Connect with us

Cinema News

ನವರಾತ್ರಿಯ ಮೊದಲ ದಿನವೇ ‘ಗೆಜ್ಜೆ’ ಭಕ್ತಿಗೀತೆ ಅನಾವರಣ: ಮೂಕಾಂಬಿಕೆಯಾಗಿ ಅಂಕಿತಾ ಅಮರ್

Published

on

ನವರಾತ್ರಿಯ ಮೊದಲ ದಿನದ ಸಂಭ್ರಮಕ್ಕೆ ಭಕ್ತಿಯ ಮೆರುಗು ನೀಡುವ ಉದ್ದೇಶದಿಂದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಯ ಮಹಿಮೆಯನ್ನು ಸಾರುವ ‘ಗೆಜ್ಜೆ’ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಮಯೂರ ರಾಘವೇಂದ್ರ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರೂಪುಗೊಂಡಿರುವ ಈ ಗೀತೆ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ. ಕೊಲ್ಲೂರು ಮೂಕಾಂಬಿಕಾ ದೇವಿ ಹಾಗೂ ಆದಿ ಶಂಕರಾಚಾರ್ಯರಿಗೆ ಸಂಬಂಧಿಸಿದ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯನ್ನು ಆಧರಿಸಿ ಹಾಡನ್ನು ಸಿದ್ಧಪಡಿಸಲಾಗಿದೆ. ನಟಿ ಸುಧಾರಾಣಿ ಕಾರ್ಯಕ್ರಮದಲ್ಲಿ ಗೀತೆಯನ್ನು ಅನಾವರಣಗೊಳಿಸಿದರು. ಹಾಡಿನ ದೃಶ್ಯರೂಪ, ಸಂಗೀತ ಹಾಗೂ ನಿರ್ಮಾಣದ ಗುಣಮಟ್ಟವನ್ನು ಮೆಚ್ಚಿಕೊಂಡ ಅವರು, ವೀಕ್ಷಿಸುವಾಗ ರೋಮಾಂಚನವಾಯಿತು ಎಂದು ಸಂತಸ ವ್ಯಕ್ತಪಡಿಸಿದರು. ನಿರ್ದೇಶಕ ಮಯೂರ ರಾಘವೇಂದ್ರ ಮುಂದಿನ ದಿನಗಳಲ್ಲಿಯೂ ಇಂತಹ ಉತ್ತಮ ಪ್ರಯತ್ನಗಳನ್ನು ಮುಂದುವರಿಸಲಿ ಎಂದು ಹಾರೈಸಿದರು. ನಟ ಹಾಗೂ ನಿರೂಪಕ ಸಿಹಿಕಹಿ ಚಂದ್ರು ಕೂಡ ಹಾಡು ಮತ್ತು ಕಲಾವಿದರ ತಂಡದ ಕೆಲಸವನ್ನು ಪ್ರಶಂಸಿಸಿದರು.

‘ಗೆಜ್ಜೆ’ ಗೀತೆಯ ಹಿಂದೆ ಸುಮಾರು ಹತ್ತು ತಿಂಗಳ ಪರಿಶ್ರಮವಿದೆ. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರೂಪುಗೊಂಡಿರುವ ಈ ಭಕ್ತಿಗೀತೆಯ ಮೂಲಕ ಮೂಕಾಂಬಿಕಾ ದೇವಿಯ ಮಹಿಮೆ ಹಾಗೂ ಶಂಕರಾಚಾರ್ಯರೊಂದಿಗಿನ ಆಧ್ಯಾತ್ಮಿಕ ನಂಟನ್ನು ದೃಶ್ಯಗಳ ಮೂಲಕ ಕಟ್ಟಿಕೊಡಲಾಗಿದೆ. ಯೋಜನೆಯ ಹುಟ್ಟಿನ ಬಗ್ಗೆ ಮಾತನಾಡಿದ ನಿರ್ದೇಶಕ ಮಯೂರ ರಾಘವೇಂದ್ರ, ಕಳೆದ 25 ವರ್ಷಗಳಿಂದ ತಾವು ಕೊಲ್ಲೂರು ಮೂಕಾಂಬಿಕಾ ದೇವಿಯ ಭಕ್ತರಾಗಿದ್ದು, ಪ್ರತಿವರ್ಷ ಹಲವು ಬಾರಿ ದೇವಾಲಯಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. ಪ್ರತಿ ಭೇಟಿಯ ಸಂದರ್ಭದಲ್ಲೂ ದೇವಿ ಮತ್ತು ಶಂಕರಾಚಾರ್ಯರ ಕುರಿತು ಒಂದು ವಿಶೇಷ ಕೃತಿ ರೂಪಿಸಬೇಕೆಂಬ ಹಂಬಲ ಮೂಡುತ್ತಿತ್ತು. ಸುಮಾರು ಹತ್ತು ತಿಂಗಳ ಹಿಂದೆ ದೇವಿಯ ದರ್ಶನಕ್ಕೆ ತೆರಳಿದ್ದಾಗ ಈ ಗೀತೆಯನ್ನು ನಿರ್ಮಿಸುವ ಆಲೋಚನೆಗೆ ಪ್ರೇರಣೆ ದೊರೆಯಿತು. ಬಳಿಕ ತಮ್ಮ ಯೋಚನೆಯನ್ನು ಸುನೀಲ್ ಕುಮಾರ್ ರಾಮಚಂದ್ರ ಅವರೊಂದಿಗೆ ಹಂಚಿಕೊಂಡಾಗ, ಅವರು ನಿರ್ಮಾಣದ ಹೊಣೆ ಹೊತ್ತುಕೊಳ್ಳಲು ಮುಂದೆ ಬಂದರು ಎಂದು ವಿವರಿಸಿದರು.

ಚಿತ್ರದ ಸಂಗೀತದ ಜವಾಬ್ದಾರಿಗಾಗಿ ‘ಶಾಕಾಹಾರಿ’ ಚಿತ್ರದ ಸಂಗೀತ ಇಷ್ಟವಾಗಿದ್ದ ಹಿನ್ನೆಲೆಯಲ್ಲಿ ಮಯೂರ ಅಂಬೆಕಲ್ಲು ಅವರನ್ನು ಸಂಪರ್ಕಿಸಲಾಯಿತು. ಅವರ ಸಹಕಾರದೊಂದಿಗೆ ಗೀತೆ ರೂಪುಗೊಂಡಿದ್ದು, ಮತ್ತೊಬ್ಬ ಮಯೂರ ಸಾಹಿತ್ಯ ರಚಿಸಿದ್ದಾರೆ. ‘ಕರಾವಳಿ’ ಚಿತ್ರದ ಛಾಯಾಗ್ರಹಣಕ್ಕಾಗಿ ಗುರುತಿಸಿಕೊಂಡಿರುವ ಅಭಿಮನ್ಯು ಸದಾನಂದನ್ ಈ ಹಾಡಿಗೆ ಕ್ಯಾಮೆರಾ ಹಿಡಿದಿದ್ದಾರೆ. ಅರ್ಚನಾ ಅವರ ವಸ್ತ್ರವಿನ್ಯಾಸ ಗೀತೆಯ ದೃಶ್ಯ ವೈಭವಕ್ಕೆ ಮೆರುಗು ನೀಡಿದೆ. ಶ್ರೇಯಸ್ ವಸಿಷ್ಠ, ಸಮೀರ ಸಿಂಹ ಹಾಗೂ ಶೋಭನ್ ಸೇರಿದಂತೆ ಹಲವರ ಸಹಕಾರದಿಂದ ಯೋಜನೆ ಸಾಕಾರಗೊಂಡಿದೆ. ಮೂಕಾಂಬಿಕಾ ದೇವಿಯ ಪಾತ್ರಕ್ಕೆ ಅಂಕಿತಾ ಅಮರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಆದಿ ಶಂಕರಾಚಾರ್ಯರ ಪಾತ್ರದಲ್ಲಿ ಅಭಿನಯಿಸಲು ಚಂಡೀಗಢದ ಭರತ್ ಗುಪ್ತ ಅವರನ್ನು ಆಯ್ಕೆ ಮಾಡಲಾಯಿತು. ನವರಾತ್ರಿಯ ಮೊದಲ ದಿನವೇ ಹೊಂಬಾಳೆ ಮ್ಯೂಸಿಕ್ ಮೂಲಕ ಹಾಡು ಬಿಡುಗಡೆಯಾಗಿರುವುದು ತಮಗೆ ವಿಶೇಷ ಸಂತಸ ತಂದಿದೆ ಎಂದು ಮಯೂರ ರಾಘವೇಂದ್ರ ಹೇಳಿದರು.

ಮೂಕಾಂಬಿಕಾ ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಂಕಿತಾ ಅಮರ್, ಈ ಅವಕಾಶವನ್ನು ದೇವಿಯ ಕೃಪೆಯೆಂದೇ ಭಾವಿಸುವುದಾಗಿ ತಿಳಿಸಿದರು. ಶಾರದಾಂಬೆಯ ಮೇಲೆ ತಮಗೆ ಅಪಾರ ಭಕ್ತಿಯಿದ್ದು, ಪಾತ್ರ ನಿರ್ವಹಿಸುವಾಗ ದೇವಿಯನ್ನು ಸ್ಮರಿಸಿಕೊಂಡೇ ಅಭಿನಯಿಸಿರುವುದಾಗಿ ಹೇಳಿದರು. ಹಾಡಿನ ಸಾಹಿತ್ಯ, ಸಂಗೀತ ಮತ್ತು ದೃಶ್ಯರೂಪ ತಮಗೆ ಬಹಳ ಇಷ್ಟವಾಗಿದ್ದು, ಪ್ರೇಕ್ಷಕರೂ ಅದೇ ರೀತಿಯ ಸಂತೋಷವನ್ನು ಅನುಭವಿಸಲಿ ಎಂದು ಆಶಿಸಿದರು. ನವರಾತ್ರಿಯ ಹತ್ತು ದಿನಗಳ ಕಾಲ ಮನೆಮನೆಗಳಲ್ಲಿ ಈ ಭಕ್ತಿಗೀತೆ ಮೊಳಗಲಿ ಎಂಬುದು ಅವರ ಹಾರೈಕೆ. ಗೀತೆಗೆ ಸಂಗೀತ ಸಂಯೋಜಿಸಿರುವ ಮಯೂರ ಅಂಬೆಕಲ್ಲು ಮಾತನಾಡಿ, ಈ ಯೋಜನೆಯನ್ನು ತಾವು ರೂಪಿಸಿದ್ದಕ್ಕಿಂತ ದೇವಿಯೇ ತಮ್ಮ ಮೂಲಕ ಮಾಡಿಸಿಕೊಂಡಿದ್ದಾಳೆ ಎಂಬ ಭಾವನೆ ಮೂಡಿದೆ ಎಂದರು. ಹಾಡನ್ನು ಲೈವ್ ರೆಕಾರ್ಡಿಂಗ್ ವಿಧಾನದಲ್ಲಿ ಸಿದ್ಧಪಡಿಸಿರುವುದನ್ನೂ ಅವರು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಂಕಲನಕಾರ ರಾಹುಲ್ ವಶಿಷ್ಟ ಹಾಗೂ ಛಾಯಾಗ್ರಾಹಕ ಅಭಿಮನ್ಯು ಸದಾನಂದನ್ ಉಪಸ್ಥಿತರಿದ್ದರು. ಭಕ್ತಿ, ಸಂಗೀತ ಮತ್ತು ಪೌರಾಣಿಕ ಹಿನ್ನೆಲೆಯ ಸಂಗಮವಾಗಿರುವ ‘ಗೆಜ್ಜೆ’ ನವರಾತ್ರಿ ಸಂದರ್ಭದಲ್ಲಿ ಭಕ್ತರ ಮನಸ್ಸಿಗೆ ಹತ್ತಿರವಾಗುವ ನಿರೀಕ್ಷೆಯಿದೆ.

Spread the love

Continue Reading