Cinema News
ಪತಿಯ ನಿಧನದ ನೋವಿನಲ್ಲೂ ನಟಿ ಮೀನಾ ಮಾಡಿಕೊಂಡ ಮನವಿ ಏನು ಗೊತ್ತಾ?

ಬಹುಭಾಷಾ ನಟಿ ಮೀನಾ ಪತಿ ವಿದ್ಯಾ ಸಾಗರ್ ಇತ್ತೀಚೆಗೆ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. ವಿದ್ಯಾಸಾಗರ್ ಸಾವಿಗೆ ಅನೇಕ ಮಂದಿ ಸಂತಾಪ ಸೂಚಿಸಿದ್ದರು. ಇದೀಗ ಪತಿಯನ್ನು ಕಳೆದುಕೊಂಡ ನೋವಿನಲ್ಲೂ ನಟಿ ಮೀನಾ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನನ್ನ ಪ್ರೀತಿಯ ಪತಿ ವಿದ್ಯಾ ಸಾಗರ್ ಅವರ ಅಗಲಿಕೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನಮ್ಮ ಖಾಸಗಿತನವನ್ನು ಗೌರವಿಸಿ ಮತ್ತು ಸ್ವಲ್ಪ ಸಹಾನುಭೂತಿಯನ್ನು ತೋರಿಸಿ ಎಂದು ನಾನು ಎಲ್ಲಾ ಮಾಧ್ಯಮಗಳ ಬಳಿ ಪ್ರಾಮಾಣಿಕವಾಗಿ ವಿನಂತಿಸುತ್ತೇನೆ’ ಎಂದಿದ್ದಾರೆ.
ಇದೇ ವೇಳೆ ಬೆಂಬಲಕ್ಕೆ ನಿಂತ ಎಲ್ಲರಿಗೂ ಮೀನಾ ಧನ್ಯವಾದ ಹೇಳಿದ್ದಾರೆ. ‘ಈ ಕಷ್ಟದ ಸಮಯದಲ್ಲಿ ನಮ್ಮ ಕುಟುಂಬದ ಸಹಾಯಕ್ಕೆ ನಿಂತ ಒಳ್ಳೆಯ ಹೃದಯಗಳಿಗೆ ನನ್ನ ಕೃತಜ್ಞತೆ. ಅತ್ಯುತ್ತಮ ಪ್ರಯತ್ನ ಮಾಡಿದ ಎಲ್ಲಾ ವೈದ್ಯಕೀಯ ತಂಡಕ್ಕೆ, ನಮ್ಮ ಸಿಎಂ, ಆರೋಗ್ಯ ಸಚಿವರು, ಸ್ನೇಹಿತರು, ಕುಟುಂಬ, ಮಾಧ್ಯಮಗಳು ಪ್ರೀತಿ ಕಳುಹಿಸಿದ್ದಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ವಿದ್ಯಾ ಸಾಗರ್ ನಿಧನಕ್ಕೆ ಕೊವಿಡ್ ಕಾರಣ ಎಂದೇ ಹೇಳಲಾಗಿತ್ತು. ಈ ಬಗ್ಗೆ ಅನೇಕ ಅಂತೆಕಂತೆಗಳು ಹರಿದಾಡಿದ್ದವು. ಈ ಕುರಿತು ನಟಿ ಖುಷ್ಬೂ ಕಡೆಯಿಂದ ಸ್ಪಷ್ಟನೆ ಕೂಡ ನೀಡಿದ್ದರು. ಈ ಸಂದರ್ಭದಲ್ಲಿ ವದಂತಿಗಳನ್ನು ಜನರು ನಿಜ ಎಂದು ನಂಬಿಕೊಳ್ಳುತ್ತಾರೆ. ಹಾಗಾಗಬಾರದು ಎಂಬ ಕಾರಣಕ್ಕೆ ಮೀನಾ ವಿಶೇಷ ಮನವಿ ಮಾಡಿದ್ದಾರೆ. ‘ದಯವಿಟ್ಟು ಈ ವಿಷಯದ ಕುರಿತು ಯಾವುದೇ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಬೇಡಿ’ ಎಂದು ಕೋರಿದ್ದಾರೆ.
