ಕೆ ಬಂದಿದೆ. ವೀಕ್ಷಕರ ಮನಗೆದ್ದು 100 ಸಂಚಿಕೆಗಳನ್ನು ಮುಗಿಸಿ ಮುಂದೆ ಸಾಗುತ್ತಿರುವ ಈ ಧಾರಾವಾಹಿಯಲ್ಲಿ ಇದೀಗ ಮದುವೆಯ ಸಂಭ್ರಮ. ಸಂಭ್ರಮದ ಜೊತೆಗೆ ಒಂದಷ್ಟು ಕುತೂಹಲ, ಕೌತುಕ, ಕಾತುರದಿಂದ ಕೂಡಿದ ಸಂಚಿಕೆಗಳು ಪ್ರೇಕ್ಷಕರನ್ನು ಮನರಂಜಿಸಲಿದೆ.
ತುಳಸಿ ಮತ್ತು ಶಿವರಾಜು ಆದರ್ಶ ಅಣ್ಣ ತಂಗಿ. ಅಪ್ಪ ಅಮ್ಮ ಇಲ್ಲದಿರುವ ಇವರಿಬ್ಬರಿಗೂ ಇವರಿಬ್ಬರೇ ಆಸರೆ. ಕೂಡು ಕುಟುಂಬದ ಪ್ರೀತಿ ಸಿಗದೆ ಬೆಳೆದ ತಂಗಿಯನ್ನು ಹೆತ್ತವರ ಸ್ಥಾನದಲ್ಲಿರೋ ಶಿವಣ್ಣ ಒಂದು ತುಂಬು ಕುಟುಂಬಕ್ಕೆ ಮದುವೆ ಮಾಡಿಸಲು ತಯಾರಿ ನಡೆಸುತ್ತಿದ್ದಾನೆ. ಆದರೆ ತಂಗಿಯ ಜಾತಕದ ಪ್ರಕಾರ ಅವಳ ಮದುವೆಯ ನಂತರ ತನ್ನ ಉಸಿರಿನಂತಿರುವ ಅಣ್ಣನ ಸಂಬAಧವನ್ನು ಕಳೆದುಕೊಳ್ಳುತ್ತಾಳೆ ಎಂದು ಶಿವಣ್ಣಗೆ ತಿಳಿದು ಬರುತ್ತದೆ. ಈ ಸತ್ಯದ ಅರಿವು ಒಂದು ಕಡೆ ಶಿವುವನ್ನ ಕಾಡುತ್ತಿದ್ದರೆ ಇನ್ನೊಂದೆಡೆ ಎಲ್ಲಿ ತುಳಸಿಯ ಮೇಲೆ ಪ್ರಾಣ ಇಟ್ಟಿರೋ ಸೋದರತ್ತೆಯ ಮಗ ಇಂದ್ರನಿAದ ಈ ಮದುವೆಗೆ ಅಪಾಯ ಬರಬಹುದೆಂಬ ಚಿಂತೆ ಇದೆ. ಆದರೆ ಇತ್ತ ತುಳಸಿಯ ಮನಸ್ಸು ಗೊಂದಲದ ಗೂಡಾಗಿದೆ. ತಾನು ಪ್ರೀತಿ ಮಾಡಿರೋ ಹುಡುಗ ಅಭಿಯನ್ನ ತನ್ನ ಅಣ್ಣ ತೋರಿಸಿರೋ ಗಂಡಿಗಾಗಿ ತ್ಯಾಗ ಮಾಡಬೇಕಾಗಿದೆ. ಒಂದು ದಿನವೂ ಅಣ್ಣನ ಬಿಟ್ಟು ಇದ್ದವಳಲ್ಲ ತುಳಸಿ ಆದರೆ ಈಗ ಮದುವೆಯಾಗಿ ಅಣ್ಣನಿಂದ ದೂರ ಹೋಗಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಣ್ಣ-ತಂಗಿ ಇಬ್ಬರಿಗೂ ಹೇಳಿಕೊಳ್ಳಲಾಗದ ಮಾನಸಿಕ ತೊಳಲಾಟ.. !!

ಅದ್ದೂರಿಯಾಗಿ ನಡೆಯಲಿರುವ ಈ ಮದುವೆ ಸಮಾರಂಭಕ್ಕೆ ‘ಗೌರಿಪುರದ ಗಯ್ಯಾಳಿಗಳುʼ ಧಾರಾವಾಹಿಯ ಗುಲಾಬಿ (ನವ್ಯ) ಮತ್ತು ಸಮರ್ಥ್ (ಕೌಶಿಕ್), ‘ಸುಂದರಿʼ ಧಾರಾವಾಹಿಯ ನಮ್ರತಾ (ಶೈನಿ) ಮತ್ತು ಕರಣ್ (ಸಮೀಪ್ ಆಚಾರ್ಯ), ‘ಕನ್ಯಾದಾನʼ ಧಾರಾವಾಹಿಯ ಅರ್ಚನಾ (ಮಾನಸ) ಮತ್ತು ಮುರಳಿ (ಸಂದೀಪ್) ‘ನೇತ್ರಾವತಿ’ ಧಾರಾವಾಹಿಯ ದಾನಪ್ಪ (ದಾನಪ್ಪ) ಅತಿಥಿ ಪಾತ್ರದಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಉದಯ ಪರಿವಾರದ ಹೆಚ್ಚಿನ ನಟ ನಟಿಯರು ಬಂದು ಹಲವಾರು ಸಂಚಿಕೆಯಲ್ಲಿ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ. ಈ ಧಾರವಾಹಿಯ ನಿರ್ಮಾಣದ ಹೊಣೆಯನ್ನು ಚೈತನ್ಯ ಹರಿದಾಸ್ ಸಿನಿಮಾಸ್ ಹೊತ್ತಿದೆ. ‘ಆಕೃತಿ’ ಎಂಬ ಥ್ರಿಲ್ಲರ್ ಧಾರಾವಾಹಿಯನ್ನು ನಿರ್ಮಿಸಿದ್ದ ಕನ್ನಡದ ಖ್ಯಾತ ನಿರ್ದೇಶಕರಾದ ಕೆ.ಎಂ.ಚೈತನ್ಯ ಮತ್ತು ಹರಿದಾಸ್ ಕೆ.ಜಿ.ಎಫ್. ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ನಿರ್ದೇಶನ ಮತ್ತು ಛಾಯಾಗ್ರಹಣ ಎಮ್.ಕುಮಾರ್ ಅವರದ್ದು. ರಾಘವ ದ್ವಾರ್ಕಿಯವರು ಚಿತ್ರಕಥೆ ಬರೆದಿದ್ದು, ತುರುವೆಕರೆ ಪ್ರಸಾದ್ ಸಂಭಾಷಣೆ ಮತ್ತು ಗುರುರಾಜ್ ಬಿ.ಕೆ.ರವರ ಸಂಕಲನವಿದೆ. ತಂಗಿ ತುಳಸಿ ಪಾತ್ರವನ್ನು ಅಖಿಲಾ ಪ್ರಕಾಶ್ ಹಾಗೂ ಅಣ್ಣನ ಪಾತ್ರವನ್ನು ಮಧು ಸಾಗರ್ ನಿರ್ವಹಿಸುತ್ತಿದ್ದಾರೆ. ಮಾನ್ಸಿ ಜೋಷಿ, ರಾಜೇಶ್ ಧ್ರುವ, ಪ್ರಜ್ವಲ್, ಸುಶ್ಮಿತಾ ಆರ್, ರೋಹಿತ್ ನಾಗೇಶ್ ಹೆಚ್. ಪಿ, ಶಿವಮೊಗ್ಗ ಹರೀಶ್, ಶರ್ಮಿತಾ, ರಜನಿ, ರಾಧಾ ರಾಮಚಂದ್ರ, ಗಿರಿಶ್ ಜತ್ತಿ, ತನುಜಾ, ಭಗತ್ ಅವರಂತಹ ಹಲವಾರು ತಾರೆಯರು ಅಭಿನಯಿಸುತ್ತಿರೋ ಈ ಧಾರಾವಾಹಿಯು ಕನ್ನಡದ ಜನಪ್ರಿಯವಾಹಿನಿ ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *