Cinema News
‘ಕಾಣದಂತೆ ಮಾಯವಾದನು’ ಟ್ರೇಲರ್ ಸೂಪರ್ ಹಿಟ್
 
																								
												
												
											 
ಕ್ಯಾರೆಕ್ಟರ್ ಪ್ರೋಮೋ ಮೂಲಕ ಸದ್ದು ಮಾಡಿದ್ದ ಕಾಣದಂತೆ ಮಾಯವಾದನು ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾರರ್ ಮಿಶ್ರಿತ ಅಕ್ಷ್ಯನ್ ಚಿತ್ರವೂ ಇದಾಗಿದ್ದು, ಮುಂದಿನ ತಿಂಗಳು ತೆರೆಗೆ ಬರಲಿದೆ.

ಜಯಮ್ಮನ ಮಗ ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿಕಾಸ್ ನಾಯಕ ನಟನಾಗಿ ನಟಿಸಿರುವ ಈ ಸಿನಿಮಾವನ್ನು ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದಾರೆ. ಕಾಣದಂತೆ ಮಾಯವಾದನು ಸಿನಿಮಾ ಹಾರರ್ ಕಾಮಿಡಿಯ ಕಥೆಯನ್ನುಹೊಂದಿದೆ. ಮಾಸ್ತಿಗುಡಿ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ನಟಿಸಿರೋ ಕಡೆಯ ಚಿತ್ರವಿದು.
ಧರ್ಮಣ್ಣ ಕಡೂರು ಈ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸಿದ್ದಾರೆ. ಸದ್ಯದಲ್ಲೆ ಬಿಡುಗಡೆಗೆ ತಯಾರಾಗಿರುವ ಈ ಸಿನಿಮಾದ ಟ್ರೇಲರ್ ಮೂಲಕವೇ ಸದ್ದು ಮಾಡುತ್ತಿದೆ.


 
 
																	
																															
															Continue Reading
														
																																																																																																
															 
			 
											 
											 
											 
											 
											 
											 
											 
											