Connect with us

Cinema News

ಟೀಸರ್‌ನಲ್ಲೇ ಅಬ್ಬರ, ಆಗಸ್ಟ್ ೧೨ಕ್ಕೆ ಬಿಡುಗಡೆ

Published

on

ಈ ಚಿತ್ರದ ಹೆಸರೇ ಅಬ್ಬರ. ಇಲ್ಲಿ ಎಲ್ಲವೂ ಅಬ್ಬರವಾಗಿರತ್ತೆ, ಇದು ಡೈನಾಮಿಕ್‌ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಕೆ.ರಾಮ್‌ನಾರಾಯಣ್ ಜೋಡಿಯಲ್ಲಿ ಹೊರಬರುತ್ತಿರುವ ಪ್ರಥಮ ಚಿತ್ರದ ಹೈಲೈಟ್. ಈ ಚಿತ್ರದ ಟೀಸರ್ ಬಿಡುಗಡೆ ಹಾಗೂ ರಿಲೀಸ್ ಡೇಟ್ ಅನೌನ್ಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಸ್ತ್ ಮಜಾ ಮಾಡಿ ಟೈಸನ್, ಕ್ರ‍್ಯಾಕ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ ಕೆ.ರಾಮ್‌ನಾರಾಯಣ್ ಇದೀಗ ಪ್ರಜ್ವಲ್ ದೇವರಾಜ್ ಜೊತೆ ಸೇರಿ ಅಬ್ಬರದ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಸಿ. ಅಂಡ್ ಎಂ. ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಕೆ.ರಾಮ್‌ನಾರಾಯಣ್ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಆಕ್ಷನ್, ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿರೋ ಈ ಚಿತ್ರದಲ್ಲಿ ಪ್ರಜ್ವಲ್ ಜೋಡಿಯಾಗಿ ರಾಶಿ ಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ಅಭಿನಯಿಸಿದ್ದಾರೆ. ಪ್ರಜ್ವಲ್ ಮೊದಲಬಾರಿಗೆ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಸದ್ಯದಲ್ಲೇ ಚಿತ್ರವು ಸೆನ್ಸಾರ್ ಅಂಗಳಕ್ಕೆ ಹೋಗಲಿದೆ. ಟೀಸರ್ ಹಾಗೂ ೩ ಹಾಡುಗಳ ಪ್ರದರ್ಶನದ ನಂತರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ನಿರ್ದೇಶಕ ರಾಮ್‌ನಾರಾಯಣ್, ನಿರ್ಮಾಪಕ ಬಸವರಾಜ್ ಮಂಚಯ್ಯ. ಪ್ರಜ್ವಲ್, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ಹಾಜರಿದ್ದು ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು.
ಮೊದಲು ನಿರ್ಮಾಪಕ ಬಸವರಾಜ ಮಂಚಯ್ಯ ಮಾತನಾಡಿ ಶೀರ್ಷಿಕೆಯಷ್ಟೇ ಅಬ್ಬರವಾಗಿ ಚಿತ್ರವೂ ಮೂಡಿಬಂದಿದೆ. ಚಿತ್ರ ಮುಗಿದದ್ದೇ ಗೊತ್ತಾಗಲಿಲ್ಲ, ಫಾರಿನ್ ಸಾಂಗ್ ಅದ್ಭುತವಾಗಿ ಬಂದಿದೆ. ಉಳಿದ ಹಾಡುಗಳೂ ಚೆನ್ನಾಗಿವೆ. ಅಬ್ಬರ ತಂಡದಿಂದ ಅಭಿಮಾನಿಗಳಿಗಾಗಿ ೮-೧೦ ದಿನ ವಿಶೇಷ ರ‍್ಯಾಲಿ ಹಮ್ಮಿಕೊಂಡಿದ್ದೇವೆ. ನಮ್ಮ ಚಿತ್ರದ ಪ್ರೊಮೋಷನ್‌ಗಾಗಿ ಆಗಸ್ಟ್ ಒಂದರಿಂದ ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ಬಿಜಾಪುರ, ಹಾಸನ, ಮಂಡ್ಯ, ಮೈಸೂರು ಹೀಗೆ ರಾಜ್ಯಾದ್ಯಂತ ಟೂರ್ ಮಾಡುತ್ತಿದ್ದೇವೆ, ಪ್ರೊಮೋಷನ್ ಟೈಮ್‌ನಲ್ಲಿ ಚಿತ್ರದ ಒಂದಷ್ಟು ವಿಶೇಷತೆಗಳನ್ನು ರಿವೀಲ್ ಮಾಡುತ್ತಾ ಹೋಗುತ್ತೇವೆ. ನಟ ರವಿಶಂಕರ್ ಅವರ ವಿಲನ್ ಪಾತ್ರಕ್ಕೆ ಎರಡು ಶೇಡ್ ಇದೆ ಎಂದು ಹೇಳಿದರು.

ನಿರ್ದೇಶಕ ರಾಮ್‌ನಾರಾಯಣ್ ಮಾತನಾಡುತ್ತ ಚಿತ್ರದಲ್ಲಿ ಬಹಳಷ್ಟು ವಿಶೇಷತೆಗಳಿವೆ. ಅದೆಲ್ಲವನ್ನೂ ಜನರಿಗೆ ತಿಳಿಸಲೆಂದೇ ೭ ದಿನ ಕರ್ನಾಟಕದಾದ್ಯಂತ ರ‍್ಯಾಲಿ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಪ್ರಜ್ವಲ್ ಅವರಿಗೆ ಬೇರೆ ಚಿತ್ರದ ಶೂಟಿಂಗ್ ಇದ್ದರೂ ಮುಂದೆಹಾಕಿ ಪ್ರೊಮೋಷನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕಮ್ಮಿ ಮಾಡಿಲ್ಲ, ರವಿ ಬಸ್ರೂರು ಒಳ್ಳೇ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಹೀರೋ ೪-೫ ಡೈಮನ್‌ಷನ್‌ನಲ್ಲಿ ಕಾಣಿಸುತ್ತಾರೆ. ರವಿಶಂಕರ್ ಅವರು ಹೀರೋ ಪಾತ್ರಕ್ಕೆ ಸರಿಸಮನಾದ ಕ್ಯಾರೆಕ್ಟರ್ ಮಾಡಿದ್ದಾರೆ. ಇಲ್ಲಿ ಎಲ್ಲರ ಕೆಲಸಗಳಲ್ಲೂ ಅಬ್ಬರ ಇದೆ, ಚಿತ್ರಕ್ಕೆ ೫೦ ದಿನಗಳವರೆಗೆ ಶೂಟಿಂಗ್ ನಡೆಸಿದ್ದು, ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ಆಕ್ಟ್ ಮಾಡಿದ್ದಾರೆ ಎಂದು ಹೇಳಿದರು.
ನಾಯಕ ಪ್ರಜ್ವಲ್ ಮಾತನಾಡುತ್ತ ನನ್ನ ೨೯ನೇ ಚಿತ್ರವಿದು. ಅಬ್ಬರ ಈ ಕಥೆಗೆ ಪರ್‌ಫೆಕ್ಟ್ ಟೈಟಲ್, ೩ ವಿಭಿನ್ನವಾದ ಪಾತ್ರಗಳು, ೫ ರೀತಿಯಲ್ಲಿ ಕಾಣಿಸಿಕೊಳ್ಳುತ್ತೇನೆ. ಒಂದೇದಿನ ಮೂರೂ ಪಾತ್ರಗಳನ್ನು ಮಾಡಬೇಕಾಗಿತ್ತು. ಕಾಮಿಡಿ, ಎಂಟರ್‌ಟೈನಿAಗ್ ಜೊತೆಗೆ ಒಂದು ರಿವೆಂಜ್ ಥಾಟ್
ಚಿತ್ರದಲ್ಲಿದೆ. ಅದು ಚಿತ್ರದ ಲಾಸ್ಟ್ವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ಮೂವರು ನಾಯಕಿಯರ ಜೊತೆಗೂ ೩ ಗೆಟಪ್‌ಗಳಿವೆ. ಒಂದೇಕಡೆ ಮೂರೂ ಜನ ಆತನನ್ನು ಲಾಕ್ ಮಾಡಿದಾಗ ಸಿಕ್ಕಿಹಾಕಿಕೊಳ್ಳುತ್ತಾನೆ. ಮೂರು ಶೇಡ್ ಅಲ್ಲದೆ ಸೂಪರ್‌ಹೀರೋ, ಮತ್ತೊಂದು ಬುಲ್‌ಬುಲ್ ಬಾಬಾ ಗೆಟಪ್ ಕೂಡ ಚಿತ್ರದಲ್ಲಿದೆ. ನಾನು ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿರುತ್ತೇವೆ. ಆದರೆ, ಅದು ಹೋಗ್ತಾ ಹೋಗ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ ಎಂದು ಹೇಳಿದರು.

ನಾಯಕಿ ನಿಮಿಕಾ ರತ್ನಾಕರ್ ಮಾತನಾಡಿ ನನ್ನದು ತುಂಬಾ ಸ್ಪೆಷಲ್ ಪಾತ್ರ. ಇದರಲ್ಲಿ ರೊಮ್ಯಾನ್ಸ್, ಕಾಮಿಡಿ, ಥ್ರಿಲ್ಲರ್ ಹೀಗೆ ಎಲ್ಲಾ ಥರದ ಎಮೋಷನ್ಸ್ ಇದೆ ಎಂದರು. ನಟಿ ಲೇಖಾಚಂದ್ರ ಮಾತನಾಡಿ ಚಿತ್ರದಲ್ಲಿ ನಾನೊಬ್ಬ ಡಾಕ್ಟರ್ ಆದರೂ ನಾನೇ ಪೇಷಂಟ್, ಹಾಡುಗಳನ್ನು ಈಗಲೇ ನೋಡಿದ್ದು, ತುಂಬಾ ಖುಷಿಯಾಯತು ಎಂದು ಹೇಳಿಕೊಂಡರು. ಚಿತ್ರದ ಖಳನಾಯಕನಾಗಿ ರವಿಶಂಕರ್, ಉಳಿದಂತೆ ಶೋಭರಾಜï, ಕೋಟೆ ಪ್ರಭಾಕರ್, ಶಂಕರ್ ಅಶ್ವಥ್, ವಿಕ್ಟರಿವಾಸು, ಪ್ರಶಾಂತ್ ನಟನ, ಅರಸು ಮಹಾರಾಜ್, ಮೋಹನ್ ಜುನೇಜ, ಉಮೇಶ್, ಗೋವಿಂದೇಗೌಡ, ವಿಜಯ್ ಚೆಂಡೂರ್, ಮೂಗು ಸುರೇಶ್, ಸಲ್ಮಾನ್, ಮಮತಾ ರಾಹುತ್ ಮುಂತಾದವರಿದ್ದಾರೆ. ರವಿಬಸ್ರೂರ್ ಅವರ ಸಂಗೀತ ಸಂಯೋಜನೆಯಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್, ರಾಮ್ ನಾರಾಯಣ್, ವಿಜಯ ಭರಮಸಾಗರ ಸಾಹಿತ್ಯ ಬರೆದಿದ್ದಾರೆ. ಜೆ.ಕೆ. ಗಣೇಶ್ ಅವರ ಛಾಯಾಗ್ರಹಣ, ವೆಂಕಟೇಶ್ ಯುವಿಡಿ ಅವರ ಸಂಕಲನ, ವಿನೋದ್, ಪಳನಿರಾಜು, ಮಾಸ್‌ಮಾದ ಅವರ ಸಾಹಸ, ರಾಮು, ಮೋಹನ್, ಕಲೈ(ಬ್ಯಾಂಕಾಕ್ ಹಾಡು) ಅವರ ನೃತ್ಯನಿರ್ದೇಶನ ಈ ಚಿತ್ರಕ್ಕಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *