Cinema News
ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ ರಣಬೀರ್ ದಂಪತಿ: ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡ ತಾರಾ ಜೋಡಿ

ಕಳೆದ ಎರಡು ತಿಂಗಳ ಹಿಂದೆ ಹಸೆಮಣೆ ಏರಿದ್ದ ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಖಷಿಯ ವಿಷಯವೊಂದನ್ನ ಹಂಚಿಕೊಂಡಿದ್ದಾರೆ. ಈ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಅಲಿಯಾ, ರಣಬೀರ್ ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
ಏಪ್ರಿಲ್ 14ರಂದು ಖ್ಯಾತ ನಟ ರಣಬೀರ್ ಜೊತೆ ಹಸೆಮಣೆ ಏರಿದ್ದ ನಟಿ ಅಲಿಯಾ ಭಟ್ ಗರ್ಭಣಿ ಆಗಿರುವ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತಿ ರಣಬೀರ್ ಜೊತೆ ಆಸ್ಪತ್ರೆಯಲ್ಲಿರುವ ಫೋಟೋವನ್ನು ಶೇರ್ ಮಾಡಿ ‘ನಮ್ಮ ಮಗು ಶೀಘ್ರದಲ್ಲೇ ಬರ್ತಿದೆ’ ಎಂದು ಹೇಳಿದ್ದಾರೆ. ಅಲಿಯಾ ಭಟ್ ಗುಡ್ ನ್ಯೂಸ್ ಶೇರ್ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಚಿತ್ರರಂಗದ ಉತ್ತುಂಗದಲ್ಲಿರುವ ನಟಿ ಅಲಿಯಾ ಭಟ್ ತಾಯಿಯಾಗುತ್ತಿರುವ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ನಟಿಯರು ಹೆಚ್ಚಾಗಿ ವೃತ್ತಿ ಜೀವನದ ಕಡೆ ಗಮನಹರಿಸುತ್ತಾರೆ. ಅದರಲ್ಲೂ ಅಲಿಯಾ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಸಾಲಿನಲ್ಲಿದ್ದು ಬಹುಬೇಡಿಕೆ ಇರುವಾಗಲೇ ತಾಯಿಯಾಗುವ ನಿರ್ಧಾರ ಮಾಡಿದ್ದಾರೆ.. ಸದ್ಯ ಅಲಿಯಾ ಬಳಿ ಡಾರ್ಲಿಂಗ್ ಮತ್ತು ಬ್ರಹ್ಮಾಸ್ತ್ರ ಚಿತ್ರೀಕರಣ ಮುಗಿಸಿದ್ದು, . ಇನ್ನು ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮತ್ತು ಹಾರ್ಟ್ ಅಫ್ ಸ್ಟೋನ್ ಸಿನಿಮಾ ಅಲಿಯಾ ಕೈಯಲ್ಲಿದೆ.
