Connect with us

Cinema News

ಮೀನಾ ಪತಿ ಸಾವಿಗೆ ಕಾರಣ ತಿಳಿಸಿದ ನಟಿ ಖುಷ್ಬೂ, ಅಷ್ಟಕ್ಕೂ ವಿದ್ಯಾಸಾಗರ್ ಗೆ ಆಗಿದ್ದೇನು ಗೊತ್ತಾ?

Published

on

ಖ್ಯಾತ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಇತ್ತೀಚೆಗೆ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ವಿದ್ಯಾಸಾಗರ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಇದರ ನಡುವೆ ಕೊವಿಡ್ ನಿಂತ ಮೃತಪಟ್ಟಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿತ್ತು. ಈ ಬಗ್ಗೆ ನಟಿ ಖುಷ್ಬೂ ಸುಂದರ್ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾಸಾಗರ್ ನಿಧನಕ್ಕೆ ಕೊರೊನಾ ಕಾರಣ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಯಿತು. ಅದು ಖುಷ್ಬೂ ಗಮನಕ್ಕೆ ಬಂದಿದೆ. ಆ ಕುರಿತು ಟ್ವೀಟ್ ಮಾಡಿರುವ ಖುಷ್ಭು. ‘ಮಾಧ್ಯಮದವರು ತುಂಬ ಜವಾಬ್ದಾರಿಯುತವಾಗಿ ಇರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಮೀನಾ ಪತಿಗೆ ಮೂರು ತಿಂಗಳ ಹಿಂದೆ ಕೊವಿಡ್ ಆಗಿತ್ತು. ಅದರಿಂದ ಅವರ ಶ್ವಾಸಕೋಶದ ಸ್ಥಿತಿ ಹದಗೆಟ್ಟಿತ್ತು. ಆದರೆ ಕೊವಿಡ್ನಿಂದಲೇ ಅವರು ಮೃತರಾದರು ಎಂದು ಹೇಳುವ ಮೂಲಕ ತಪ್ಪು ಮಾಹಿತಿ ಮತ್ತು ಭಯವನ್ನು ಹುಟ್ಟುಹಾಕಬೇಡಿ. ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ಬರೆದುಕೊಂಡಿದ್ದಾರೆ.
2022ರ ಆರಂಭದಲ್ಲಿ ಮೀನಾ ಅವರ ಇಡೀ ಕುಟುಂಬಕ್ಕೆ ಕೊವಿಡ್ ತಗುಲಿತ್ತು. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾಲ್ಲಿ ಬರೆದುಕೊಂಡಿದ್ದರು. ಕೊವಿಡ್ ಬಂದು ಹೋದ ಬೆನ್ನಲ್ಲೇ ವಿದ್ಯಾಸಾಗರ್ ಅವರಿಗೆ ಈ ರೀತಿ ಆರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಅನುಮಾನ ಮೂಡಿತ್ತು.
‘2022ರಲ್ಲಿ ನಮ್ಮ ಮನೆಗೆ ಬಂದ ಮೊದಲ ಅತಿಥಿ ಮಿಸ್ಟರ್ ಕೊರೊನಾ. ಅದಕ್ಕೆ ನನ್ನ ಇಡೀ ಕುಟುಂಬ ಇಷ್ಟ ಆಗಿದೆ. ಆದರೆ ಅದು ಉಳಿದುಕೊಳ್ಳಲು ನಾನು ಬಿಡುತ್ತಿಲ್ಲ. ಎಚ್ಚರಿಕೆಯಿಂದಿರಿ ಜನಗಳೇ.. ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಿ. ಜವಾಬ್ದಾರಿಯಿಂದ ನಡೆದುಕೊಳ್ಳಿ. ಕೊರೊನಾ ಹರಡಲು ಬಿಡಬೇಡಿ’ ಎಂದು ಮೀನಾ ಪೋಸ್ಟ್ ಮಾಡಿದ್ದರು.

Spread the love

Continue Reading
Click to comment

Leave a Reply

Your email address will not be published. Required fields are marked *