Connect with us

Cinema News

13 ಸಿನಿಮಾ ವಿಮರ್ಶೆ – ರೇಟಿಂಗ್ 3/5

Published

on

ಧರ್ಮಗಳ ನಡುವಿನ ಪ್ರೀತಿಯ ಕಥೆಯಲ್ಲಿ ಯಾವಾಗಲೂ ಒಂದು ಥ್ರಿಲ್ಲಿಂಗ್‌ ಅಂಶವಿರುತ್ತದೆ. ಆದರೆ ಆ ರೀತಿಯ ಪ್ರೀತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ದೇಶಕ ನರೇಂದ್ರ ಬಾಬು ‘13’ ಎಂಬ ಸಿನಿಮಾ ಮಾಡಿದ್ದಾರೆ.

ಮೋಹನ್‌ [ರಾಘವೇಂದ್ರ ರಾಜ್‌ಕುಮಾರ್‌]ಮತ್ತು ಸಾಹಿರಾ ಭಾನು[ ಶ್ರುತಿ] ಇಬ್ಬರೂ ಅನ್ಯೋನ್ಯವಾಗಿ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿರುತ್ತಾರೆ. ತಮ್ಮ ಪ್ರೀತಿಗೆ ಯಾರ ಕಣ್ಣು ಬೀಳದಂತೆ ಜೀವ ನಡೆಸುತ್ತಿರುವ ಈ ಜೋಡಿಯ ಬದುಕಿನಲ್ಲಿಯೂ ಹಣ ಆಟವಾಗುತ್ತದೆ. ಅದು ಹೇಗೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

13 ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆ ಮಾಡುವ ಐಡಿಯಾ ಮಾಡಿರುವುದರಿಂದ, ಮೊದಲ ಭಾಗದಿಂದ ಎರಡನೇ ಭಾಗಕ್ಕೆ ಒಂದಷ್ಟು ಲಿಂಕ್‌ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಇನ್ನೊಂದಿಷ್ಟು ತಯಾರಿಯ ಅಗತ್ಯ ಇತ್ತು ಎನಿಸುತ್ತದೆ. ಸಿನಿಮಾದಲ್ಲಿ ಅಲ್ಲಲ್ಲಿ ಥ್ರಿಲ್ಲಿಂಗ್‌ ಅಂಶಗಳಿವೆ ಆದರೆ, ಅದನ್ನು ನಿರ್ದೇಶಕರು ತೆರೆ ಮೇಲೆ ಸರಿಯಾಗಿ ತೋರಿಸುವ ಪ್ರಯತ್ನ ಮಾಡಿಲ್ಲ. ಹಾಗೆ ಮಾಡಿದ್ದರೆ ಇದು ಒಂದೊಳ್ಳೆ ಥ್ರಿಲ್ಲರ್‌ ಚಿತ್ರವಾಗುತ್ತಿತ್ತು.

ಸಿನಿಮಾದ ಅವಧಿ ಕಡಿಮೆ ಇದ್ದರೂ ಸಹ ಅಲ್ಲಲ್ಲಿ ಬೋರ್‌ ಎನಿಸುತ್ತದೆ. ರಾಘವೇಂದ್ರ ರಾಜ್‌ ಕುಮಾರ್‌, ಮೋಹನ್‌ ಕುಮಾರ್‌ ಪಾತ್ರಕ್ಕೆ ಪಕ್ಕಾ ಸೂಟ್‌ ಆಗಿದ್ದಾರೆ. ಶ್ರುತಿ ಉಳಿದೆಲ್ಲ ಸಿನಿಮಾಗಳಿಗಿಂತಲೂ ಕೊಂಚ ಹೈಪರ್‌ ಆಗಿ ನಟಿಸಿದ್ದಾರೆ. ಅಲ್ಲಲ್ಲಿ ನಗಿಸುತ್ತಾರೆ ಕೂಡಾ. ಪ್ರಮೋದ್‌ ಶೆಟ್ಟಿ ಪಕ್ಕಾ ವಿಲನ್‌ ರೀತಿಯಲ್ಲಿಯೇ ನಟಿಸಿದ್ದಾರೆ. ಉಳಿದಂತೆ ಲೋಕಿ, ಸೂರಜ್‌ ನಗಿಸುವ ಪ್ರಯತ್ನ ಮಾಡಿದರೂ ಅದು ಅಷ್ಟೇನು ವರ್ಕ್‌ ಆಗಿಲ್ಲ. ಶೋಗನ್‌ ಬಾಬು ಸಂಗೀತ ಮತ್ತು ಅಜಯ್‌ ಮಂಜು ಸಿನಿಮಾಟೋಗ್ರಫಿ ಚಿತ್ರದ ಕಥೆಗೆ ಪೂರಕವಾಗಿದೆ.

ನಿರ್ದೇಶಕರು ಹಲವು ಸೂಕ್ಷ್ಮವಾದ ವಿಷಯಗಳನ್ನು ಕೊಂಚ ಸೆನ್ಸಿಬಲ್‌ ಆಗಿ ಹ್ಯಾಂಡಲ್‌ ಮಾಡಿರುವುದು ಅವರ ಹೆಚ್ಚುಗಾರಿಕೆ. ಇನ್ನೊಂದಿಷ್ಟು ಪ್ರಯತ್ನ ಪಟ್ಟಿದ್ದರೆ ಈಗಿರುವುದಕ್ಕಿಂತಲೂ ಒಳ್ಳೆ ಸಿನಿಮಾವಾಗುತ್ತಿತ್ತು ಎನಿಸುತ್ತದೆ. ಆದರೂ ಒಮ್ಮೆ ನೋಡಲು ಅಡ್ಡಿ ಇಲ್ಲ. 

Spread the love

Continue Reading
Click to comment

Leave a Reply

Your email address will not be published. Required fields are marked *