Connect with us

Cinema News

ಹಳೆಯ ನೆನಪಿನ ಶೀರ್ಷಿಕೆ, ಹೊಸ ಕಥೆ; ಈ ವಾರ ತೆರೆಗೆ ‘ಅಮೇರಿಕಾ ಅಮೇರಿಕಾ ೨’

Published

on

ಮೂರು ದಶಕಗಳ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಅಮೇರಿಕಾ ಅಮೇರಿಕಾ’ ಚಿತ್ರ ಕನ್ನಡ ಸಿನಿಪ್ರೇಕ್ಷಕರ ಮನ ಗೆದ್ದು ಭರ್ಜರಿ ಯಶಸ್ಸು ದಾಖಲಿಸಿತ್ತು. ಆ ಚಿತ್ರದ ಸ್ಮರಣೀಯ ಶೀರ್ಷಿಕೆ ಇದೀಗ ಮತ್ತೊಮ್ಮೆ ಬೆಳ್ಳಿತೆರೆಗೆ ಬರುತ್ತಿದ್ದು, ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಅಮೇರಿಕಾ ಅಮೇರಿಕಾ ೨’ ಎಂಬ ಹೆಸರಿನ ಹೊಸ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆದರೆ ಈ ಸಿನಿಮಾ ಮೊದಲ ಭಾಗದ ಮುಂದುವರಿದ ಕಥೆಯಲ್ಲ ಎಂಬುದು ವಿಶೇಷ.

ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಅಮೇರಿಕಾ ಅಮೇರಿಕಾ ೨’ ಚಿತ್ರ ಇದೇ ಸೆಪ್ಟೆಂಬರ್ 11ರಂದು ರಾಜ್ಯ ಸೇರಿದಂತೆ ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರೇ ನಿರ್ವಹಿಸಿದ್ದು, ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆ ಮೂಡಿಸಿದೆ.

ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದು, ಎಸ್.ಕೆ. ರಾವ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಶ್ರೀ ಕ್ರೇಜಿಮೈಂಡ್ಸ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ತಾಂತ್ರಿಕವಾಗಿ ಸಮೃದ್ಧವಾಗಿರುವ ಈ ಸಿನಿಮಾ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಮತ್ತೊಂದು ವಿಭಿನ್ನ ಪ್ರಯತ್ನವಾಗಿ ಮೂಡಿಬಂದಿದೆ.

ನಿರೂಪ್ ಭಂಡಾರಿ, ಪೃಥ್ವಿ ಅಂಬರ್ ಹಾಗೂ ಶಾನ್ವಿ ಶ್ರೀವಾಸ್ತವ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಅಚ್ಯುತಕುಮಾರ್, ರೀತು ಸಿಂಗ್, ಮಂಡ್ಯ ರಮೇಶ್, ಮಾನಸಿ ಸುಧೀರ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ತಾರಾಬಳಗದಲ್ಲಿದ್ದಾರೆ. ಮೂರು ದಶಕಗಳ ಹಿಂದಿನ ಜನಪ್ರಿಯ ಶೀರ್ಷಿಕೆಯೊಂದಿಗೆ ಹೊಸ ಕಥೆಯನ್ನು ಹೇಳಲು ಬರುತ್ತಿರುವ ‘ಅಮೇರಿಕಾ ಅಮೇರಿಕಾ ೨’ ಚಿತ್ರದತ್ತ ಇದೀಗ ಸಿನಿಪ್ರೇಕ್ಷಕರ ಚಿತ್ತ ನೆಟ್ಟಿದೆ.

Spread the love

Continue Reading