Cinema News
ರಿಷಿಗೆ ರಚಿತಾ ರಾಮ್ ಜೋಡಿ

ಯೋಗರಾಜ್ ಭಟ್ ಮತ್ತು ಶಶಾಂಕ್ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ರಿಷಿ ನಾಯಕ ಎಂದು ಈಗಾಗಲೇ ಸುದ್ದಿಯಾಗಿದೆ. ಈ ಸಿನಿಮಾದಲ್ಲಿ ರಿಷಿಗೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ.
ಆಪರೇಶನ್ ಅಲಮೇಲಮ್ಮ ಚಿತ್ರದ ನಂತರ ರಿಷಿ ಸಿಕ್ಕಾಪಟ್ಟೆ ಬಿಝಿಯಾಗಿದ್ದರು. ಅದರಲ್ಲೂ ಕವಲುದಾರಿ ನಂತರ ರಿಷಿಗೆ ಸಿಗುತ್ತಿರುವ ಪಾತ್ರಗಳು ಡಿಫ್ರೆಂಟ್ ಆಗಿವೆ. ಅದರಂತೆ ಈ ಹೊಸ ಚಿತ್ರದಲ್ಲಿ ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಈ ಕಥೆಯನ್ನು ಯೋಗರಾಜ್ ಭಟ್ಟರು ಬರೆದಿದ್ದಾರೆ. ರಚಿತಾ ರಾಮ್ ಕೂಡಾ ಇತ್ತೀಚೆಗೆ ಹೊಸ ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಅವರು ಎನ್‌ಆರ್‌ಐ ಆಗಿರುತ್ತಾರಂತೆ.

ಭಟ್ಟರ ಶಿಷ್ಯ ಮೋಹನ್ ಸಿಂಗ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಟಗರು, ಸಲಗ, ಮದಗಜ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಮಾಸ್ತಿ ಈ ಹೊಸ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ. ರಿಷಿ ಸದ್ಯ ಮದುವೆ ಬಿಝಿಯಲ್ಲಿದ್ದು, ಅದು ಮುಗಿದ ನಂತರ ಈ ಚಿತ್ರ ಆರಂಭವಾಗಲಿದೆ.

Continue Reading