Connect with us

Cinema News

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ‘ರಾವೆನ್’ ಟ್ರೇಲರ್ ಅನಾವರಣ!

Published

on

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಾಣಿ-ಪಕ್ಷಿಗಳನ್ನು ಕೇಂದ್ರವಾಗಿಟ್ಟುಕೊಂಡು ಹಲವು ಸಿನಿಮಾಗಳು ಮೂಡಿಬಂದಿದ್ದರೂ, ಕಾಗೆಯನ್ನು ಪ್ರಮುಖ ಪಾತ್ರವನ್ನಾಗಿಸಿಕೊಂಡಿರುವ ಚಿತ್ರಗಳು ಅಪರೂಪ. ಅಂತಹ ವಿಭಿನ್ನ ಪ್ರಯತ್ನದ ‘ರಾವೆನ್’ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ವಿಶ್ವ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ವಿಶ್ವನಾಥ್ ಜಿ.ಪಿ ನಿರ್ಮಿಸಿರುವ ಈ ಚಿತ್ರವನ್ನು ವೇದ್ ನಿರ್ದೇಶಿಸಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರದ ಟ್ರೇಲರ್ ಅನಾವರಣಗೊಳಿಸಿದ್ದು, ಡಿ.ಎಸ್. ಮ್ಯಾಕ್ಸ್‌ನ ದಯಾನಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಭಾ.ಮ. ಹರೀಶ್ ಮತ್ತು ರಶ್ಮಿ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದರು. ಕಾಗೆ ಹಾಗೂ ಪಿತೃಪಕ್ಷದ ನಡುವಿನ ಸಾಂಪ್ರದಾಯಿಕ ನಂಟಿನ ಹಿನ್ನೆಲೆಯಲ್ಲಿ ಪಿತೃಪಕ್ಷದ ಸಂದರ್ಭದಲ್ಲೇ ಟ್ರೇಲರ್ ಮತ್ತು ಹಾಡು ಬಿಡುಗಡೆಯಾಗಿರುವುದು ವಿಶೇಷವಾಗಿದೆ.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಧ್ರುವ ಸರ್ಜಾ, ಕಾಗೆಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಿಸಿರುವ ಚಿತ್ರದ ಟ್ರೇಲರ್ ವಿಭಿನ್ನವಾಗಿದ್ದು, ಪಿತೃಪಕ್ಷದ ಸಂದರ್ಭದಲ್ಲಿ ಬಿಡುಗಡೆಯಾಗಿರುವುದು ಸಂದರ್ಭೋಚಿತವಾಗಿದೆ ಎಂದು ಹೇಳಿದರು. ‘ರಾವೆನ್’ ಎಂದರೆ ಕಾಗೆ. ನಮ್ಮ ಸಮಾಜದಲ್ಲಿ ಕಾಗೆಯ ಬಗ್ಗೆ ಹಲವು ನಂಬಿಕೆಗಳು ಹಾಗೂ ಆಚರಣೆಗಳು ರೂಢಿಯಲ್ಲಿವೆ. ಆದರೆ, ಕಾಗೆಯಲ್ಲಿರುವ ಕೆಲವು ವಿಶಿಷ್ಟ ಗುಣಗಳನ್ನು ಕಥೆಯ ಪ್ರಮುಖ ಅಂಶವನ್ನಾಗಿಸಿಕೊಂಡು ಈ ಚಿತ್ರವನ್ನು ರೂಪಿಸಲಾಗಿದೆ. ಒಂದು ಹಿಡಿ ಅನ್ನ ಸಿಕ್ಕರೂ ತನ್ನ ಬಳಗವನ್ನು ಕರೆದು ಹಂಚಿಕೊಂಡು ತಿನ್ನುವ ಕಾಗೆಯ ಸ್ವಭಾವವನ್ನು ಚಿತ್ರದಲ್ಲಿ ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಕಾಲ್ಪನಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ತಾಂತ್ರಿಕವಾಗಿ ಶ್ರೀಮಂತ ದೃಶ್ಯಗಳು ಹಾಗೂ ಸಿಜಿ ವರ್ಕ್ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ನಿರ್ದೇಶಕ ವೇದ್ ಮಾತನಾಡಿ, ‘ರಾವೆನ್’ ತಮ್ಮ ನಿರ್ದೇಶನದ ಎರಡನೇ ಚಿತ್ರವಾಗಿದ್ದು, ನಿರ್ಮಾಪಕ ವಿಶ್ವನಾಥ್ ಅವರ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದು ಹೇಳಿದರು. ದಿಲೀಪ್ ಪೈ ಹಾಗೂ ದೇವ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಸ್ವಪ್ನ ಶೆಟ್ಟಿಗಾರ್, ರಾಣಿ, ಸುಚೇಂದ್ರ ಪ್ರಸಾದ್, ಲೀಲಾ ಮೋಹನ್, ದಿನೇಶ್ ಮಂಗಳೂರು, ವಿಶ್ವನಾಥ್ ಜಿ.ಪಿ, ಚೈತ್ರಾ ರಾಮ್ ಹಾಗೂ ರಾಘವೇಂದ್ರ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಸಂಗೀತ ನಿರ್ದೇಶಕ MAD D, ಛಾಯಾಗ್ರಾಹಕ ರಾಕೇಶ್ ಸಿ. ತಿಲಕ್ ಸೇರಿದಂತೆ ಹಲವು ತಂತ್ರಜ್ಞರು ಚಿತ್ರಕ್ಕೆ ಕೈಜೋಡಿಸಿದ್ದಾರೆ. ಚಿತ್ರದ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು, ನವೆಂಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ನಿರ್ಮಾಪಕ ವಿಶ್ವನಾಥ್ ಜಿ.ಪಿ ಮಾತನಾಡಿ, ನಿರ್ದೇಶಕರು ಹೇಳಿದ ಕಥೆ ಇಷ್ಟವಾದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದು ತಿಳಿಸಿದರು. ಕನ್ನಡದ ಜೊತೆಗೆ ಚೈನೀಸ್ ಹಾಗೂ ಕೊರಿಯನ್ ಭಾಷೆಗಳಲ್ಲಿಯೂ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದ್ದು, ತೆಲುಗು, ತಮಿಳು ಸೇರಿದಂತೆ ಮತ್ತಷ್ಟು ಭಾಷೆಗಳಿಗೆ ಡಬ್ ಮಾಡುವ ಯೋಜನೆಯಿದೆ. ದೇಶದ ಹೊರಗೆಯೂ ‘ರಾವೆನ್’ ಚಿತ್ರವನ್ನು ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದರು. ಚಿತ್ರದ ಶೀರ್ಷಿಕೆ ಗೀತೆಯನ್ನು ತಾವೇ ಬರೆದಿರುವುದಾಗಿ ಹಾಗೂ ಸಿನಿಮಾದಲ್ಲಿ ಅಭಿನಯಿಸಿರುವುದಾಗಿಯೂ ಅವರು ಹೇಳಿದರು. ನಾಯಕ ದಿಲೀಪ್ ಪೈ ಹಾಗೂ ದೇವ್ ದೇವಯ್ಯ ಕೂಡ ಕಾಗೆಯೇ ಈ ಚಿತ್ರದ ನಿಜವಾದ ನಾಯಕ ಎಂದು ಅಭಿಪ್ರಾಯಪಟ್ಟರು. ಗಾಯಕ ಚೇತನ್ ನಾಯಕ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Spread the love

Continue Reading