Cinema News
ತೆಲುಗು ಚಿತ್ರರಂಗದತ್ತ ಮುಖ ಮಾಡಿದ ನಟಿ ಜಾಹ್ನವಿ ಕಪೂರ್

ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಗೆ ಹಿಂದಿಯಲ್ಲಿ ಕೈ ತುಂಬಾ ಸಿನಿಮಾಗಳಿವೆ. ಈ ಮಧ್ಯೆ ಜಾಹ್ನವಿ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಭಿನ್ನ ಅವತಾರದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ರೆಡಿಯಾಗಿದ್ದಾರೆ.
2018ರಲ್ಲಿ ತೆರೆಕಂಡ `ಧಡಕ್’ ಚಿತ್ರದ ಮೂಲಕ ಲಿವುಡ್ಗೆ ಎಂಟ್ರಿ ಕೊಟ್ಟ ಜಾಹ್ನವಿಗೆ ಈ ಸಿನಿಮಾ ಹೇಳಿಕೊಳ್ಳುವ ಮಟ್ಟಿಗಿನ ಹೆಸರು ತಂದುಕೊಡಲಿಲ್ಲ. ಆದ್ರೆ ಜಾಹ್ನವಿಗೆ ಅವಕಾಶಗಳಿಗೇನು ಕಮ್ಮಿಯಾಗಿಲ್ಲ. ಎವರ್ ಗ್ರೀನ್ ಬ್ಯೂಟಿ ಶ್ರೀದೇವಿ ಪುತ್ರಿ ಎಂಬ ಕಾರಣಕ್ಕೆ ಈ ನಟಿಯ ಮೇಲೆ ಚಿತ್ರರಂಗ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಸದ್ಯ ಜಾಹ್ನವಿ ಕಪೂರ್ ತೆಲುಗು ಚಿತ್ರರಂಗದದಲ್ಲಿ ಮಿಂಚು ಹರಿಸೋಕೆ ರೆಡಿಯಾಗಿದ್ದಾರೆ.
ಈ ಹಿಂದೆ `ಆರ್ಆರ್ಆರ್’ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದ ಪಾತ್ರಕ್ಕೆ ಮೊದಲು ಜಾಹ್ನವಿಯನ್ನು ಕೇಳಲಾಗಿತ್ತಂತೆ. ಆದರೆ ಜಾಹ್ನವಿ ಆಫರ್ ಅನ್ನು ತಿರಸ್ಕಾರ ಮಾಡಿದ್ದರು. ಬಳಿಕ `ಆರ್ಆರ್ಆರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಇದೀಗ ಟಾಲಿವುಡ್ನತ್ತ ಬರಲು ಜಾಹ್ನವಿ ಕಪೂರ್ ನಿರ್ಧರಿಸಿದ್ದಾರೆ.
ಇತ್ತೀಚೆಗೆ ಜಾಹ್ನವಿ ನಟನೆಯ ಸಿನಿಮಾ ಒಂದರ ಪ್ರಚಾರದಲ್ಲಿ ತಂದೆ ಬೋನಿ ಕಪೂರ್ ಕೂಡ ಒಳ್ಳೆಯ ಕಥೆ, ಪಾತ್ರ ಬಂದರೆ ಜಾಹ್ನವಿ ಸೌತ್ ಸಿನಿಮಾಗಳಲ್ಲಿ ನಟಿಸಲು ಸಿದ್ಧ ಅಂದಿದ್ದಾರೆ. ಒಟ್ನಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಡ್ತಿರೋದು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
