Connect with us

News

ಫೆಬ್ರವರಿ 24 ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಮನಸಾರೆ”

Published

on

ಪ್ರಸಿದ್ಧ ಉದಯ ವಾಹಿನಿಯು ಮತ್ತೊಂದು ವಿಭಿನ್ನ ಕಥೆಯೊಂದಿಗೆ ಜನರ ಮುಂದೆ ಬಂದಿದೆ. ಎಲ್ಲರೂ ಮನಸಾರೆ ಒಪ್ಪಿಕೊಳ್ಳುವ ಧಾರಾವಾಹಿ “ಮನಸಾರೆ” ಫೆಬ್ರವರಿ 24ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

“ಮನಸಾರೆ” ಎಂಬ ಶೀರ್ಷಿಕೆಯಡಿ ಸಂಬಂಧಗಳ ಸುಂದರ ಕಥೆಯನ್ನು ಹೇಳ ಹೊರಟಿದೆ. ಅಪ್ಪನ ಪ್ರೀತಿಗೆ ಹವಣಿಸೋ ಹಿರಿಮಗಳು, ಪ್ರೀತಿಯ ಕಣಜ ಹೊತ್ತು ನಿಂತಿರೋ ಕಿರಿಮಗಳು, ಒಂಭತ್ತು ತಿಂಗಳು ಹೊತ್ತು ಹೆರದಿದ್ದರೂ ಕರುಳಬಳ್ಳಿಯಂತೆ ಕಾಪಾಡೋ ಮಲತಾಯಿ, ಅಕ್ಕ-ತಂಗಿಯರ ಒಡನಾಟ ಈ ಕಥೆಯ ಪ್ರಮುಖಾಂಶ. ವರ್ಷಗಳಿಂದ ತನ್ನ ಕನಸುಗಳ ಕೋಟೆಗೆ ಬಣ್ಣ ತುಂಬಿ ಅಪ್ಪನ ಪ್ರೀತಿಗೆ ಕಾಯ್ತಿರೋ ಹೂಮನಸ್ಸಿನ ಹುಡುಗಿ ಈ ಕಥೆಯ ನಾಯಕಿ. ಎಲ್ಲಾ ಧಾರಾವಾಹಿಗಳಂತೆ ಈ ಮನೆಯಲ್ಲಿ ಯಾವುದೇ ಖಳನಾಯಕಿಯರಿಲ್ಲ. ಯಾವುದೇ ಕಷ್ಟ – ಸವಾಲೆದುರಾದರೂ ಒಟ್ಟಾಗಿ ನಿಂತು ಎದುರಿಸುವ ಮಾದರಿ ಮಹಿಳಾಮಣಿಯರ ಘಟಕ ಈ ಧಾರಾವಾಹಿಯ ಜೀವಾಳ.

ಇನ್ನೂ ಈಗಾಗಲೇ ಉದಯ ಟಿವಿಯಲ್ಲಿ ‘ಅವಳು’ ಧಾರಾವಾಹಿಯನ್ನು ಜನರಿಗರ್ಪಿಸಿ ಮನರಂಜನೆಯ ರಸದೌತಣ ಉಣಬಡಿಸಿರುವ ಧ್ರುವ್ ಮೀಡಿಯಾ ಕ್ರಾಫ್ಟ್ ಸಂಸ್ಥೆಯ ನಿರ್ಮಾಪಕರಾದ ಗುರುರಾಜ್ ಕುಲಕರ್ಣಿ ಮತ್ತೊಮ್ಮೆ ಹೊಸ ಬಗೆಯ ಕಥೆಯ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕ್ಯಾಮೆರಾ ಕೈ ಚಳಕದಲ್ಲಿ ಗೆದ್ದಿರುವ ರವಿಕಿಶೋರ್ ನಿರ್ದೇಶನ ಮಾಡುತ್ತಿದ್ದು, ಗಿರಿಧರ್ ದಿವಾನ್ ಶೀರ್ಷಿಕೆ ಗೀತೆಯ ಸಂಯೋಜನೆ ಮಾಡಿದ್ದಾರೆ.

ಧಾರಾವಾಹಿಯಲ್ಲಿ ತಾರೆಯರ ಸಮಾಗಮವೇ ಇದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಚೇರಮನ್, ನಟ, ನಿರ್ದೇಶಕ, ನಿರ್ಮಾಪಕ ಸುನೀಲ್ ಪುರಾಣಿಕ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿರಿಯ ರಂಗಭೂಮಿ ಕಲಾವಿದೆ ಜಯಲಕ್ಷ್ಮಿ, ನಟಿ ಯಮುನಾ ಶ್ರೀನಿಧಿ, ಮುದ್ದು ಮುಖದ ಸ್ವಾತಿ ವಿವಿಧ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಜೈ ಹನುಮಾನ್ ಧಾರಾವಾಹಿಯಲ್ಲಿ ಮಿಂಚಿದ್ದ ಚೆಲುವೆ ಪ್ರಿಯಾಂಕ ಚಿಂಚೋಳಿ ಕಥೆಯ ನಾಯಕಿಯಾಗಿದ್ದಾರೆ. ತುಂಟ ಹುಡುಗಿಯಾಗಿ ಪ್ರಕೃತಿ ಮತ್ತು ನಾಯಕನಾಗಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಖಳನಾಯಕನಾಗಿ ಗುರುತಿಸಿಕೊಂಡಿರುವ ವಿಜಯ್ ಕೌಂಡಿಣ್ಯ ಹಾಗೂ ಕಿರುತೆರೆಯ ರಿಯಲ್ ಜೋಡಿಗಳಲ್ಲಿ ಒಂದಾದ ಸುನೇತ್ರಾ ಪಂಡಿತ್ ಮತ್ತು ರಮೇಶ್ ಪಂಡಿತ್ ಮನಸಾರೆ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿದ್ದಾರೆ.

ಮಗಳನ್ನು ದ್ವೇಷಿಸೋ ಅಪ್ಪ, ಅವನ ಪ್ರೀತಿಗೆ ಮನಸಾರೆ ಕಾಯುತ್ತಿರುವ ಮಗಳ ಕಥೆ “ಮನಸಾರೆ” ನೋಡುಗರ ಮನಸೆಳೆಯಲು ಇದೇ ಫೆಬ್ರವರಿ 24 ರಿಂದ, ಸೋಮವಾರದಿಂದ ಶನಿವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *