Cinema News
ರಶ್ಮಿಕಾ ಮಂದಣ್ಣ ಮಾಡಿದ ಕೆಲಸ ಮೆಚ್ಚಿಕೊಂಡ ನೆಟ್ಟಿಗರು

ಮುಂಬೈ: ಸೆಲೆಬ್ರಿಟಿಗಳು ಕಂಡಾಗ ಅಭಿಮಾನಿಗಳು ಮುಗಿ ಬಿದ್ದು ಸೆಲ್ಪಿ ತೆಗೆದುಕೊಳ್ಳೋದು ಕಾಮನ್. ಕೆಲವೊಂದಷ್ಟು ಮಂದಿ ಅಭಿಮಾನಿಗಳ ಜೊತೆ ಫೋಟೋಗೆ ಫೋಸ್ ಕೊಟ್ರೆ ಮತ್ತೊಂದಷ್ಟು ಮಂದಿ ಗರಂ ಆಗಿ ಬಿಡ್ತಾರೆ. ಇವುಗಳನ್ನ ಸಂಭಾಳಿಸೋದಕ್ಕೆ ಬಾಡಿಗಾರ್ಡ್ ಗಳು ಇರ್ತಾರೆ. ಆದ್ರೆ ಇದೀಗ ರಶ್ಮಿಕಾ ಬಾಡಿಗಾರ್ಡ್ ಮೇಲೆಯೇ ಮುನಿಸಿಕೊಂಡಿದ್ದು ರಶ್ಮಿಕಾ ಕೆಲಸ ನೋಡಿ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ರಶ್ಮಿಕಾ ಮುಂಬೈನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಪಾಪರಾಜಿಗಳು ರಶ್ಮಿಕಾ ಅವರ ವಿಡಿಯೋ ಶೂಟ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಅಭಿಮಾನಿಗಳು ರಶ್ಮಿಕಾರ ವಿಡಿಯೋ ಶೂಟ್ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಅಭಿಮಾನಿಗಳು ರಶ್ಮಿಕಾ ಜೊತೆ ಫೋಟೋ ತೆಗೆದುಕೊಳ್ಳಲು ಮುಂದಾದರು. ರಶ್ಮಿಕಾ ಬಳಿ ಬಂದ ಅಭಿಮಾನಿಯೋರ್ವನನ್ನು ಬಾಡಿಗಾರ್ಡ್ ದೂರ ತಳ್ಳಲು ಪ್ರಯತ್ನಿಸಿದ್ದ. ಇದಕ್ಕೆ ಅಸಮಾಧಾನಗೊಂಡ ರಶ್ಮಿಕಾ ಆ ರೀತಿ ಮಾಡಬೇಡಿ ಎಂದು ಹೇಳಿ ಅಭಿಮಾನಿ ಜೊತೆ ಫೋಟೋ ತೆಗೆಸಿಕೊಂಡರು. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
