Connect with us

Cinema News

ಶೂಟಿಂಗ್ ಗಾಗಿ ವಿದೇಶಕ್ಕೆ ಹಾರಿದ ನಟಿ ಆಲಿಯಾ ಭಟ್

Published

on

ಬಾಲಿವುಡ್ ಬ್ಯೂಟಿ ನಟಿ ಆಲಿಯಾ ಭಟ್ ಇತ್ತೀಚೆಗೆ ತಾವು ತಾಯಿಯಾಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಈ ಬೆನ್ನಲ್ಲೇ ನಟಿ ಆಲಿಯಾ ಶೂಟಿಂಗ್ಗಾಗಿ ವಿದೇಶಕ್ಕೆ ಹಾರಿದ್ದು, ಅದರ ಫೋಟೋಗಳು ವೈರಲ್ ಆಗಿದೆ.
ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಯಿರುವಾಗಲೇ ಹಸೆ ಮಣೆ ಏರಿದ್ದ ನಟಿ ಆಲಿಯಾ ಭಟ್ ಮದುವೆಯಾಗಿ ಎರಡೂವರೆ ತಿಂಗಳೊಳಗೆ ತಾಯಿಯಾಗುತ್ತಿರುವ ವಿಷಯ ತಿಳಿಸಿದ್ದಾರೆ. ಈ ಬೆನ್ನಲೆ ಆಲಿಯಾ ಒಪ್ಪಿಕೊಂಡಿದ್ದ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಹಾಲಿವುಡ್ನ `ಹಾರ್ಟ್ ಆಫ್ ಸ್ಟೋನ್’ ಚಿತ್ರಕ್ಕಾಗಿ ಲಂಡನ್ಗೆ ಹೋಗಿದ್ದಾರೆ. ಈ ವೇಳೆ ಕರಣ್ ಜೋಹರ್ ಮತ್ತು ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಅವರನ್ನು ಲಂಡನ್ನಲ್ಲಿ ಭೇಟಿಯಾಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಆಲಿಯಾ ಮದುವೆಗೂ ಮುಂಚೆನೇ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿದ್ದರು. ಅವುಗಳಲ್ಲಿ ಹಾಲಿವುಡ್ನ ಚಿತ್ರ `ಹಾರ್ಟ್ ಆಫ್ ಸ್ಟೋನ್’ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಈಗ ಶೂಟಿಂಗ್ಗಾಗಿ ಆಲಿಯಾ ಲಂಡನ್ಗೆ ತೆರಳಿದ್ದಾರೆ. ಈ ವೇಳೆ ಆಲಿಯಾ ಜತೆ ಕರಣ್ ಜೋಹರ್ ಮತ್ತು ಮನೀಷ್ ಬಿಸಿಲಿಗೆ ಮುಖ ಕೊಟ್ಟು ಕ್ಯಾಮೆರಾ ಪೋಸ್ ನೀಡಿರುವ ಫೋಟೋ ವೈರಲ್ ಆಗಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *