Cinema News
ಚಾರ್ಲಿಯನ್ನು ಮೆಚ್ಚಿಕೊಂಡ ನಟ ಜಾನ್ ಅಬ್ರಾಹಂ

ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡ್ತಿದೆ. ಈಗಾಗ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ. ಜೊತೆಗೆ ಇತ್ತೀಚೆಗಷ್ಟೇ ಸಿನಿಮಾ ನೋಡಿದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇದೀಗ ನಟ ಜಾನ್ ಅಬ್ರಾಹಂ ಚಿತ್ರ ಸಿನಿಮಾವನ್ನ ಇಷ್ಟಪಟ್ಟಿದ್ದಾರೆ.
ಈ ಬಗ್ಗೆ 777 ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್ ರಾಜ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ., ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ ಜಾನ್ ಅಬ್ರಾಹಂ ಅವರಿಗೆ ಧನ್ಯವಾದ ಎಂದಿದ್ದಾರೆ. ಕಿರಣ್ ರಾಜ್ ಅವರಿಗೆ ಜಾನ್ ಕಾಲ್ ಮಾಡಿದ್ದಾರಂತೆ, ಅವರು ಸದ್ಯಕ್ಕೆ ಟ್ರೈಲರ್ ನೋಡಿದ್ದು, ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರಂತೆ. ಜೊತೆಗೆ ಸಿನಿಮಾವನ್ನು ಬೇಗ ನೋಡುತ್ತೇನೆ ಎಂದಿದ್ದು, ಕೇವಲ ಟ್ರೈಲರ್ ನೋಡಿಯೇ ಬಹಳ ಇಷ್ಟಪಟ್ಟಿದ್ದಾರಂತೆ. ಯಶ್ ನಟನೆಯು ಕೆಜಿಎಫ್ ಸಿನಿಮಾದ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಈ ಮಟ್ಟಿಗಿನ ಪ್ರತಿಕ್ರಿಯೆ ದೊರೆಯುತ್ತಿದೆ.
777 ಚಾರ್ಲಿ ಸಿನಿಮಾ ಕಲೆಕ್ಷನ್ ನಲ್ಲೂ ಕಮಾಲ್ ಮಾಡ್ತಿದೆ.
ಬಿಡುಗಡೆಯಾದ ಮೊದಲ ದಿನ 6 ಕೋಟಿ ಗಳಿದ್ದ ಸಿನಿಮಾ, ಎರಡನೇ ದಿನ 8 ಕೋಟಿ, ಮೂರನೇ ದಿನ 10 ಕೋಟಿ ಕಲೆಕ್ಷನ್ ಮಾಡಿತ್ತು. ನಂತರ ನಾಲ್ಕನೇ ದಿನದಿಂದ ಸ್ವಲ್ಪ ಕಲೆಕ್ಷನ್ ಕಡಿಮೆಯಾಗಿದ್ದು, ನಿನ್ನೆ ಹಾಗೂ ಮೊನ್ನೆ ಸಹ ಗಳಿಕೆಯಲ್ಲಿ ಕೊಂಚ ಮಟ್ಟಿಗಿನ ಇಳಿಕೆ ಕಂಡು ಬಂದಿದೆ. ಆದರೆ ಸಿನಿಮಾದ ಬಗ್ಗೆ ಇರುವ ಕ್ರೇಜ್ ಮಾತ್ರ ಸ್ವಲ್ಪವೂ ಕಮ್ಮಿಯಾಗಿಲ್ಲ.
