Cinema News
‘ಕಬ್ಜ’ದಲ್ಲಿ ಉಪೇಂದ್ರ ದೊಡ್ಡ ಡಾನ್
 
																								
												
												
											 
ಕಬ್ಜದಲ್ಲಿ ಉಪೇಂದ್ರ ದೊಡ್ಡ ಡಾನ್ :
ಐ ಲವ್ ಯೂ ಸಿನಿಮಾ ಮೂಲಕ ಸಕ್ಸಸ್ ಜೊಡಿ ಎಂದೇ ಹೆಸರು ಮಾಡಿದ ನಟ ಉಪೇಂದ್ರ ಮತ್ತು ನಿರ್ದೇಶಕ ಚಂದ್ರು ಈಗ ಮತ್ತೆ ಒಂದಾಗಿದ್ದು ಅದಕ್ಕೆ ಕಬ್ಜ ಎಂಬ ವಿಶಿಷ್ಟ ಟೈಟಲ್ ಇಟ್ಟಿದ್ದಾರೆ .
ಐಲವ್ ಯೂ ಸಿನಿಮಾ ಸೂಪರ್ ಹಿಟ್ ಆದ ಕೂಡಲೇ ಚಂದ್ರು ಅವರಿಗೆ ಡಿಮಾಂಡ್ ಹೆಚ್ಚಾಗಿದೆ. ಆದರೆ ಅವರು ಉಪೇಂದ್ರ ಅವರಿಗಾಗಿ ಹೊಸ ರೀತಿಯ ಕಥೆ ಬರೆದುಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಚಂದ್ರು, ಉಪ್ಪಿ ಕಾಂಬಿನೇಶನ್‌ನ ಈ ಕಬ್ಜದಲ್ಲಿ ಓಂ ರೀತಿಯ ರೌಡಿಂ ಕಥೆ ಇದೆಯಂತೆ. ಜತೆಗೆ ಈ ಕಥೆ ಭಾರತೀಯ ಭೂಗತ ಜಗತ್ತಿನ ಡಾನ್‌ಗೆ ಹೊಲಿಕೆಯಾಗಲಿದೆಯಂತೆ.

ಇನ್ನು ಚಂದ್ರು ಈ ಬಾರಿ ಏಳು ಭಾಷೆಗಳಲ್ಲಿ ಸಿನಿಮಾ ಮಾಡಲು ಪ್ಲಾನ್ ಮಾಡಿದ್ದಾರಂತೆ. ಈಗಾಗಲೇ ಎಲ್ಲ ಭಾಷೆಗಳ ನಿರ್ಮಾಣ ಸಂಸ್ಥೆಯನ್ನು ಅವರು ಸಂಪರ್ಕ ಮಾಡಿದ್ದಾರೆ. ಹಾಗಾಗಿ ಸಿನಿಮಾಗೆ ಹೆಸರಾಂತ ನಟಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರಂತೆ. ಒಟ್ಟಿನಲ್ಲಿ ಚಂದ್ರು ಮತ್ತು ಉಪ್ಪಿ ಕಾಂಬಿನೇಶನ್ ಕಬ್ಜ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ.
 
 
																	
																															 
			 
											 
											 
											 
											 
											 
											 
											 
											