Cinema News
ಸಂಚಲನ ಸೃಷ್ಟಿಸಿದ ‘ಪವರ್ ಆಫ್ ಯೂಥ್’ ಹಾಡಿನ ಸ್ಟಿಲ್!

“ಕೆಜಿಎಫ್” ನಂಥ ದೇಶದಾದ್ಯಂತ ಸದ್ದು ಮಾಡಿದ ಸಿನಿಮಾದ ನಂತರ ಹೊಂಬಾಳೆ ಫಿಲಂಸ್ ನಿರ್ಮಿಸಿರುವ “ಯುವರತ್ನ” ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಶುರುವಾಗಿವೆ. ಲಾಕ್ ಡೌನ್ ನಂತರ ಚಿತ್ರರಂಗದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಚಿತ್ರದ ನಾಯಕ ಪುನೀತ್ ರಾಜಕುಮಾರ್ ಅವರು ಚಿತ್ರದ ಡಬ್ಬಿಂಗ್ ಬಹುತೇಕ ಮುಗಿಸಿದ್ದಾರೆ.
ರಾಜಕುಮಾರ ಯಶಸ್ಸಿನ ನಂತರ ಸಂತೋಷ್ ಆನಂದರಾಮ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಥೀಮ್ ಸಾಂಗ್ “ಪವರ್ ಆಫ್ ಯೂಥ್” ಮೇಕಿಂಗ್ ಅದ್ಧೂರಿಯಾಗಿದ್ದು, ಆ ಹಾಡಿನ ಒಂದು ಸ್ಟಿಲ್ ಅನ್ನು ನಿರ್ದೇಶಕರು ಇಂದು ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಆ ಸ್ಟಿಲ್ ಅನ್ನು ಟ್ವಿಟ್ಟರ್ ನಲ್ಲಿ ಅಪ್ಪು ಅಭಿಮಾನಿಗಳು ಟ್ರೆಂಡಿಂಗ್ ನಲ್ಲಿ ತಂದಿದ್ದಾರೆ.

#PowerOfYouth hashtag ಮುಖೇನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಕೊರೊನ ವೈರಸ್ ನಿಂದ ಉಂಟಾಗಿರುವ ಕಷ್ಟಗಳಿಂದ ಕರುನಾಡ ಜನತೆ ಚೇತರಿಸಿಕೊಂಡ ಬಳಿಕ ಯುವರತ್ನ ಚಿತ್ರದ ಹಾಡುಗಳ ಬಿಡುಗಡೆ ಮತ್ತು ಪ್ರಚಾರ ಶುರುವಾಗಲಿದೆ.
