Connect with us

Cinema News

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ ಜೂ.ಎನ್ ಟಿ ಆರ್ ನಂಬರ್ ಗೆ ಕರೆ ಮಾಡಿ ಬೆಸ್ತು ಬಿದ್ದ ಅಭಿಮಾನಿಗಳು

Published

on

ಸಾಕಷ್ಟು ನಟರ ತಾವು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಸ್ಟಾರ್ ಗಳು ಎಂದು ಸಾಭಿತು ಪಡಿಸಿದ್ದಾರೆ. ಇದೀಗ ಜೂನಿಯರ್ ಎನ್ ಟಿ ಆರ್ ಕೂಡ ತಾವು ರಿಯಲ್ ಲೈಫ್ ನಲ್ಲೂ ಸ್ಟಾರ್ ಎಂದು ಸಾಬೀತು ಮಾಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಮಾನಿಯ ತಾಯಿಗೆ ಸ್ಪಂದಿಸಿದ್ದಾರೆ. ಆದರೆ ಈ ಸಮಯದಲ್ಲಿ ಅವರ ನಂಬರ್ ಲೀಕ್ ಆಗಿದೆ ಎನ್ನಲಾಗುತ್ತಿದೆ.
ಪ್ರಾಣಾಪಾಯದಲ್ಲಿದ್ದ ಅಭಿಮಾನಿಯ ತಾಯಿಗೆ ಕರೆ ಮಾಡಿ ಜೂನಿಯರ್ ಎನ್ ಟಿ ಆರ್ ಮಾತನಾಡಿದ್ದಾರೆ. ಸಿನಿಮಾದಲ್ಲಷ್ಟೇ ಅಲ್ಲ, ರಿಯಲ್ ಲೈಫ್ ನಲ್ಲೂ ರಿಯಲ್ ಹೀರೋ ಅನಿಸಿಕೊಂಡಿದ್ದಾರೆ. ಆದರೆ ಎನ್ ಟಿಆರ್ ಮಾತನಾಡಿದ ಫೋನ್ ನಂಬರ್ ರಿವೀಲ್ ಆಗಿದೆ. ತಕ್ಷಣವೇ ಅಭಿಮಾನಿಗಳು ಆ ನಂಬರ್ ಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ.
ಜೂ.ಎನ್ ಟಿಆರ್ ಅಭಿಮಾನಿ ಜನಾರ್ದನ್ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್ ಟಿಆರ್ ತಮ್ಮ ಅಭಿಮಾನಿಯ ಅಮ್ಮನಿಗೆ ಫೋನ್ ಮಾಡಿ ಜನಾರ್ದನ್ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಜನಾರ್ಧನ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದು, ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಕರೆ ರೆಕಾರ್ಡಿಂಗ್ ಅನ್ನು PRO ಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಅವರ ಫೋನ್ ನಂಬರ್ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿ ಪ್ರೇಕ್ಷಕರು ಎನ್ ಟಿಆರ್ ಮಾತಿನ ಬದಲು ಫೋನ್ ನಂಬರ್ ನೋಡಿದ್ದಾರೆ. ಎನ್ ಟಿಆರ್ ಮಾತನಾಡುತ್ತಿದ್ದ ಫೋನ್ ನಂಬರ್ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬಂದಿದ್ದು, ಕೂಡಲೇ ಎಲ್ಲರೂ ಸೇವ್ ಮಾಡಿ ಕರೆ ಮಾಡಲು ಆರಂಭಿಸಿದ್ದಾರೆ.
ಎಲ್ಲರೂ ಆ ನಂಬರ್ ಗೆ ಎನ್ ಟಿಆರ್ ಅವರ ನಂಬರ್ ಎಂದು ತಪ್ಪಾಗಿ ತಿಳಿದು ಕಾಲ್ ಮಾಡಿದ್ದಾರೆ. ಆದರೆ ಆ ನಂಬರ್ ಎನ್ ಟಿಆರ್ ಅವರದ್ದಲ್ಲ, ಎನ್ ಟಿಆರ್ ಆರ್ಟ್ಸ್ ಹೆಸರಿನಲ್ಲಿದೆಯಂತೆ. ಆದರೆ ಈ ವಿಡಿಯೋ ನೋಡಿದವರೆಲ್ಲಾ ಇದು ಎನ್ ಟಿಆರ್ ಅವರ ನಂಬರ್ ಎಂದು ಭಾವಿಸಿ ಅವರ ಜೊತೆ ಮಾತನಾಡಲು ಯತ್ನಿಸುತ್ತಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *