Cinema News
ಐಶ್ವರ್ಯಾ ರೈ ನಟನೆಯ ಪೊನ್ನಿಯಿನ್ ಸೆಲ್ವನ್ ಚಿತ್ರದ ಹೊಸ ಪೋಸ್ಟರ್ ರಿಲೀಸ್

ಮುಂಬೈ: ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ ನಟನೆಯ ಪೊನ್ನಿಯಿನ್ ಸೆಲ್ವನ್ ಚಿತ್ರದ ಹೊಸ ಪೋಸ್ಟರ್ ಅನ್ನು ಚಿತ್ರದ ನಿರ್ಮಾಪಕರು ಹಂಚಿಕೊಂಡಿದ್ದು ಐಶ್ವರ್ಯಾ ರೈ ಬಚ್ಚನ್ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದ ಐಶು ಮದುವೆ ಬಳಿಕ ಅಳೆದು ತೂಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2018ರಲ್ಲಿ ತೆರೆಕಂಡ ಫನ್ನಿ ಖಾನ್ ಸಿನಿಮಾದ ಬಳಿಕ ಸಿನಿಮಾ ರಂಗದಿಂದ ದೂರವಾಗಿದ್ದ ಐಶ್ವರ್ಯ ನಾಲ್ಕು ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಸಾಕಷ್ಟು ಕಾರಣಗಳಿಂದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಐಶ್ವರ್ಯ ರೈ ಜೊತೆಗೆ ವಿಕ್ರಮ್, ಜಯಮ್ ರವಿ, ಕಾರ್ತಿ, ತ್ರಿಷಾ, ಆರ್. ಶರತ್ ಕುಮಾರ್, ಶೋಭಿತಾ ಧೂಲಿಪಾಲಾ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸುತ್ತಿದ್ದಾರೆ. ಈಗಾಗ್ಲೆ ಮೂರು ಸಿನಿಮಾಗಳನ್ನ ಒಟ್ಟಿಗೆ ಮಾಡಿರುವ ನಿರ್ದೇಶಕ ಮಣಿರತ್ನಂ ಹಾಗೂ ಐಶ್ವರ್ಯಾ ರೈ ಇದೀಗ ನಾಲ್ಕನೇ ಬಾರಿಗೆ ಒಂದಾಗುತ್ತಿದ್ದಾರೆ.
1955ರಲ್ಲಿ ಕಲ್ಕಿ ಕೃಷ್ಣಮೂರ್ತಿ ಬರೆದ ‘ಪೊನ್ನಿಯಿನ್ ಸೆಲ್ವನ್’ ಕಾದಂಬರಿ ಆಧರಿಸಿ ಈ ಚಿತ್ರ ಮೂಡಿಬರುತ್ತಿದೆ. ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಐಶ್ವರ್ಯಾ ರೈ ವೃತ್ತಿಜೀವನದಲ್ಲಿ ಇದು ಮಹತ್ವದ ಸಿನಿಮಾ ಆಗಲಿದೆ. ಚಿತ್ರದಲ್ಲಿ ಐಶ್ವರ್ಯ ನಂದಿನಿ ಎಂಬ ರಾಣಿಯ ಪಾತ್ರ ಮಾಡುತ್ತಿದ್ದಾರೆ.
