Cinema News
ಅದ್ದೂರಿ ಸೆಟ್ಗಳಲ್ಲಿ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’
 
																								
												
												
											 
ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುವಲ್ಲಿ ಹೆಸರುವಾಸಿಯಾಗಿರುವ ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ,ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷೆಯ, ಪ್ಯಾನ್ ಇಂಡಿಯಾ ಸಿನಿಮಾ `ಕಬ್ಜ`.
ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಬಳ್ಳಾರಿ ಹಾಗೂ ಸಂಡೂರಿನಲ್ಲಿ ಒಟ್ಟು 35ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. 1950ರ ಕಾಲಘಟ್ಟದಲ್ಲಿ ಇದ್ದ ಸ್ಟೀಟ್, ಹೂವಿನ ಮಾರುಕಟ್ಟೆ, ಮಟನ್ ಮಾರುಕಟ್ಟೆ, ಕಡಪ ಜಿಲ್ಲೆಯ ಸರ್ಕಲ್, ಜೈಲ್, ಆಸ್ಪತೆ, ಪೆÇಲೀಸ್ ಸ್ಟೇಷನ್ ಹಾಗೂ ಗ್ಯಾಂಗ್ವಾರ್ನ 8 ಅಡ್ದಗಳ ಸೆಟ್ ಸೇರಿದಂತೆ ಒಟ್ಟು 18 ಸೆಟ್ಗಳು KGF ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅವರ ಸಾರಥ್ಯದಲ್ಲಿ ನಿರ್ಮಾಣವಾಗುತ್ತಿದೆ. ಸೂಪರ್ಸ್ಟಾರ್ ಉಪೇಂದ್ರ, ರಾಹುಲ್ದೇವ್, ನವೀನ್, ಕಾಮರಾಜನ್, ಕೋಟ ಶ್ರೀನಿವಾಸ್, ತೆಲುಗಿನ ಜಯಪ್ರಕಾಶ್, ಕಾಟ್ರಾಜು, ಸುಬ್ಬರಾಜು ಮುಂತಾದವರು ದ್ವಿತೀಯ ಹಂತದ ಚಿತ್ರೀಕರಣದಲ್ಲಿ ಅಭಿನಯಿಸಲಿದ್ದಾರೆ.

ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರೆ ನಿರ್ಮಿಸುತ್ತಿರುವ `ಕಬ್ಜ` ಚಿತ್ರಕ್ಕೆ KGF ಖ್ಯಾತಿಯ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಕೆ ಪುರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ಆರ್.ರಾಜಶೇಖರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಎಸ್ ಸಂಕಲನ, ರಾಜು ಸುಂದರಂ, ಗಣೇಶ್ ಆಚಾರ್ಯ, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಜಯ್, ವಿಕ್ರಂ ಮೋರ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಾಮರಾಜನ್(ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್ ರಾಹುಲ್ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ರಾಜು, ಸುಬ್ಬರಾಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 
 
																	
																															 
			 
											 
											 
											 
											 
											 
											 
											 
											