Cinema News
‘ಸಿಂಗ’ನ ಖದರ್ ಟ್ರೇಲರ್‌ನಲ್ಲಿ ಅನಾವರಣ
 
																								
												
												
											 
ಚಿರಂಜೀವಿ ಸರ್ಜಾ ನಟನೆಯ ಸಿಂಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲಿ ಚಿರು ಸಖತ್ ಮಾಸ್ ಶೈಲಿಯಲ್ಲಿ ಮಿಂಚಿದ್ದಾರೆ.
ಈ ಹಿಂದೆ ರಾಮ್ ಲೀಲಾ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ಸಿಂಗ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ಯಾನೇ ಟಾಪಗವ್ಳೆ ಎಂಬ ಹಾಡಿನ ಮೂಲಕ ಇದು ಲವ್ ಸ್ಟೋರಿ ಇರಬಹುದು ಎಂದು ಯೋಚಿಸಿದ್ದವರಿಗೆ, ಟ್ರೇಲರ್‌ನಲ್ಲಿ ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬುದು ಗೊತ್ತಾಗಿದೆ.
ಇದರಲ್ಲಿ ರವಿಶಂಕರ್, ಬಿ ಸುರೇಶ, ತಾರಾ, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ದೊಡ್ಡ ತಾರಾಬಳಗವೇ ಇದ್ದು, ಜುಲೈ 18 ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.
ಈಗಾಗಲೇ ಸೆನ್ಸಾರ್ ಮುಗಿದಿದ್ದು, ಯು/ಎ ಪ್ರಮಾಣ ಪತ್ರ ಸಹ ಸಿಕ್ಕಿದೆ. ಚಿರುಗೆ ಇದರಲ್ಲಿ ಆದಿತಿ ಪ್ರಭುದೇವ ಜೋಡಿಯಾಗಿ ನಟಿಸಿದ್ದಾರೆ. ಒಟ್ಟಿನಲ್ಲಿ ಜುಲೈನಲ್ಲಿ ಮಾಸ್ ಸಿಂಗನ ಅನಾವರಣ ಬೆಳ್ಳಿ ತೆರೆಯಲ್ಲಿ ಆಗಲಿದೆ
 
 
																	
																															
															Continue Reading
														
																																																																																																
															 
			 
											 
											 
											 
											 
											 
											 
											 
											