Connect with us

Cinema News

ವಿಶ್ವಾಸಂ, ಕಬಾಲಿಗೆ ಕೆಲಸಮಾಡಿದ ತಂತ್ರಜ್ಞ ಕನ್ನಡಕ್ಕೆ

Published

on

ತಮಿಳಿನ ಸೂಪರ್‌ ಹಿಟ್‌ ಚಿತ್ರಗಳಾದ ವಿಶ್ವಾಸಂ, ಕಬಾಲಿ, ವಿಸಾರಣೈ ಸೇರಿದಂತೆ ಇನ್ನೂ ಹೆಚ್ಚಿನ ಸಿನಿಮಾಗಳಿಗೆ ಅಟ್ಮಾಸ್‌ಸೌಂಡ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದ ಉದಯ್‌ಕುಮಾರ್‌ ದೇವಕಿ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮಮ್ಮಿ ಸಿನಿಮಾದ ಯಶಸ್ವಿ ಜೋಡಿ ಪ್ರಿಯಾಂಕ ಉಪೇಂದ್ರ ಮತ್ತು ಲೋಹಿತ್‌ ದೇವಕಿ ಮೂಲಕ ಎರಡನೇ ಬಾರಿಗೆ ಒಂದಾಗಿದ್ದು, ಈಗಾಗಲೇ ಟ್ರೆಲರ್‌ ಮತ್ತು ಮೇಕಿಂಗ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇನ್ನು ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯನ್ನು ಹೊಂದಿರುವ ಸಿನಿಮಾ. ಈ ಸಿನಿಮಾಗೆ ಚೆನ್ನೈನ ಖ್ಯಾತ ಸೌಂಡ್‌ ಎಂಜಿನಿಯರ್‌ ಕೆಲಸ ಮಾಡಿದ್ದಾರೆ. ಇವರು ಈ ಹಿಂದೆ ದೊಡ್ಡ ಸಿನಿಮಾಗಳನ್ನು ಮಾಡಿದ್ದು, ಈಗ ಸಾಹೋ ಚಿತ್ರಕ್ಕೆ ಅಟ್ಮಾಸ್‌ ಸೌಂಡ್‌ ಮಾಡುತ್ತಿದ್ದಾರೆ.

ಉದಯ್‌ಕುಮಾರ್‌ ಅವರಂತಹ ಖ್ಯಾತ ಸೌಂಡ್‌ ಎಂಜಿನಿಯರ್‌ ನನ್ನ ಚಿತ್ರಕ್ಕೆ ಕೆಲಸ ಮಾಡಿರುವುದು ನನಗೆ ಖುಷಿ ಕೊಟ್ಟಿದೆ. ಈ ಸಿನಿಮಾದ ಸೌಂಡ್‌ನ್ನು ಜನ ನಿಜಕ್ಕೂ ಎಂಜಾಯ್‌ ಮಾಡುತ್ತಾರೆ ಎನ್ನುತ್ತಾರೆ ನಿರ್ದೇಶಕ ಲೋಹಿತ್‌.

ಈ ಚಿತ್ರ ಇದೇ ಶುಕ್ರವಾರ ಅಂದರೆ ಜುಲೈ 5ಕ್ಕೆ ಬಿಡುಗಡೆಯಾಗಲಿದೆ.

Spread the love

Continue Reading