Connect with us

Cinema News

ಆರ್ ಆರ್ ಆರ್ ಸಿನಿಮಾ ಸಲಿಂಗ ಪ್ರೇಮ ಎಂದು ಆಸ್ಕರ್ ವಿಜೇತ ನಿರ್ದೇಶಕ, ಗೇ ಸಿನಿಮಾ ಆಗಿದ್ದರೆ ತಪ್ಪೇನು ಎಂದ ಬಾಹುಬಲಿ ನಿರ್ಮಾಪಕ

Published

on

ಮೂವಿ ಮಾಂತ್ರಿಕ ರಾಜಮೌಳಿ ಸಿನಿಮಾಗಳು ಸೂಪರ್ ಹಿಟ್ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಇದೇ ಕಾರಣಕ್ಕೆ ಸಾಕಷ್ಟು ಸ್ಟಾರ್ ನಟರು ರಾಜಮೌಳಿ ಸಿನಿಮಾದಲ್ಲಿ ನಟಿಸೋಕೆ ತುದಿಗಾಲಲ್ಲಿ ನಿಂತಿರ್ತಾರೆ. ಇತ್ತೀಚೆಗೆ ತೆರೆಕಂಡ ಆರ್ ಆರ್ ಆರ್ ಸಿನಿಮಾವನ್ನ ಸಾಕಷ್ಟು ಜನ ಮೆಚ್ಚಿಕೊಂಡಿದ್ದು ಮತ್ತೊಂದಷ್ಟು ಮಂದಿ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. RRR ಸಿನಿಮಾದ ಬಗ್ಗೆ ಆಸ್ಕರ್ ಪ್ರಶಸ್ತಿ ಗೆದ್ದ ಭಾರತ ತಂತ್ರಜ್ಞರೊಬ್ಬರು ಅಸಂಬಂಧ ಹೇಳಿಕೆ ನೀಡಿದ್ದು, ಅದಕ್ಕೆ ‘ಬಾಹುಬಲಿ’ ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಖಡಕ್ ತಿರುಗೇಟು ನೀಡಿದ್ದಾರೆ.
400 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಆರ್ ಆರ್ ಆರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 1130 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ಮೂಲಕ ರಾಜಮೌಳಿಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು.

RRR.. ಜೂ. ಎನ್ಟಿಆರ್, ರಾಮ್ ಚರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ. ‘ರೌದ್ರಂ ರಣಂ ರುಧಿರಂ’ (RRR) ಎಂಬ ಟೈಟಲ್ ಇಟ್ಟು ತೆಲುಗು, ಮಲಯಾಳಂ, ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತದಲ್ಲಿ ಸಿಕ್ಕಿರೋ ಅದ್ಭುತ ಯಶಸ್ಸಿನ ಬೆನ್ನಲೇ ಈ ಚಿತ್ರವನ್ನು ಐದು ವಿದೇಶಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಆಲೋಚಿಸಿದ್ದಾರೆ.
ಇಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಆರ್ ಆರ್ ಆರ್ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಗೆದ್ದ ಭಾರತೀಯ ತಂತ್ರಜ್ಞ ರಸುಲ್ ಪೂಕುಟ್ಟಿ ಟ್ವೀಟ್ ಮಾಡಿ, “ಈ ಚಿತ್ರ ಸಲಿಂಗಕಾಮಿ ಪ್ರೇಮಕಥೆ” ಎಂದಿದ್ದರು.
ರಸುಲ್ ಪೂಕುಟ್ಟಿ ಹೇಳಿಕೆಗೆ ಬಾಹುಬಲಿ ನಿರ್ಮಾಪಕ ಶೋಭು ಯರ್ಲಗಡ್ಡ ತಿರುಗೇಟು ನೀಡಿದ್ದಾರೆ. ” ರಸುಲ್ ಪೂಕುಟ್ಟಿ RRR ಸಿನಿಮಾ ನೋಡಿ ‘ಗೇ ಲವ್ ಸ್ಟೋರಿ’ ಎಂದು ಭಾವಿಸಿದಿರಲ್ಲ. ಇದು ನಿಜವಾಗಿಯೂ ‘ಗೇ ಲವ್ ಸ್ಟೋರಿ’ ಆಗಿದ್ದರೆ ಅದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ “ನಿಮ್ಮ ಕಾಮೆಂಟ್ಗಳನ್ನು ಸಮರ್ಥಿಸಿಕೊಳ್ಳುತ್ತೀರಾ? ನಿಮ್ಮಂತಹವರು ಇಂತಹ ಕಾಮೆಂಟ್ ಮಾಡುವುದು ಒಳ್ಳೆಯದಲ್ಲ.” ಎಂದು ಟ್ವೀಟ್ ಮಾಡಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *