Connect with us

Cinema News

ನರೇಶ್- ಪವಿತ್ರ ಲೋಕೇಶ್ ಕಳೆದ 8 ವರ್ಷಗಳಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ: ನರೇಶ್ ಮೂರನೇ ಪತ್ನಿ ರಮ್ಯಾ ಸ್ಫೋಟಕ ಹೇಳಿಕೆ

Published

on

ಕಳೆದೊಂದು ವಾರದಿಂದ ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಮದುವೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಇದುವರೆಗೂ ಪ್ರಕರಣದ ಬಗ್ಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಯಾವುದೇ ಹೇಳಿಕೆ ನೀಡಿಲ್ಲ. ಈ ಮಧ್ಯೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಪತಿ ಬಗ್ಗೆ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಈಗಾಗಲೇ ಮದುವೆಯಾಗಿದ್ದಾರೆ. ಮೂರನೇ ಪತಿ ರಮ್ಯಾ ರಘುಪತಿಗೆ ವಿಚ್ಛೇದನ ನೀಡದೆ ನಾಲ್ಕನೇ ಮದುವೆಯಾಗಿದ್ದಾರೆ ಎನ್ನುವ ಕೇಳಿಬಂದಿತ್ತು.ಈ ಬಗ್ಗೆ ನರೇಶ್ ಮೂರನೇ ಪತ್ನಿ ರಮ್ಯಾ ಮಾತನಾಡಿದ್ದಾರೆ.
” ನರೇಶ್ ಒಬ್ಬ ಹೆಣ್ಣುಬಾಕ. ಆತ ಹೆಣ್ಣುಬಾಕ ಅನ್ನುವುದು ಮದುವೆಯಾದ ಮೂರು ವರ್ಷಕ್ಕೆ ತಿಳಿಯಿತು. ಒಳ್ಳೆ ಮಾತಿನಲ್ಲಿ ಹೇಳಿದ್ದು ಆಯ್ತು. ಅತ್ತು ಹೇಳಿದ್ದಾಯ್ತು. ನಮ್ಮ ಅತ್ತೆಯವರದ್ದು ತುಂಬು ಕುಟುಂಬ. ಎಲ್ಲರೂ ಒಟ್ಟಿಗೆ ಇರುತ್ತೇವೆ. ಪ್ರತಿಯೊಂದು ಕ್ಷಣವನ್ನು ಅನುಭವಿಸೋಣ ಎಂದು ಹೇಳಿದ್ದರು. ಬಳಿಕ ಅದೆಲ್ಲಾ ಹೊರಟು ಹೋಯ್ತು.” ಎಂದಿದ್ದಾರೆ.
ತೆಲುಗು ನಟ ನರೇಶ್ ಅವರನ್ನು ರಮ್ಯಾ ರಘುಪತಿ ಅವರನ್ನ ಪ್ರೀತಿಸಿ ಮನೆಯವರ ವಿರೋಧದ ನಡುವೆಯು ವಿವಾಹವಾಗಿದ್ದರು. ಆದರೂ, ನರೇಶ್ ತನಗೆ ಮೋಸ ಮಾಡಿದ್ದಾನೆ ಎಂದು ರಮ್ಯಾ ಆರೋಪ ಮಾಡಿದ್ದಾರೆ. ನರೇಶ್ ಗಿರೋ ಮಹಿಳೆಯೊಂದಿಗಿನ ಅಫೇರ್ನಿಂದ ಬೇಸತ್ತು ಹೋಗಿದ್ದೇನೆ ಎಂದು ರಮ್ಯಾ ಬೇಸರ ಹೊರ ಹಾಕಿದ್ದಾರೆ.

” ಪವಿತ್ರಾ ಲೋಕೇಶ್ ಹಾಗೂ ನರೇಶ್ ಕಳೆದ 6 ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಫ್ನಲ್ಲಿದ್ದಾರೆ. ಈಗ ಅವರು ಮದುವೆ ಆಗಲು ಹೊರಟಿದ್ದಾರೆ. ನನಗೆ ಜನವರಿಯಲ್ಲಿ ನೋಟಿಸ್ ಕಳುಹಿಸಿದ್ದರು. ಮಗುವನ್ನು ತನ್ನ ಕಸ್ಟಡಿಗೆ ಕೇಳಿದ್ದಾರೆ. ನರೇಶ್ ಮದುವೆ ಆದಲ್ಲಿಂದ ನನ್ನನ್ನು ನಾನು ಕಳೆದುಕೊಂಡಿದ್ದೇನೆ. ಸ್ನೇಹಿತರು, ಉದ್ಯಮ, ಪತ್ನಿ ಅನ್ನುವ ಪಟ್ಟ, ಈಗ ಮಗನನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ.” ಎಂದು ರಮ್ಯಾ ಆರೋಪ ಮಾಡಿದ್ದಾರೆ.
ನಟ ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದು, ನಾಲ್ಕನೇ ಮದುವೆ ತಯಾರಿ ನಡೆಸಿದ್ದಾರೆ. ಮೊದಲ ಪತ್ನಿ ಆಂಧ್ರ ಮೂಲದವರಾಗಿದ್ದು, ಅವರಿಗೆ ಒಬ್ಬ ಮಗನಿದ್ದಾನೆ. ಎರಡನೇ ಪತ್ನಿ ತಮಿಳುನಾಡು ಮೂಲದವರಾಗಿದ್ದು ಅವರಿಗೆ ಒಬ್ಬ ಪುತ್ರನಿದ್ದಾನೆ. ಮೂರನೇ ಪತ್ನಿ ರಮ್ಯಾ ರಘುಪತಿ ಕರ್ನಾಟಕ ಮೂಲದವರಾಗಿದ್ದು ಇವರಿಗೂ 8 ವರ್ಷದ ಒಬ್ಬ ಮಗನಿದ್ದಾನೆ. ಈಗ ಪವಿತ್ರಾ ಲೋಕೇಶ್ ಅವರನ್ನು ನಾಲ್ಕನೇ ಮದುವೆ ಆಗಲಿದ್ದಾರೆ ಎಂದು ರಮ್ಯಾ ಆರೋಪ ಬಹಿರಂಗ ಆರೋಪ ಮಾಡಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *