Cinema News
ಡಾರ್ಲಿಂಗ್ ಕೃಷ್ಣ ಜೊತೆ ರೋಮ್ಯಾನ್ಸ್ ಮಾಡಲಿದ್ದಾರಾ ರಾಧಿಕಾ ಕುಮಾರಸ್ವಾಮಿ??
 
																								
												
												
											 
ನಾಗಶೇಖರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ದಮಯಂತಿ ನಂತರ ರಾಧಿಕಾ ಕುಮಾರಸ್ವಾಮಿ ಅವರು ಬೈರಾದೇವಿ ಸಿನಿಮಾದ ಕೆಲಸಗಳಲ್ಲಿ ನಿರತರಾಗಿದ್ದು, ಈಗ ನಾಗಶೇಖರ್ ಅವರ ಆಫ಼ರ್ ಬಂದಿದೆ ಎನ್ನಲಾಗುತ್ತಿದೆ.
ರಾಧಿಕಾ ಕುಮಾರಸ್ವಾಮಿ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರಾ ಎನ್ನುವುದು ಇನ್ನು ಅಧಿಕೃತವಾಗಿ ಚಿತ್ರತಂಡ ಹೇಳಿಲ್ಲ. ಆದರೆ ಅವರಿಗೆ ಚಿತ್ರದ ಒನ್ ಲೈನ್ ಸ್ಟೋರಿ ಅನ್ನು ಕೇಳಿ ಇಷ್ಟ ಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಅಮರ್ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ಅನ್ನು ನಿರ್ದೇಶಿಸಿದ್ದ ನಾಗಶೇಖರ್ ಅವರು ಈಗ ಡಾರ್ಲಿಂಗ್ ಕೃಷ್ಣ ಅವರನ್ನು ನಿರ್ದೇಶಿಸಲಿದ್ದಾರೆ. “ಲವ್ ಮೊಕ್ಟ್ರೈಲ್” ನಿರ್ಮಿಸಿ, ನಿರ್ದೇಶಿಸಿ, ನಟಿಸಿ ಭರ್ಜರಿ ಗೆಲವು ಕಂಡಿರುವ ಡಾರ್ಲಿಂಗ್ ಕೃಷ್ಣ ಈ ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದಾರೆ. ಈ ಸಿನೆಮಾವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದು, “ಕೃಷ್ಣ@ಜಿಮೈಲ್.ಕಂ” ಎಂದು ಹೆಸರಿಟ್ಟಿದ್ದಾರೆ.
 
 
																	
																															
															Continue Reading
														
																																																																																																
															 
			 
											 
											 
											 
											 
											 
											 
											 
											