Cinema News
ಗಾಳಿಪಟಕ್ಕೆ ಪರಿಹಾರವಾಗಿ ಶರಣ್‌ಗೆ ಸಿನಿಮಾ ಮಾಡ್ತಾರೆ ಭಟ್ಟರು
 
																								
												
												
											 
“ಅಮೇರಿಕಾ ಇನ್ ಅಧ್ಯಕ್ಷ “ ಸಿನಿಮಾದ ರಿಲೀಸ್ ಬಿಝಿಯಲ್ಲಿರುವ ನಟ ಶರಣ್ ಯೋಗರಾಜ್ ಭಟ್ಟರ ಸಿನಿಮಾವೊಂದರಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ.
ಈ ಹಿಂದೆ ಭಟ್ಟರ ಜತೆ ಗಾಳಿಪಟದಲ್ಲಿ ಅವರು ನಟಿಸಬೇಕಿತ್ತು. ಆದರೆ ಆ ಸಿನಿಮಾದಿಂದ ಅವರು ಹೊರಬಂದಿದ್ದು, ಅವರ ಜಾಗಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಬಂದಿದ್ದಾರೆ. ಹಾಗಾಗಿ ಭಟ್ಟರು ಶರಣ್ ಜತೆ ಹೊಸ ಸಿನಿಮಾವನ್ನು ಮಾಡಲಿದ್ದಾರೆ ಎನ್ನುತ್ತಾರೆ ಭಟ್ಟರ ಆಪ್ತರು. ಅದನ್ನು ಯೋಗರಾಜ್ ಭಟ್ಟರು ಸಹ ಎಲ್ಲ ಮಾದ್ಯಮದವರಿಗೂ ತಿಳಿಸಿದ್ದಾರೆ.

ಗಾಳಿಪಟ-2 ಸಿನಿಮಾ ಪ್ರೆಸ್‌ಮೀಟ್‌ನ್ನು ಅದ್ಧೂರಿಯಾಗಿ ಮಾಡಿದ ಭಟ್ಟರು ಅಂದು ಶರಣ್ ಅವರೇ ನಾಯಕರು ಮತ್ತು ಈ ಸಿನಿಮಾವಾಗಲು ಅವರೇ ಕಾರಣಕರ್ತರು ಎಂದಿದ್ದರು. ಈಗ ಶರಣ್ ಜಾಗಕ್ಕೆ ಗಣೇಶ್ ಬಂದಾಗಿದೆ. ಹಾಗಾಗಿ ಶರಣ್‌ಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ಹೊಸ ಶರಣ್ ಅವರ ನಾಯಕತ್ವದಲ್ಲಿಯೇ ಒಂದು ಸಿನಿಮಾ ಮಾಡುವುದಾಗಿ ಹೇಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನು ರಿಷಿಯ ಜಾಗಕ್ಕೆ ಗಾಳಿಪಟದಲ್ಲಿ ದಿಗಂತ್ ಬಂದಿದ್ದಾರೆ.
ಗಾಳಿಪಟ-2 ನಂತರ ಯೋಗರಾಜ್ ಭಟ್ ಮತ್ತು ಶರಣ್ ಕಾಂಬಿನೇಶನ್‌ನ ಸಿನಿಮಾ ಆರಂಭವಾಗಲಿದೆಯಂತೆ. ವಿಶೇಷ ಎಂದರೆ ಗಾಳಿಪಟ-2 ಚಿತ್ರವನ್ನು ನಿರ್ಮಾಣ ಮಾಡುವ ಮಹೇಶ್ ದಾನನ್ನನವರ್ ಅವರೇ ಶರಣ್ ಮತ್ತು ಭಟ್ಟರ ಕಾಂಬಿನೇಶನ್‌ನ ಸಿನಿಮಾಗೂ ಬಂಡವಾಳ ಹೂಡಲಿದ್ದಾರೆ. ಒಟ್ಟಿನಲ್ಲಿ ಭಟ್ಟರು ಇನ್ನೆರೆಡು ವರ್ಷ ಬಿಝಿ ಅಂತೂ ಇರ್ತಾರೆ.
 
 
																	
																															 
			 
											 
											 
											 
											 
											 
											 
											 
											