Cinema News
ಕನ್ನಡದಲ್ಲಿ ಟ್ವೀಟ್ ಮಾಡಿ ಬ್ರಹ್ಮಾಸ್ತ್ರ ಟ್ರೈಲರ್ ಹಂಚಿಕೊಂಡ ನಟಿ ಆಲಿಯಾ ಭಟ್

ಬಾಲಿವುಡ್ ನಟ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಟ್ರೇಂಡಿಂಗ್ನಲ್ಲಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ `ಬ್ರಹ್ಮಾಸ್ತ್ರ’ ಟ್ರೈಲರ್ ಕನ್ನಡದಲ್ಲೂ ರಿಲೀಸ್ ಆಗಿದ್ದು ಸಿನಿ ರಸಿಕರು ಮೆಚ್ಚುಗೆ ಸೂಚಿಸಿದ್ದಾರೆ. ಬ್ರಹ್ಮಾಸ್ತ್ರ ಟ್ರೈಲರ್ ಬಿಡುಗಡೆ ಹಿನ್ನೆಲೆ ನಟಿ ಆಲಿಯಾ ಭಟ್ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.
ಆಯಾನ್ ಮುಖರ್ಜಿ ನಿರ್ದೇಶನದ `ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟ್ರೈಲರ್ ಹಂಚಿಕೊಂಡು ಟ್ವೀಟ್ ಮಾಡಿರುವ ಆಲಿಯಾ ಭಟ್ “ನಮ್ಮೆಲ್ಲರ ಹೃದಯಗಳ ಒಂದು ಭಾಗವೇ-ಬ್ರಹ್ಮಾಸ್ತ್ರ ಎಂದು ಬರೆದುಕೊಂಡಿದ್ದಾರೆ. ಆಲಿಯಾ ಭಟ್ ಟ್ವೀಟ್ ನೋಡಿ ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಬ್ರಹ್ಮಸ್ತ್ರ ಟ್ರೈಲರ್ ವಿಭಿನ್ನ ಶೈಲಿಯಲ್ಲಿ ಮೂಡಿ ಬಂದಿದ್ದು ಪ್ರೀತಿ, ಬೆಳಕು, ಬೆಂಕಿಯ ರೂಪಗಳೇ `ಬ್ರಹ್ಮಾಸ್ತ್ರ’ ರೂಪದಲ್ಲಿ ತೋರಿಸಲಾಗಿದೆ. ಎಲ್ಲಾ ಅಸ್ತ್ರಗಳ ದೇವರು `ಬ್ರಹ್ಮಾಸ್ತ್ರ’ ಎಂಬ ಅರ್ಥದಲ್ಲಿ ಭಿನ್ನವಾಗಿ ಟ್ರೈಲರ್ ತೋರಿಸಲಾಗಿದೆ.
ಬ್ರಹ್ಮಾಸ್ತ್ರ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ.
ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಕನ್ನಡ ಡೈಲಾಗ್ಗಳನ್ನು ಕನ್ನಡದ ನಟ ಮಾಸ್ತಿ ಮಂಜು ಬರೆದಿದ್ದಾರೆ.
