Cinema News
ಎ.ಪಿ ಅರ್ಜುನ್ ಕನಸಿನ ಕೂಸು ‘ಕಿಸ್’ ಸೆ. 27ಕ್ಕೆ ತೆರೆಗೆ
 
																								
												
												
											 
ಹಾಡುಗಳು ಮತ್ತು ಟ್ರೇಲರ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹವಾ ಎಬ್ಬಿಸಿರುವ ಕಿಸ್ ಸಿನಿಮಾ ಇದೇ 27ಕ್ಕೆ ರಿಲೀಸ್ ಆಗಲಿದೆ.
ಅದ್ದೂರಿ, ಅಂಬಾರಿ ಸಿನಿಮಾಗಳ ಮೂಲಕ ಸ್ಟಾರ್ ನಿರ್ದೇಶಕ ಎಂದು ಹೆಸರು ಮಾಡಿರುವ ಎ ಪಿ ಅರ್ಜುನ್ ಈ ಬಾರಿಯೂ ಹೊಸ ವಿರಾಟ್ ಮತ್ತು ಶ್ರೀಲೀಲಾ ಎಂಬ ಹೊಸ ನಟ ನಟಿಯರನ್ನು ಇಟ್ಟುಕೊಂಡು ತೆರೆ ಮೇಲೆ ಬರಲಿದ್ದಾರೆ.
ಈಗಾಗಲೇ ಸಿನಿಮಾದ ಶೀಲಾ , ನೀನೇ ಮೊದಲು, ಸಮಾದಾನಮಾಡ್ಕೋ ಹಾಡುಗಳು ಸೂಪರ್ ಹಿಟ್ ಆಗಿವೆ. ಸಿನಿಮಾದ ಟ್ರೇಲರ್ನ್ನು ನೋಡಿದ ಜನ ಇದೊಂದು ಯೂತ್ಫುಲ್ ಸಿನಿಮಾ ಎನ್ನುತ್ತಿದ್ದಾರೆ. ಆದರೆ ಚಿತ್ರ ಎಲ್ಲರಿಗೂ ಇಷ್ಟವಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ಅರ್ಜುನ್. ಒಟ್ಟಿನಲ್ಲಿ ಕಿಸ್ ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಜಯಣ್ಣ ವಿತರಣೆ ಮಾಡಲಿದ್ದಾರೆ.

 
 
																	
																															
															Continue Reading
														
																																																																																																
															 
			 
											 
											 
											 
											 
											 
											 
											 
											