Cinema News
ಮದುವೆಯಾದ ಒಂದೇ ವಾರಕ್ಕೆ ಶೂಟಿಂಗ್ ಸ್ಪಾಟ್ ಗೆ ಹಾಜರಾದ ನಟಿ ನಯನತಾರಾ

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೆಲಸದಲ್ಲಿ ರಾಜಿ ಮಾಡಿಕೊಳ್ಳೋದಿಲ್ಲ ಅನ್ನೋದು ಗೊತ್ತೆ ಇದೆ. ಯಾವಾ ಪಾತ್ರ ಕೊಟ್ಟರು ಲೀಲಾಜಾಲವಾಗಿ ಮಾಡಿ ಮುಗಿಸುವ ನಯನತಾರಾ ಇದೀಗ ಕೆಲಸವೇ ಮುಖ್ಯ ಎಂದು ಶೂಟಿಂಗ್ ಸ್ಪಾಟ್ ಗೆ ಹಾಜರಾಗಿದ್ದಾರೆ.
ಇತ್ತೀಚೆಗಷ್ಟೇ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಸಪ್ತಪದಿ ತುಳಿದ ನಯನತಾರಾ ಮದುವೆಯಾದ ಒಂದೇ ವಾರಕ್ಕೆ ಶೂಟಿಂಗ್ ಲೊಕೇಶನ್ ಗೆ ಮರಳಿದ್ದಾರೆ. ಸದ್ಯ ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣದಲ್ಲಿ ನಯನತಾರಾ ಭಾಗಿಯಾಗಿದ್ದಾರೆ.
ಮದುವೆಯ ಬಳಿಕ ತಿರುಪತಿ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಆಶೀರ್ವಾದ ಪಡೆದುಕೊಂಡಿದ್ದ ದಂಪತಿಗಳು, ಆ ನಂತರ ಹನಿಮೂನ್ಗೆ ಹೋಗಲಿದ್ದಾರೆ ಎನ್ನಲಾಗಿತ್ತು. ಆದರೆ, ಮದುವೆ ಕಾರಣದಿಂದಾಗಿ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಜವಾನ್ ಸಿನಿಮಾದ ಚಿತ್ರೀಕರಣದಲ್ಲಿ ನಯನತಾರಾ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ.
ಅಟ್ಲಿ ನಿರ್ದೇಶನದ ಜವಾನ್ ಸಿನಿಮಾದ ಒಂದು ಹಂತದ ಶೂಟಿಂಗ್ ಕೂಡ ಮುಗಿದಿದ್ದು, ನಯನತಾರಾ ಮದುವೆಗಾಗಿ ತಾತ್ಕಾಲಿಕವಾಗಿ ಶೂಟಿಂಗ್ ನಿಲ್ಲಿಸಲಾಗಿತ್ತು. ಇದೀಗ ಮತ್ತೊಂದು ಹಂತದ ಚಿತ್ರೀಕರಣವನ್ನು ಶುರು ಮಾಡಲಾಗಿದೆ.
